ತೆರಿಗೆ ವಿನಾಯಿತಿಗೆ ಅನೇಕ ಪರ್ಯಾಯ ಮಾರ್ಗಗಳಿವೆ. ಸೆಕ್ಷನ್ 80 ಸಿ ನಿಮಗೆ ತೆರಿಗೆ ರಿಯಾಯಿತಿ ಸೌಲಭ್ಯವನ್ನು ಕೊಡಮಾಡುತ್ತದೆ.
ನಿಮ್ಮ ವೇತನ ಮತ್ತಿತರ ಆದಾಯದ ಲೆಕ್ಕದಲ್ಲಿ ತೆರಿಗೆ ಮೌಲ್ಯ ನಿರ್ಧರಿತವಾಗುತ್ತದೆ.
ಇಲ್ಲಿ ಕೆಲವೊಂದು ನಿಮಗೆ ಗೊತ್ತಿರದ ತೆರಿಗೆ ವಿನಾಯಿತಿ ತಂತ್ರಗಳನ್ನು ಹೇಳಲಾಗಿದೆ. ಈ ಟಿಪ್ಸ್ ಗಳನ್ನು ಬಳಕೆ ಮಾಡಿಕೊಳ್ಳುವುದು ಉತ್ತಮ. ಹಾಗಾದರೆ ತಂತ್ರಗಳೇನು? ಎಂಬುದಕ್ಕೆ ಉತ್ತರ ಮುಂದಿದೆ.
ಪಾಲಕರ ಮನೆ ಬಾಡಿಗೆ ಕಟ್ಟಿ
ನೀವು ತಂದೆ-ತಾಯಿ ಮನೆಯಲ್ಲಿ ವಾಸವಿದ್ದೀರಿ ಎಂದಾದರೆ ಮನೆ ಬಾಡಿಕೆ ಕಟ್ಟುವುದು ಒಳ್ಳೆಯದು. ಮನೆ ಬಾಡಿಗೆ ಕಾಗದ ಪತ್ರಗಳು ನಿಮಗೆ ತೆರಿಗೆ ವಿನಾಯಿತಿ ಕಲ್ಪಿಸುತ್ತವೆ,
ಷೇರು ಮಾರುಕಟ್ಟೆ ನಷ್ಟ
ಷೇರು ಮಾರುಕಟ್ಟೆಯಲ್ಲಿ ನಷ್ಟವಾದರೂ ದಾಖಲೆಗಳನ್ನು ನೀಡಿ ತೆರಿಗೆ ರಿಯಾಯಿತಿ ಪಡೆಯಬಹುದು. ಆದರೆ ಬಂಡವಾಳ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನಿಗದಿತ ಪ್ರಮಾಣದ ನಷ್ಟ ಸಂಭವಿಸಿರಬೇಕು.
ರಾಜಕೀಯ ಪಕ್ಷಗಳಿಗೆ ದೇಣಿಗೆ
ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದರೂ ತೆರಿಗೆ ವಿನಾಯಿತಿ ಸಾಧ್ಯ. ಆದರೆ ಯಾವುದೇ ವ್ಯಕ್ತಿ ತನ್ನ ಆದಾಯದ ಶೇ.10 ನ್ನು ಮಾತ್ರ ದೇಣಿಗಯಾಗಿ ನೀಡಲು ಸಾಧ್ಯವಿದೆ.
ಸ್ಟಾಂಪ್ ಡ್ಯೂಟಿ ನೋಂದಣಿ
ಮನೆಯನ್ನೋ ಅಥವಾ ಆಸ್ತಿಯನ್ನೋ ಖರೀದಿಸಿದ್ದರೆ, ಅದರ ನೋಂದಣಿ ಪ್ರಕ್ರಿಯೆಗೆ ತಗಲುವ ಸ್ಟಾಂಪ್ ಡ್ಯೂಟಿ ವೆಚ್ಚವನ್ನು ಆಧಾರವಾಗಿಟ್ಟುಕೊಂಡು ತೆರಿಗೆ ಲಾಭ ಪಡೆಯಬಹುದು.
ಜಾಯಿಂಟ್ ಅಕೌಂಟ್
ಜಾಯಿಂಟ್ ಅಕೌಂಟ್ ಮೂಲಕ ಬಿಸಿನಸ್ ನಿಭಾಯಿಸುತ್ತಿದ್ದರೆ ಖಾತೆ ಹೊಂದಿದ ಇಬ್ಬರೂ ತೆರಿಗೆ ವಿನಾಯಿತಿ ಪಡೆಯಲು ಸಾಧ್ಯವಿದೆ. ಇದು ಸ್ಟಂಪ್ ಡ್ಯೂಟಿ ನೋಂದಣಿ ಅಥವಾ ಆಸ್ತಿ ಖರೀದಿ ಸಮಯದಲ್ಲೂ ಸಾಧ್ಯವಿದೆ. ಆದರೆ ಸೂಕ್ತ ದಾಖಲೆಗಳನ್ನು ಒದಗಿಸಬೇಕಾದ್ದು ಕಡ್ಡಾಯ.
ಶಿಕ್ಷಣ ಸಾಲ
ನೀವು ಹಿಂದೆ ಶಿಕ್ಷಣ ಸಾಲ ಪಡೆದಿದ್ದು ಈಗ ಬಡ್ಡಿ ಕಟ್ಟುತ್ತಿದ್ದರೆ ಆ ದಾಖಲೆಗಳ ಮೂಲಕ ತೆರಿಗೆ ವಿನಾಯಿತಿ ಪಡೆಯಬಹುದು. ಇದು ಸಹ ಸೆಕ್ಷನ್ 80 ಸಿ ಅಡಿಯಲ್ಲೇ ಬರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.


Click it and Unblock the Notifications