ಬ್ಯಾಂಕ್ ನ ಸೆವಿಂಗ್ಸ್ ಅಕೌಂಟ್ ಅಥವಾ ಫಿಕ್ಸೆಡ್ ಡಿಪಾಸಿಟ್ ಹೊಂದಿದ್ದ ವ್ಯಕ್ತಿ ಸಾವಿಗೀಡಾದಾಗ ಯಾರಿಗೆ ಹಣ ಸಂದಾಯಮಾಡಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಗೊಂದಲ ನಿವಾರಣೆಗೆ ಯಾವ ಕ್ರಮಗಳಿವೆ? ನಾಮಿನಿ ಮತ್ತು ಉತ್ತರಾಧಿಕಾರಿ ನಡುವೆ ಕಿತ್ತಾಟ ಎದುರಾದರೆ ಪರಿಹಾರವೇನು? ಎಂಬ ಸಂಗತಿಗಳಿಗೆ ಉತ್ತರ ಕಂಡುಕೊಳ್ಳುವುದು ಮುಖ್ಯವಾಗುತ್ತದೆ.
ಉದಾಹರಣೆಗೆ, ನಿರ್ದಿಷ್ಟ ಬ್ಯಾಂಕ್ ವೊಂದರಲ್ಲಿ ಡಿಪಾಸಿಟ್ ಇಟ್ಟ ವ್ಯಕ್ತಿ ಆಕಸ್ಮಿಕ ಸಾವಿಗೀಡಾಗುತ್ತಾನೆ. ಆತ ಫಿಕ್ಸೆಡ್ ಡೆಪಾಸಿಟ್ ಗೆ ತನ್ನ ಹೆಂಡತಿಯನ್ನು ನಾಮಿನಿ ಮಾಡಿರುತ್ತಾನೆ. ಸಾವಿನ ನಂತರ ಆತನ ಮಗನಿಗೂ ಫಿಕ್ಸೆಡ್ ಡಿಪಾಸಿಟ್ ಮೇಲೆ ಹಕ್ಕು ಬರುವುದರಿಂದ ಬ್ಯಾಂಕ್ ಹಣವನ್ನು ಯಾರಿಗೆ ನೀಡಬೇಕು ಎಂಬ ಗೊಂದಲಕ್ಕೆ ಒಳಗಾಗಬೇಕಾಗುತ್ತದೆ.[ಯಾವ ಯಾವ ಗಿಫ್ಟ್ ಸ್ವೀಕರಿಸಿದರೆ ತೆರಿಗೆ ಕಟ್ಟಬೇಕಾಗುತ್ತದೆ?]

ನಾಮಿನಿ ಮತ್ತು ಉತ್ತರಾಧಿಕಾರಿ
ಹಣ ಇಡುವ ವೇಳೆ, ನನಗೆ ಆಕಸ್ಮಿಕವಾಗಿ ಏನಾದರೂ ಆದರೆ ಹಣ ಇಂಥವರಿಗೆ ಸಂದಾಯವಾಗಬೇಕು ಎಂದು ಸೂಚಿಸಿದವರ ಹೆಸರೇ ನಾಮಿನಿ, ಇದು ಹೆಂಡತಿ, ಮಕ್ಕಳು ಯಾರೇ ಆಗಿರಬಹುದು. ವ್ಯಕ್ತಿಯ ಸಾವಿನ ನಂತರ ಆತನ ಆಸ್ತಿಯ ಮೇಲೆ ಮಕ್ಕಳಿಗೆ ತನ್ನಿಂದ ತಾನೇ ಹಕ್ಕು ದೊರೆಯುತ್ತದೆ ಇವರನ್ನು ಉತ್ತರಾಧಿಕಾರಿ ಎಂದು ಕರೆಲಾಗುತ್ತದೆ.
ಹಾಗಾದರೆ ಬ್ಯಾಂಕ್ ಏನು ಮಾಡಬಹುದು?
ಮೊದಲನೆಯದಾಗಿ ಉತ್ತರಾಧಿಕಾರಿಗೆ ತನ್ನ ಹಕ್ಕು ದೃಢಪಡಿಸಲು ಕೋರ್ಟ್ ಆರ್ಡರ್ ತರುವಂತೆ ಬ್ಯಾಂಕ್ ಸೂಚಿಸಬಹುದು. ಇದನ್ನು ಹಾಜರುಪಡಿಸಿದರೆ ನಾಮಿನಿಗೆ ಹಣ ಸಂದಾಯವಾಗದಂತೆ ಇಂಜೆಕ್ಷನ್ ತರಲು ಉತ್ತರಾಧಿಕಾರಿಗೆ ಸಾಧ್ಯವಿದೆ.
ಉತ್ತರಾಧಿಕಾರಿ ಎಂಬುವರು ಯಾರೂ ಇಲ್ಲದಿದ್ದರೆ ಅಥವಾ ಸಾವಿಗೀಡಾದವನ ಮಗನೇ ನಾಮಿನಿಯಾಗಿದ್ದರೆ ಸಮಸ್ಯೆ ಉದ್ಭವಿಸಲ್ಲ. ಬ್ಯಾಂಕ್ ಸುಲಭವಾಗಿ ಹಣ ಸಂದಾಯ ಮಾಡಬಹುದು. ಡಿಕ್ರೀ, ಕೋರ್ಟ್ ಆರ್ಡರ್ ಇನ್ನುಳಿದ ಉತ್ತರಾಧಿಕಾರತ್ವ ಸಾರುವ ಆದೇಶಗಳು ಬ್ಯಾಂಕ್ ಗೆ ಲಭ್ಯವಾದರೆ ಸಮಸ್ಯೆ ಪರಿಹಾರ ಸಾಧ್ಯ.
ಈ ರೀತಿಯ ಗೊಂದಲಗಳನ್ನು ಬ್ಯಾಂಕ್ ಗಳು ಎದುರಿಸುತ್ತಲೇ ಇರಬೇಕಾಗುತ್ತದೆ. ದೊಡ್ಡ ಮೊತ್ತದ ಹಣ ಸಂದಾಯಮಾಡಬೇಕಿದ್ದರೆ ಬ್ಯಾಂಕ್ ಗಳು ಎಷ್ಟು ಎಚ್ಚರಿಕೆ ವಹಿಸಿದರೂ ಸಾಕಾಗುವುದಿಲ್ಲ. ಜತೆಗೆ ಕಾನೂನು ಪಂಡಿತರ ನೆರವನ್ನು ಪಡೆದುಕೊಳ್ಳಬೇಕಾಗುತ್ತದೆ. ಅಧಿಕೃತ ದಾಖಲೆಗಳಿಲ್ಲದೇ ಹಣ ನೀಡಿದರೆ ಬ್ಯಾಂಕ್ ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ.


Click it and Unblock the Notifications