ಬಡ್ಡಿ ಪ್ರಮಾಣ ಬ್ಯಾಂಕ್ ನಿಂದ ಬ್ಯಾಂಕ್ ಗೆ ಭಿನ್ನವಾಗಿರುತ್ತದೆ. ಪರ್ಸನಲ್ ಲೋನ್ ಪಡೆದವನ ಆದಾಯ, ಕಂತು ತುಂಬುವ ಸಾಮರ್ಥ್ಯ ಎಲ್ಲವೂ ಇಲ್ಲಿ ಗಣನೆಗೆ ಬರುತ್ತವೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಹೊಸ ಹಣಕಾಸು ನೀತಿ ಪ್ರಕಟಿಸುತ್ತಿದ್ದಂತೆ ಬ್ಯಾಂಕುಗಳು ಕೂಡಾ ತನ್ನ ಬಡ್ಡಿದರದಲ್ಲಿ ಏರು ಪೇರು ಮಾಡುವುದು ಮಾಮೂಲಿ. ಬ್ಯಾಂಕುಗಳಲ್ಲಿನ ಠೇವಣಿಯ ಬಡ್ಡಿದರ ಇಳಿಮುಖವಾಗುತ್ತಿದ್ದು, ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡಾ ತನ್ನ ಬಡ್ಡಿದರವನ್ನು ಕಡಿತಗೊಳಿಸಿದೆ. [15 ಲಕ್ಷಕ್ಕಿಂತ ಕಡಿಮೆ ಮೊತ್ತ ಠೇವಣಿಗೆ ಬಡ್ಡಿದರ]
ಉತ್ತಮ ಬಡ್ಡಿ ನೀಡುವ ಬ್ಯಾಂಕುಗಳಲ್ಲಿ ತಮ್ಮ ಸಂಬಳವನ್ನು ಹಾಕಿಕೊಳ್ಳುವುದು ಜಾಣತನ, ಸದ್ಯದ ಪರಿಸ್ಥಿತಿಯಲ್ಲಿ ಉತ್ತಮ ಬಡ್ಡಿದರ ನೀಡುತ್ತಿರುವ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳ ವಿವರ ಇಲ್ಲಿದೆ.
1 ಅಥವಾ 6 ತಿಂಗಳ ಅವಧಿ ಹಾಗೂ 50,000 ಕನಿಷ್ಠ ಮೊತ್ತ ಠೇವಣಿ ಹೊಂದಿರುವ ಖಾತೆಗಳಿಗೆ ಸರ್ಕಾರಿ ವಲಯದ ಬ್ಯಾಂಕುಗಳು ನೀಡುವ ಬಡ್ಡಿದರ ವಿವರ ಮುಂದೆ ನೋಡಿ...
ಬಡ್ಡಿದರ ಶೇ 9ರಷ್ಟು
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ದೇನಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು
ಭಾರತೀಯ ನಿವಾಸಿಗಳಿಗೆ 50,000 ರು ಠೇವಣಿ 1 ವರ್ಷ 6 ತಿಂಗಳು, ತ್ರೈಮಾಸಿಕವಾಗಿ ಬಡ್ಡಿದರ ಪರಿಷ್ಕರಣೆಯಾಗಲಿದ್ದು, ಮೆಚ್ಯುರಿಟಿ ಮೊತ್ತ 57,106 ರು ಸಿಗಲಿದೆ
ಶೇ 8.95ರಷ್ಟು ಬಡ್ಡಿದರ
ಯೂನಿಯನ್ ಬ್ಯಾಂಕ್ 1 ವರ್ಷ 6 ತಿಂಗಳ ಅವಧಿಗೆ 50,000 ರು ನಿಶ್ಚಿತ ಠೇವಣಿಗೆ ಶೇ 8.95ರಷ್ಟು ಬಡ್ಡಿದರ ನೀಡುತ್ತಿದ್ದು, 56.983 ರು ನಿರೀಕ್ಷಿಸಬಹುದು.
ಶೇ 8.75ರಷ್ಟು ಬಡ್ಡಿದರ
ಅಲಹಾಬಾದ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಕಾರ್ಪೊರೇಷನ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ತಿರುವಾಂಕೂರು, ಯುಕೋ ಬ್ಯಾಂಕ್
ಭಾರತೀಯ ನಿವಾಸಿಗಳಿಗೆ 50,000 ರು ಠೇವಣಿ 1 ವರ್ಷ 6 ತಿಂಗಳು, ತ್ರೈಮಾಸಿಕವಾಗಿ ಬಡ್ಡಿದರ ಪರಿಷ್ಕರಣೆಯಾಗಲಿದ್ದು, ಮೆಚ್ಯುರಿಟಿ ಮೊತ್ತ 56,898ರು ಸಿಗಲಿದೆ
ಶೇ 9ರಷ್ಟು ಬಡ್ಡಿದರ
ಕೆನರಾ ಬ್ಯಾಂಕ್ ಶೇ 9ರಷ್ಟು ಬಡ್ಡಿದರ ನೀಡಿದರೂ ವಾರ್ಷಿಕವಾಗಿ ಬಡ್ಡಿದರ ಲೆಕ್ಕಾಚಾರ ಹಾಕಲಾಗುತ್ತದೆ. ಹೀಗಾಗಿ ಭಾರತೀಯ ನಿವಾಸಿಗಳಿಗೆ 50,000 ರು ಠೇವಣಿ 1 ವರ್ಷ 6 ತಿಂಗಳು, ತ್ರೈಮಾಸಿಕವಾಗಿ ಬಡ್ಡಿದರ ಪರಿಷ್ಕರಣೆಯಾಗಲಿದ್ದು, ಮೆಚ್ಯುರಿಟಿ ಮೊತ್ತ 56,866ರು ಮಾತ್ರ ಸಿಗಲಿದೆ .
ಶೇ 8.5ರಷ್ಟು ಬಡ್ಡಿದರ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸಿಂಡಿಕೇಟ್ ಬ್ಯಾಂಕ್ ಶೇ 8.5ರಷ್ಟು ಬಡ್ಡಿದರ ನೀಡುತ್ತಿದೆ. ಭಾರತೀಯ ನಿವಾಸಿಗಳಿಗೆ 50,000 ರು ಠೇವಣಿ 1 ವರ್ಷ 6 ತಿಂಗಳು, ತ್ರೈಮಾಸಿಕವಾಗಿ ಬಡ್ಡಿದರ ಪರಿಷ್ಕರಣೆಯಾಗಲಿದ್ದು, ಮೆಚ್ಯುರಿಟಿ ಮೊತ್ತ 56,691ರು ಮಾತ್ರ ಸಿಗಲಿದೆ .
ಶೇ 8.5ರಷ್ಟು ಬಡ್ಡಿದರ
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶೇ 8.5ರಷ್ಟು ಬಡ್ಡಿದರ ನೀಡುತ್ತಿದೆ. ಅದರೆ, ಎಸ್ ಬಿಐಗೆ ಹೋಲಿಸಿದರೆ ಯೂನಿಯನ್ ಬ್ಯಾಂಕ್ ಕೂಡಾ ಕೆನರಾ ಬ್ಯಾಂಕ್ ನಂತೆ ಬಡ್ಡಿದರವನ್ನು ವಾರ್ಷಿಕವಾಗಿ ಲೆಕ್ಕಾಚಾರ ಹಾಕಲಾಗುತ್ತದೆ.
ಭಾರತೀಯ ನಿವಾಸಿಗಳಿಗೆ 50,000 ರು ಠೇವಣಿ 1 ವರ್ಷ 6 ತಿಂಗಳು, ತ್ರೈಮಾಸಿಕವಾಗಿ ಬಡ್ಡಿದರ ಪರಿಷ್ಕರಣೆಯಾಗಲಿದ್ದು, ಮೆಚ್ಯುರಿಟಿ ಮೊತ್ತ 56,477 ರು ಮಾತ್ರ ಸಿಗಲಿದೆ .


Click it and Unblock the Notifications