ಆನ್ ಲೈನ್ ಮುಖಾಂತರ ವ್ಯಕ್ತಿಗತವಾಗಿ ಆದಾಯ ತೆರಿಗೆ ಪಾವತಿ ಸಾಧ್ಯವಿದೆ. ಅದರಂತೆ ಹಣದ ಹೆಚ್ಚುವರಿ ಮೊತ್ತವನ್ನು ಹಿಂದಕ್ಕೆ ಪಡೆಯಲು 2 ವಿಧಾನಗಳಿವೆ. ಒಂದನೆಯದು ನೇರ ಪಾವತಿ. ಇಲ್ಲಿ ನಿಮ್ಮ ಖಾತೆಯ ಇಸಿಎಸ್, ಆರ್ ಟಿಜಿಎಸ್, ಎನ್ ಇಎಫ್ ಟಿ ಅಂಕೆಗಳನ್ನು ಸರಿಯಾಗಿ ನಮೂದಿಸಿದ್ದರೆ ಮಾತ್ರ ಹಣ ಹಿಂದಕ್ಕೆ ಪಡೆಯಲು ಸಾಧ್ಯವಾಗುತ್ತದೆ. ಇಲ್ಲವೇ ಸ್ಪೀಡ್ ಪೋಸ್ಟ್ ಮೂಲಕವೂ ಹಿಂದಕ್ಕೆ ಪಡೆಯಬಹುದು.
ಕೆಲವೊಮ್ಮೆ ನೀವು ತೆರಿಗೆ ಪಾವತಿ ಮಾಡುವಾಗ ಒಂದು ವಿಳಾಸದಲ್ಲಿರುತ್ತೀರಿ. ಅನಿವಾರ್ಯ ಕಾರಣದಿಂದ ಸ್ಥಳ ಬದಲಾವಣೆ ಮಾಡಬೇಕಾಗುತ್ತದೆ. ಇದನ್ನು ನಿಮ್ಮ ಆದಾಯ ತೆರಿಗೆ ಪಾವತಿ ವೆಬ್ ಸೈಟ್ ಗೆ ಅಪ್ ಡೆಟ್ ಮಾಡಲು ಮರೆತುಬಿಡುತ್ತೀರಿ. ನಿಮ್ಮ ಹೆಸರಿನಲ್ಲಿ ಕಳಿಸಿದ ಚೆಕ್ ಹಳೆಯ ವಿಳಾಸವನ್ನು ತಲುಪುವುದು. ನಿಗದಿತ ವೇಳೆಗೆ ನಿಮ್ಮ ಕೈಗೆ ಚೆಕ್ ಸೇರಲ್ಲ. ಅದು ತನ್ನ ಅವಧಿಯನ್ನು ಕಳೆದುಕೊಳ್ಳುತ್ತದೆ.

ಇಂಥ ಸಂದರ್ಭ ಆ ಹಣವನ್ನು ಅಥವಾ ಚೆಕ್ ನ್ನು ಹೇಗೆ ವಾಪಸ್ ಪಡೆದುಕೊಳ್ಳಬಹುದು ಎಂಬುದನ್ನು ನೋಡೋಣ....
ರಿಫಂಡ್ ಪಡೆಯಲು ಇರುವ ನಿಯಮಾವಳಿಗಳು
1. ನಿಮ್ಮ ಯುಸರ್ ಐಡಿ ಮತ್ತು ಪಾಸ್ ವರ್ಡ್ ಬಳಸಿ ಆದಾಯ ತೆರಿಗೆ ಅಂತರ್ಜಾಲ ತಾಣಕ್ಕೆ ಪ್ರವೇಶ ಪಡೆಯಿರಿ
2. ಮೈ ಅಕೌಂಟ್ ಗೆ ಹೋಗಿ ರಿಫಂಡ್ ಆಯ್ಕೆ ಕ್ಲಿಕ್ ಮಾಡಿ
3. ಇಲ್ಲಿ ನೀವು ಕೆಲ ದಾಖಲೆಗಳಲನ್ನು ಭರ್ತಿ ಮಾಡಬೇಕಾಗುತ್ತದೆ. ಸಿಪಿಸಿ ರೆಫರೆನ್ಸ್ ನಂಬರ್, ರಿಫಂಡ್ ಅನುಕ್ರಮ ಸಂಖ್ಯೆ, ಜನ್ಮ ದಿನಾಂಕವನ್ನು ನಮೂದಿಸಬೇಕಾಗುತ್ತದೆ.
ಸಿಪಿಸಿ ಕಮ್ಯೂನಿಕೇಶನ್ ರೆಫರೆನ್ಸ್ ನಂಬರ್ ಪಡೆದುಕೊಳ್ಳಿ
ನಿಮಗೆ ಒಂದು ಇಲ್ಲಿ ಒಂದು ಸೂಚನೆ ದೊರೆಯಿತ್ತದೆ, ಯು/ಎಸ್ 143(1) ಅಥವಾ ಯು/ಎಸ್ 154 ರೆಕ್ಟಿಫಿಕೇಶನ್ (ಸುಧಾರಣೆ ವಿನಂತಿ) ಮೂಲಕ ನಿಮಗೆ ಮರು ಪಾವತಿ ಮಾಡಲು ಆಗದ್ದನ್ನು ಸಂಬಂಧಿಸಿದ ಐಟಿ ಇಲಾಖೆ ತಿಳಿಸುತ್ತದೆ. ಈ ಸೂಚನೆಯ ಮೊದಲನೇ ಪುಟದಲ್ಲಿ ನಿಮಗೆ ಸಿಪಿಸಿ ಕಮ್ಯೂನಿಕೇಶನ್ ನಂಬರ್ ದೊರೆಯುತ್ತದೆ. ಇದು ಸಾಮಾನ್ಯವಾಗಿ ಸಿಪಿಸಿ/1011/P2/xxxxxxxxxx ಮಾದರಿಯಲ್ಲಿರುತ್ತದೆ. "xxxxxxxxxx" ಅಂದರೆ 10 ಅಂಕೆಗಳಾಗಿದ್ದು ವೈಯಕ್ತಿಕವಾಗಿ ನೀಡಲ್ಪಡುತ್ತದೆ.
ರಿಫಂಡ್ ಅನುಕ್ರಮ ಸಂಖ್ಯೆ ಪಡೆದುಕೊಳ್ಳಿ
ಇದು ಸಹ ಹತ್ತು ಸಂಖ್ಯೆಗಳನ್ನು ಹೊಂದಿರುತ್ತದೆ. ಉದಾಹರಣೆಗೆ 1234567890 ಎಂದು ಇರಬಹುದು. ಇದನ್ನು ನೀವು ಸೂಚನೆಯ ಮೊದಲನೇ ಪುಟದಲ್ಲಿ ಪಡೆದುಕೊಳ್ಳಬಹುದಾಗಿದೆ. ಕೊನೆಯದಾಗಿ ನೀವು "Notes" ಆಯ್ಕೆಯ ಒಳಕ್ಕೆ ಹೋಗಿ "Refund Particulars" ಎಲ್ಲಿದೆ ಎಂಬುದನ್ನು ನೋಡಿಕೊಳ್ಳಬೇಕಾಗುತ್ತದೆ.
4. ಇದೆಲ್ಲ ಹಂತಗಳು ಮುಗಿದ ನಂತರ Validate ಬಟನ್ ಮೇಲೆ ಕ್ಲಿಕ್ ಮಾಡ ಬೇಕಾಗುತ್ತದೆ.
ಇಲ್ಲಿ ಮತ್ತೆ ಎರಡು ಆಯ್ಕೆಗಳು ಎದುರಾಗುತ್ತವೆ. ಇಸಿಎಸ್ ಅಥವಾ ಪೇಪರ್ ಯಾವುದರ ಮೂಲಕ ಮರುಪಾವತಿ ಮಾಡಿಕೊಳ್ಳಬೇಕು ಎಂಬುದನ್ನು ನಿರ್ಧರಿಸಿಕೊಳ್ಳಬೇಕಾಗುತ್ತದೆ.
5. ಇಸಿಎಸ್ ವಿಧಾನ: ಮರುಪಾವತಿ (Refund reissue) ಆಯ್ಕೆಗೆ ಹೋಗಬೇಕು. ಬ್ಯಾಂಕ್ ಖಾತೆ ವಿವರಗಳು ಮತ್ತಿತರ ವಿವರ ನಮೂದಿಸಬೇಕು. ಆನ್ ಲೈನ್ ಮುಖಾಂತರವೇ ಹಣ ಹಿಂದಕ್ಕೆ ಪಡೆಯುವ ವಿಧಾನ
6. ಪೇಪರ್ ವಿಧಾನ: ಚೆಕ್ ಮೂಲಕ ಹಣ ಹಿಂದಕ್ಕೆ ಪಡೆಯಲು ಈ ವಿಧಾನ ಬಳಸಲಾಗುತ್ತದೆ. ನಿಮಗೆ ಚೆಕ್ ಬೇಕು ಎಂದಾದಲ್ಲಿ ಪಾನ್ ಅಡ್ರೆಸ್ ಮತ್ತು ಇತರ ಮಾಹಿತಿ ದಾಖಲಿಸಬೇಕಾಗುತ್ತದೆ.
ಕೊನೆ ಮಾತು: ಮರುಪಾವತಿ ವಿಧಾನವು ಸಿಪಿಸಿ ಜವಾಬ್ದಾರಿಯೊಂದಿಗೆ ಬೆರೆತುಕೊಂಡಿದೆ. 2013-14 ನಂತರ ಮರುಪಾವತಿದಾರರು ಎಂಐಸಿಆರ್ ಬದಲು ಐಎಫ್ ಎಸ್ ಸಿ ಕೋಡ್ ದಾಖಲು ಮಾಡಬೇಕಾಗುತ್ತದೆ.


Click it and Unblock the Notifications