ಅಂಚೆ ಇಲಾಖೆ ನೀಡುವ ಪ್ರಮುಖ 7 ವಿಮಾ ಯೋಜನೆಗಳು

ನೀವು ಎಲ್ ಐಸಿ ವಿಮೆ ಮತ್ತೆ ಇತರೆ ಖಾಸಗಿ ಕಂಪನಿಗಳ ವಿಮೆಯ ಬಗ್ಗೆ ಕೇಳಿರುತ್ತೀರಿ ಅಥವಾ ವಿವಿಧ ಮೂಲಗಳಿಂದ ಈ ಬಗ್ಗೆ ನಿಮಗೆ ಮಾಹಿತಿ ಲಭ್ಯವಾಗಿರುತ್ತದೆ. ಅಂತೆಯೇ ನಮ್ಮ ಭಾರತೀಯ ಅಂಚೆ ಇಲಾಖೆಯೂ ಹಲವಾರು ಪಾಲಿಸಿಗಳನ್ನು ಕೊಡಮಾಡುತ್ತಿದೆ ಎಂಬ ಸಂಗತಿ ಹಲವರಿಗೆ ಗೊತ್ತಿರಲಕ್ಕಿಲ್ಲ.

ಅರೆ ಸರ್ಕಾರಿ ಮತ್ತು ಸರ್ಕಾರಿ ನೌಕರರಿಗೆ ಪೋಸ್ಟಲ್ ಲೈಫ್ ಇನ್ಶೂರೆನ್ಸ್ (ಪಿಎಲ್ಐ) ಎಂಬ ಪಾಲಿಸಿ ನೀಡಲಾಗುತ್ತಿದೆ. ಮಹಿಳೆಯರ ಭದ್ರತೆಗೋಸ್ಕರ ಹುಟ್ಟಿಕೊಂಡ ವಿಮೆ ಇಂದು ಚಿರಪರಿಚಿತವಾಗಿದೆ. ದೇಶದ ಅತ್ಯಂತ ಹಳೆಯ ವಿಮಾ ಪಾಲಿಸಿ ಎಂಬ ಹೆಗ್ಗಳಿಕೆಯೂ ಪಿಎಲ್ಐಗಿದೆ.[ಎಲ್ ಐಸಿ ಪಾಲಿಸಿ ಮೇಲೆ ಸಾಲ ಪಡೆಯುವುದು ಹೇಗೆ?]

ಅಂಚೆ ಇಲಾಖೆ ನೀಡುವ ಪ್ರಮುಖ 7 ವಿಮಾ ಯೋಜನೆಗಳು

ಪಿಎಲ್ಐ ವಿಮೆಯ 7 ಮುಖ್ಯ ಯೋಜನೆಗಳು
1. ಸಂಪೂರ್ಣ ಜೀವನ ಭದ್ರತೆ(ಸುರಕ್ಷಾ)
2. ವರ್ಗಾಯಿಸಬಲ್ಲ ಸಂಪೂರ್ಣ ಜೀವನ ಭದ್ರತೆ(ಸುವಿಧಾ)
3. ಎಂಡೋಮೆಂಟ್ ಪಾಲಿಸಿ(ಸಂತೋಷ್)
4. ನಿರೀಕ್ಷಿತ ಎಂಡೋಮೆಂಟ್ ಪಾಲಿಸಿ(ಸುಮಂಗಲ)
5. ಜಂಟಿ ವಿಮೆ(ಯುಗಳ್ ಸುರಕ್ಷಾ)
6. ಅಂಗವಿಕಲರಿಗೆ ವಿಶೇಷ ವಿಮಾ ಪಾಲಿಸಿಗಳು
7. ಮಕ್ಕಳಿಗೋಸ್ಕರ ವಿಮಾ ಯೋಜನೆಗಳು

ಪಿಎಲ್ಐ ವಿಮೆ ಲಾಭಗಳೇನು?
ಭಾರತದ ವಿಮಾ ಪಾಲಿಸಿಗಳಿಗೆ ಹೋಲಿಸಿದರೆ ಕಡಿಮೆ ಪ್ರೀಮಿಯಂಗೆ ಅತಿ ಹೆಚ್ಚಿನ ಬೋನಸ್ ಅಥವಾ ರಿಟರ್ನ್ಸ್ ನೀಡುವ ಪಾಲಿಸಿ ಎಂದರೆ ಪಿಎಲ್ಐ. ಇದರ ಜತೆಗೆ ಪಿಎಲ್ಐ ಪಾಲಿಸಿದಾರ ಕೆಳಗಿನ ಲಾಭಗಳನ್ನು ಪಡೆಯುತ್ತಾನೆ.

* ನಾಮನಿರ್ದೇಶನ ಬದಲಾವಣೆ ಸಾಧ್ಯ
* ಮೂರು ವರ್ಷ ಪೂರೈಸಿದ ಪಾಲಿಸಿಗಳ ಮೇಲೆ ಸಾಲ ಪಡೆಯಬಹುದು.
* ಪಾಲಿಸಿಯ ಬಾಂಡ್ ಆಧಾರದಲ್ಲಿ ಯಾವುದೇ ನೋಂದಾಯಿತ ಹಣಕಾಸು ಸಂಸ್ಥೆಯಿಂದ ನಿರ್ದಿಷ್ಟ ಮೊತ್ತದ ಸಾಲ ಪಡೆಯಲು ಸಾಧ್ಯ
* 6 ಅಥವಾ ಅದಕ್ಕಿಂತ ಹೆಚ್ಚಿನ ಕಂತು ಕಟ್ಟದೇ ಪಾಲಿಸಿ ಅರ್ಧಕ್ಕೆ ನಿಂತಿದ್ದರೆ ಅದನ್ನು ಮುಂದುವರಿಸಲು ಅವಕಾಶ ಒದಗಿಸಿಕೊಡಲಾಗುವುದು.
* ಅಸಲಿ ಬಾಂಡ್ ಕಳೆದುಕೊಂಡರೆ ಅಥವಾ ಹಾನಿಗೀಡಾದರೆ ದಾಖಲೆಗಳನ್ನು ನೀಡಿ ಮತ್ತೊಂದು ಬಾಂಡ್ ಪಡೆದುಕೊಳ್ಳಬಹುದು.
* ಕಾನೂನಿಗೆ ಅನುಗುಣವಾಗಿ ಪಾಲಿಸಿ ಯೋಜನೆಯನ್ನು ಬದಲಾಯಿಸಲು ಅವಕಾಶವಿದೆ.

ಯಾವ-ಯಾವ ಸಂಸ್ಥೆ ನೌಕರರು ಯೋಜನೆ ವ್ಯಾಪ್ತಿಗೆ ಒಳಪಡುತ್ತಾರೆ?
* ಕೇಂದ್ರ ಸರ್ಕಾರದ ನೌಕರ
* ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರು
* ಪ್ಯಾರಾ ಮಿಲಿಟರಿ ಸೇವೆಯಲ್ಲಿರುವವರು
* ರಾಜ್ಯ ಸರ್ಕಾರಿ ಸೇವೆಯಲ್ಲಿರುವವರು
* ಸ್ಥಳೀಯ ಸಂಸ್ಥೆ ನೌಕರರು
* ಸರ್ಕಾರಿ ಸಹಭಾಗಿತ್ವದ ಶಿಕ್ಷಣ ಸಂಸ್ಥೆ ನೌಕರರು
* ಭಾರತದ ರಿಸರ್ವ್ ಬ್ಯಾಂಕ್ ಸೇವೆಯಲ್ಲಿರುವವರು
* ಸಾರ್ವಜನಿಕ ಸಂಪರ್ಕ ಉದ್ದಿಮೆಯಲ್ಲಿರುವವರು
* ಹಣಕಾಸು ಸಂಸ್ಥೆ ನೌಕರರು
* ರಾಷ್ಟ್ರೀಕೃತ ಬ್ಯಾಂಕ್ ಕೆಲಸಗಾರರು
* ಅಂಚೆ ಇಲಾಖೆಗೆ ಸಂಬಂಧಿಸಿದ ಕೆಲಸದಲ್ಲಿರುವವರು(ಗುಡ್ ರಿಟರ್ನ್ಸ್.ಇನ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+