ಎಲ್ ಐಸಿ ಪಾಲಿಸಿ ಮೇಲೆ ಸಾಲ ಪಡೆಯುವುದು ಹೇಗೆ?

ನಿಮ್ಮ ಎಲ್ ಐಸಿ ವಿಮಾ ಪಾಲಿಸಿಯ ಮೇಲೆ ಸಾಲ ಪಡೆಯಲು ಹಲವಾರು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಮೂರು ವರ್ಷಕ್ಕಿಂತ ಹೆಚ್ಚಿನ ಅವಧಿಯಬ ಪಾಲಿಸಿ ಕಂತುಗಳನ್ನು ಸರಿಯಾಗಿ ತುಂಬಿರುವವ ಸಾಲ ಪಡೆಯಲು ಅರ್ಹನಾಗುತ್ತಾನೆ.

ವಿಮಾ ಮೊತ್ತ ಮತ್ತು ಅವಧಿಯ ಆಧಾರದಲ್ಲಿ ಸಾಲ ನೀಡಿಕೆಯ ಪ್ರಮಾಣವೂ ವ್ಯತ್ಯಾಸವಾಗುವುದು. ಈ ಸಾಲ ಅತ್ಯಂತ ಸುರಕ್ಷಿತ ಮಾದರಿಯದ್ದಾಗಿದೆ. ಅಲ್ಲದೇ ಕಡಿಮೆ ಪ್ರಮಾಣದ ಬಡ್ಡಿಯನ್ನು ಹೊಂದಿದ್ದು ರಿಸ್ಕ್ ಗಳಿಂದ ಸಂಪೂರ್ಣ ಮುಕ್ತವಾಗಿದೆ.[ಆನ್ ಲೈನ್ ನಲ್ಲಿ ಎಲ್ ಐಸಿ ಪಾಲಿಸಿ ಚೆಕ್ ಅಪ್]

ಎಲ್ ಐಸಿ ಪಾಲಿಸಿ ಮೇಲೆ ಸಾಲ ಪಡೆಯುವುದು ಹೇಗೆ?

ಸಾಲ ಪಡೆಯುವುದು ಹೇಗೆ?
ಎಲ್ ಐಸಿ ನಿರ್ದಿಷ್ಟಪಡಿಸಿದ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ನೀಡಬೇಕಾದ್ದು ಕಡ್ಡಾಯ. ವೆಬ್ ಸೈಟ್ ಅಥವಾ ಏಜೆಂಟರ ಮೂಲಕ ಅರ್ಜಿ ಪಡೆದುಕೊಳ್ಳಬಹುದಾಗಿದೆ. ಆದರೆ ನಿಮ್ಮ ಪಾಲಿಸಿ ಇರುವ ಶಾಖೆಯಲ್ಲೇ ಅರ್ಜಿ ಸಲ್ಲಿಸಬೇಕು.

ನಂತರ ಅವರು ಕೇಳುವ ಎಲ್ಲ ಮಾಹಿತಿಗಳನ್ನು ನೀಡಬೇಕು. ಅಲ್ಲದೇ ನಿಮ್ಮ ಪಾಲಿಸಿಯ ಅಸಲಿ ಬಾಂಡ್ ನ್ನು ಸಾಲ ಪಡೆಯಲು ನೀವು ನೀಡಬೇಕಾಗುತ್ತದೆ.

ಬಡ್ಡಿ ದರವೇನು?
ಉಳಿದ ಕಡೆಯಂತೆ ಇಲ್ಲಿಯೂ ಸಾಲಕ್ಕೆ ಬಡ್ಡಿ ಅನ್ವಯವಾಗುತ್ತದೆ. ಶೇ. 9 ರಿಂದ 10 ರವರೆಗೆ ಆರು ತಿಂಗಳಿಗೆ ಅನ್ವಯಿಸುವಂತೆ ಸಾಮಾನ್ಯವಾಗಿ ಬಡ್ಡಿ ವಿಧಿಸಲಾಗುತ್ತದೆ.

ಸಾಲದ ಮೊತ್ತ
ಪಾಲಿಸಿಗೆ ಅನುಗುಣವಾಗಿ ಶೇ. 90 ರಷ್ಟು ಪ್ರಮಾಣದ ಸಾಲ ನೀಡಲಾಗುತ್ತದೆ. ಇಲ್ಲಿಯವರೆಗೆ ಪಾವತಿಯಾದ ಹಣದ ಮೊತ್ತ, ದೊರೆತ ಬೋನಸ್, ಪಾಲಿಸಿಯ ಇತಿಹಾಸ ಎಲ್ಲವನ್ನು ಗಮನಿಸಿ ಸಾಲ ನೀಡಲಾಗುವುದು.

ಸಾಲದ ಅಧಿಕಾರ ಮತ್ತು ಅವಧಿ
ಅತಿ ಕಡಿಮೆ ಅಂದರೆ ಕನಿಷ್ಠ ಆರು ತಿಂಗಳ ಅವಧಿಗೆ ಸಾಲ ನೀಡಲಾಗುವುದು. ಸಾಲ ಮರುಪಾವತಿ ದಿನಾಂಕವನ್ನು ಮೊದಲೆ ತಿಳಿಸಲಾಗಿರುತ್ತದೆ. ಒಂದು ವೇಳೆ ಅವಧಿಗೂ ಮುನ್ನವೇ ಸಾಳ ಮರುಪಾವತಿಗೆ ಮುಂದಾದರೂ ಆರು ತಿಂಗಳ ಬಡ್ಡಿ ತುಂಬಲೇಬೇಕಾಗುತ್ತದೆ.

ಸಾವು-ನೋವು
ಒಂದು ವೇಳೆ ಸಾಲ ಪಡೆದ ಪಾಲಿಸಿದಾರನ ಸಾವು ಸಂಭವಿಸಿದರೆ ಸಾವಿಗೀಡಾದ ದಿನದವರೆಗೆ ಬಡ್ಡಿ ಲೆಕ್ಕಹಾಕಲಾಗುವುದು. ಒಂದು ವೇಳೆ ಈ ಸಂದರ್ಭದಲ್ಲಿ ಬಡ್ಡಿ ಪಾವತಿ ಮಾಡಲು ವಿಫಲವಾದರೆ ಪಾಲಿಸಿಯ ಮೊತ್ತದಲ್ಲಿಯೇ ಹಣ ಕಡಿತಮಾಡಿಕೊಳ್ಳಲಾಗುವುದು ಮತ್ತು ಉಳಿದ ಹಣವನ್ನು ಪಾಲಿಸಿದಾರನಿಗೆ ನೀಡಲಾಗುವುದು. ಆದರೆ ಇಲ್ಲಿ ಸಾಲ ಪಡೆಯುವ ವಿಧಾನ ಸುಲಭವಾಗಿದ್ದು ಕೇವಲ 2-3 ದಿನಗಳಲ್ಲಿ ನಿಮ್ಮ ಕೈಗೆ ಹಣ ದೊರೆಯುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+