ನೀವು ಒಬ್ಬ ಪಾಲಕ ಅಥವಾ ವಿದ್ಯಾರ್ಥಿಯಾಗಿದ್ದರೆ ಶಿಕ್ಷಣದ ಉದ್ದೇಶಕ್ಕೆ ಸಾಲ ಪಡೆಯುವ ಮುನ್ನ ಅನೇಕ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಬಡ್ಡಿದರದಲ್ಲಿನ ಚಿಕ್ಕ ವ್ಯತ್ಯಾಸ ನಿಮಗೆ ಅಪಾರ ಪ್ರಮಾಣದ ಹಣ ಉಳಿಸಬಹುದು.

1. ಶಿಕ್ಷಣ ಸಾಲದ ಮೇಲಿನ ಬಡ್ಡಿದರ
ಬಡ್ಡಿದರದಲ್ಲಿನ ಚಿಕ್ಕ ವ್ಯತ್ಯಾಸ ಅಂದರೆ ಶೇ. 0.25 ಸಹ ಶಿಕ್ಷಣ ಸಾಲದಲ್ಲಿ ಬಹಳ ಮುಖ್ಯವಾಗುತ್ತದೆ. ಸಾಲ ಪಡೆಯುವ ಮುನ್ನ ಬಡ್ಡಿ ದರ ಎಷ್ಟಿದೆ ಎಂಬುದನ್ನು ಪರಿಶೀಲಿಸಿಕೊಂಡೇ ಮುಂದುವರಿಯಬೇಕಾಗುತ್ತದೆ. ಖಾಸಗಿ ಬ್ಯಾಂಕ್ ಗಳು ನಿಮಗೆ ವಿವಿಧ ಆಫರ್ ಸಹ ನೀಡಬಹುದು. ಆದರೆ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಸಾಲ ಪಡೆದುಕೊಳ್ಳುವುದು ಉತ್ತಮ. ಮುಂದಿನ ದಿನಗಳಲ್ಲಿ ನಾವು ಪಡೆದ ಸಾಲಕ್ಕೆ ಎಷ್ಟು ಹಣ ಮರುಪಾವತಿ ಮಾಡಬೇಕಾಗುತ್ತದೆ ಎಂಬ ಸ್ಪಷ್ಟ ಲೆಕ್ಕವೂ ತಲೆಯಲ್ಲಿರಬೇಕಾಗುತ್ತದೆ.
2. ಶಿಕ್ಷಣ ಸಾಲದ ಗಾತ್ರ ಅಥವಾ ಮೊತ್ತ
ಇದು ಬ್ಯಾಂಕ್ ನಿಂದ ಬ್ಯಾಂಕ್ ಗೆ ಭಿನ್ನವಾಗಿರುತ್ತದೆ. ಉದಾಹರಣೆಗೆ ಐಡಿಬಿಐ ಬ್ಯಾಂಕ್ 4 ಲಕ್ಷ ರೂ. ನಿಂದ 7.5 ಲ್ಷ ರೂ, ವರೆಗೆ ಶಿಕ್ಷಣ ಸಾಲ ವಿತರಿಸುತ್ತದೆ. ಸಿಎ ಕೋರ್ಸ್ ಗೆ ಸಂಬಂಧಿಸಿ ಬ್ಯಾಂಕ್ 3 ಲ್ಷ ರೂ. ಸಾಲ ನೀಡುತ್ತದೆ.[ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಹೇಗೆ?]
3. ಮರುಪಾವತಿ ಅವಧಿ ಅಥವಾ ಕಂತುಗಳು
ಇದು ಸಹ ಬ್ಯಾಂಕ್ ನಿಂದ ಬ್ಯಾಂಕ್ ಗೆ ಭಿನ್ನವಾಗಿರುತ್ತದೆ. ಅಲ್ಲದೇ ಯಾವ ಕೋರ್ಸ್ ಮೇಲೆ ಸಾಲ ಪಡೆದಿದ್ದೀರಿ ಎಂಬುದನ್ನು ಪರಿಗಣಿಸಲಾಗುತ್ತದೆ. ನಿಮಗೆ ಹೊಂದುವಂಥ ಕೋರ್ಸ್ ಮತ್ತು ಸಾಲ ಪಡೆದುಕೊಳ್ಳುವುದು ಉತ್ತಮ.
4. ಸಾಲ ಪಡೆಯಲು ನೀಡುವ ಶುಲ್ಕಗಳಾವವು?
ಶಿಕ್ಷಣ ಸಾಲಕ್ಕೆ ಸಂಬಂಧಿಸಿದಂತೆ ಶುಲ್ಕಗಳನ್ನು ನೀಡಬೇಕಾಗುತ್ತದೆ. ಆದರೆ ಭಾರತದಲ್ಲಿಯೇ ವ್ಯಾಸಂಗ ಮಾಡುವವರಿಗೆ ಕೆಲ ಬ್ಯಾಂಕ್ ಗಲು ಯಾವುದೇ ಚಾರ್ಜ್ ಪಡೆಯದೇ ಸಾಲ ನೀಡುತ್ತವೆ. ಅಧ್ಯಯನ ಮಾಡಲು ವಿದೇಶಕ್ಕೆ ತೆರಳಿವುದಾದರೆ ಶುಲ್ಕ ನೀಡಿಕೆ ಅನಿವಾರ್ಯ.[ಸೇವಿಂಗ್ ಅಕೌಂಟ್ ಗಿಂತ ಕರೆಂಟ್ ಅಕೌಂಟ್ ಹೇಗೆ ಭಿನ್ನ?]
5. ಕೊಡುಗೆಗಳತ್ತ ಒಂದು ಕಣ್ಣಿರಲಿ
ಶಿಕ್ಷಣ ಸಾಲ ಪಡೆಯುವಾಗ ಕೆಲ ಬ್ಯಾಂಕ್ ಗಳು ವಿಶೇಷ ಕೊಡುಗೆಗಳನ್ನು ನೀಡುತ್ತವೆ. ವಿಮಾ ಪಾಲಿಸಿಯನ್ನು ಉಚಿತವಾಗಿ ನೀಡುತ್ತವೆ. ಇವುಗಳ ಮೇಲೆ ಒಂದು ಕಣ್ಣಿಟ್ಟುಕೊಳ್ಳುವುದು ಅಗತ್ಯ.
ಕೊನೆ ಮಾತು: ಮೊದಲೇ ಹೇಳಿದಂತೆ ಬಡ್ಡಿ ದರ ಎಷ್ಟಿದೆ ಎಂಬುದನ್ನು ಸಾಲ ಪಡೆಯುವ ಮುನ್ನ ಗಮನಿಸಿಕೊಳ್ಳಬೇಕಾಗುತ್ತದೆ. ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿಯೇ ಸಾಲ ಪಡೆದರೆ ಸುರಕ್ಷಿತ.(ಗುಡ್ ರಿಟರ್ನ್ಸ್. ಇನ್)
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications