ಕಳ್ಳತನ ವಿಮೆಗೆ ಒಳಪಡುವ ವಸ್ತುಗಳು ಯಾವವು?

ಕಳ್ಳತನ ಪ್ರತಿಬಂಧಕ ವಿಮೆ ನಿಮಗೆ ಅನುಕೂಲಕಾರಿಯಾಗಿದ್ದು ಹಣಕಾಸು ಮುಗ್ಗಟ್ಟಿಗೆ ಸಿಲುಕದಂತೆ ನೋಡಿಕೊಳ್ಳುತ್ತದೆ. ಮನೆ ಅಥವಾ ಕಚೇರಿಯಲ್ಲಿನ ವಸ್ತುಗಳು ಈ ವಿಮೆ ವ್ಯಾಪ್ತಿಗೆ ಒಳಪಡುತ್ತವೆ.

ಕೆಲವೊಮ್ಮೆ ನಡೆಯುವ ಕಳ್ಳತನಗಳು ನಮ್ಮ ಭವಿಷ್ಯಕ್ಕೆ ಅಂಧಕಾರ ತರಬಹುದು. ಹಾಗಾಗಿ ವಿಮೆ ಮಾಡಿಸಿಕೊಳ್ಳುವುದು ಉತ್ತಮ. ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಕಳ್ಳತನವಾದರೆ ಅಥವಾ ಕಳ್ಳತನ ಮಾಡಲು ಪ್ರಯತ್ನಿಸಿ ವಸ್ತುಗಳಿಗೆ ಹಾನಿಯಾದರೆ ವಿಮೆ ಸಂಪೂರ್ಣ ವೆಚ್ಚವನ್ನು ಭರಿಸುತ್ತದೆ.[ಆನುವಂಶಿಕ ಆಸ್ತಿ ಪಡೆವ ಮುನ್ನ ಏಳು ಹೆಜ್ಜೆಗಳು]

ಕಳ್ಳತನ ವಿಮೆಗೆ ಒಳಪಡುವ ವಸ್ತುಗಳು ಯಾವವು?

ಆದರೆ ಹಣ ಎಲ್ಲಿ ಇಡುತ್ತೇವೆ? ಎಷ್ಟು ವ್ಯವಹಾರ ನಡೆಯುತ್ತದೆ? ಮನೆಯಲ್ಲಿರುವ ಒಡವೆಗಳೆಷ್ಟು? ಫೀಠೋಪಕರಣಗಳು ಯಾವವು? ಮುಂತಾದ ವಿವರಗಳನ್ನು ಸಲ್ಲಿಸಿರಬೇಕಾಗುತ್ತದೆ. ಇದೇ ಆಧಾರದಲ್ಲಿ ನಿಮ್ಮ ವಿಮಾ ಪರಿಹಾರದ ಮೊತ್ತ ಸಹ ನಿರ್ಧರಿತವಾಗುತ್ತದೆ.

ಅಲ್ಲದೇ ವಿಮೆ ಮಾಡಿಸುವಾಗ ನಿಲ್ಲ ಎಲ್ಲ ಆಸ್ತಿಗಳು ಒಳಪಟ್ಟಿವೆಯೇ? ಎಂಬುದನ್ನು ಗಮನಿಸಿಕೊಳ್ಳಬೇಕಾಗುತ್ತದೆ. ಅಲ್ಲದೇ ಗಲಭೆ, ಪ್ರತಿಭಟನೆಯಿಂದ ವಸ್ತುಗಳು ಡ್ಯಾಮೇಜ್ ಆದರೂ ಈ ವಿಮೆ ಪರಿಹಾರ ಒದಗಿಸಿಕೊಡುತ್ತದೆ.

ವಿಮೆಗೆ ಒಳಪಡದ ವಸ್ತುಗಳಾವವು?
ಟ್ರಸ್ಟ್‌ ಅಥವಾ ಸಮಿತಿಯ ಹೆಸರಿನಲ್ಲಿ ಇರುವ ವಸ್ತುಗಳು ಈ ವಿಮೆಯಡಿ ಬರುವುದಿಲ್ಲ. ಪ್ರಶಸ್ತಿ, ಪದಕಗಳು, ಪುಸ್ತಕಗಳು ಈ ವ್ಯಾಪ್ತಿಗೆ ಒಳಪಡಲ್ಲ
ಬೆಂಕಿ ಅನಾಹುತ, ಪ್ರತಿಭಟನೆ ಅಥವಾ ಪರಮಾಣು ಸಂಬಂಧಿ ಹಾನಿಯಾದರೆ ವಿಮೆ ಸೌಲಭ್ಯ ಸಿಗುವುದು ಕಷ್ಟ. ಇಲ್ಲಿ ಕೆಲ ನಿರ್ಬಂಧಗಳು ಎದುರಾಗುತ್ತವೆ. ಈ ವಿಮಾ ನೀಡಿಕೆ ಸೌಲಭ್ಯದ ಕೆಲ ರೀತಿ ನೀತಿಗಳು ಕಂಪನಿಯಿಂದ ಕಂಪನಿಗೆ ಬದಲಾಗುತ್ತವೆ.

ಕಳ್ಳತನದ ಪರಿಣಾಮ ಎಷ್ಟೋ ಕುಟುಂಬಗಳು ಬೀದಿಗೆ ಬಂದ ಉದಾಹರಣೆಗಳಿವೆ. ಮನೆಯಲ್ಲಿ ಒಬ್ಬರೇ ಇರುವುದು, ಮನೆಗೆ ಬೀಗ ಹಾಕಿ ತೀರ್ಥಯಾತ್ರೆಗೆ ತೆರಳುವಂಥ ಸಂದರ್ಭ ಅಥವಾ ಸುರಕ್ಷತೆಯ ಕೊರತೆಯಿದ್ದರೇ ಈ ವಿಮೆ ಮಾಡಿಸಿಕೊಳ್ಳುವುದು ಒಳ್ಳೆಯದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+