ಗೃಹ ಸಾಲ ಒಳಗೊಳ್ಳುವ ಶುಲ್ಕಗಳು ಯಾವವು?

ಸಾಲ ಪಡೆದುಕೊಳ್ಳುವುದು ಇಂದಿನ ದಿನಗಳಲ್ಲಿ ಬಹಳ ಸುಲಭವಾಗಿದೆ. ಆದರೆ ಸಾಲ ಪಡೆಯುವಾಗ ಬ್ಯಾಂಕ್ ನಮಗೆ ಯಾವ ಯಾವ ಶುಲ್ಕಗಳನ್ನು ವಿಧಿಸುತ್ತದೆ? ಎಂಬುದನ್ನು ಗಮನಿಸಿಕೊಳ್ಳಬೇಕಾಗುತ್ತದೆ. ವಿಶೇಷ ಸೇವೆಗಳನ್ನು ನೀಡುವ ಸಂದರರ್ಭ ಹೆಚ್ಚುವರಿಯಾಗಿ ಎಷ್ಟು ಹಣ ಪಡೆದುಕೊಳ್ಳುತ್ತದೆ ಎಂಬುದನ್ನು ಅರಿತುಕೊಂಡಿರಬೇಕಾಗುತ್ತದೆ.

ಸಾಲ ನೀಡಿಕೆ ವೇಳೆ ಬ್ಯಾಂಕ್ ನಿಮಗೆ ತಿಳಿಸದ ಕೆಲ ಸಂಗತಿಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಗೃಹ ಸಾಲ ಪಡೆದುಕೊಳ್ಳುವಾಗ ಈ ಕೆಳಗಿನ ಅಂಶಗಳನ್ನು ತಿಳಿದುಕೊಂಡಿರಬೇಕಾಗುತ್ತದೆ.[ಚಿನ್ನಾಭರಣ ಖರೀದಿಗೆ 8 ಸೂತ್ರ]

ಪರಿಶೀಲನೆ ಶುಲ್ಕ

ಪರಿಶೀಲನೆ ಶುಲ್ಕ

ಮನೆ ಸಾಲವೊಂದಕ್ಕೆ ಅರ್ಜಿ ಸಲ್ಲಿಸಿದ್ದೀರಿ ಎಂದಾದರೆ ನೀವು ನೀಡಿರುವ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ನೀಡಿರುವ ದಾಖಲಾತಿಗಳನ್ನು ಪರಿಶೀಲನೆಗೆ ಶುಲ್ಕ ವಿಧಿಸುವುದನ್ನು ಮೊದಲು ತಿಳಿಸಲಾಗುವುದಿಲ್ಲ. ಮನೆಕಟ್ಟಲಿರುವ ಜಾಗವನ್ನು ಇಂಜಿನಿಯರ್ ಒಬ್ಬರಿಂದ ಪರಿಶೀಲನೆ ನಡೆಸಿದರೂ ಅಂತಿಮವಾಗಿ ಅದರ ಶುಲ್ಕವನ್ನು ಗ್ರಾಹಕನೇ ಭರಿಸಬೇಕಾಗುತ್ತದೆ.

ಕಾಗದ ಪತ್ರ ತಯಾರಿಕೆ ಶುಲ್ಕ

ಕಾಗದ ಪತ್ರ ತಯಾರಿಕೆ ಶುಲ್ಕ

ಮನೆ ಸಾಲ ಪಡೆಯಲು ಕಾಗದ ಪತ್ರ ತಯಾರಿಕೆ ಅಗತ್ಯ, ಅಗತ್ಯ ರುಜುಗಳು, ದೃಢೀಕರಣ ಎಲ್ಲದಕ್ಕೂ ಸಂಬಂಧಿಸಿ ಬ್ಯಾಂಕ್ ಶುಲ್ಕ ವಸೂಲಿ ಮಾಡುತ್ತದೆ. ಬ್ಯಾಂಕ್ ಗೆ ಅಸಲಿ ಕಾಗದ ಪತ್ರ ನೀಡುವ ಮೊದಲು ಒಂದೆರಡು ದೃಢಿಕರಣ ಕಾಪಿ ತೆಗೆದಿರಿಸಕೊಳ್ಳುವುದು ಉತ್ತಮ.

ಬದಲಾವಣೆ ಶುಲ್ಕ

ಬದಲಾವಣೆ ಶುಲ್ಕ

ಬೇರೆ ಬ್ಯಾಂಕ್ ಗಳು ಮನೆ ಸಾಲದ ಮೇಲಿನ ಬಡ್ಡಿ ದರ ಕಡಿಮೆ ಮಾಡಿದರೆ ನೀವು ಸಹ ಅದೇ ರೀತಿಯ ಬಡ್ಡಿ ವಿಧಿಸಿ ಎಂದು ಪ್ರಶ್ನೆ ಮಾಡಬಹುದು. ಈ ವೇಳೆ ಹೆಚ್ಚಿನ ಬಡ್ಡಿದರದಿಂದ ಕಡಿಮೆ ಬಡ್ಡಿ ದರಕ್ಕೆ ಸಾಲವನ್ನು ಬದಲಾಯಿಸುವುದಾದರೆ ಅದರ ಶುಲ್ಕವನ್ನು ಗ್ರಾಹಕನೇ ಭರಿಸಬೇಕಾಗುತ್ತದೆ. ಸಾಲದ ಮೊತ್ತ ಎಷ್ಟು ಉಳಿದುಕೊಂಡಿದೆಯೋ ಅದರ ಮೇಲಿನ ಶೇಕಡಾವಾರು ಲೆಕ್ಕದಲ್ಲಿ ಶುಲ್ಕ ವಸೂಲಿ ಮಾಡಲಾಗುವುದು.

ಸ್ಟಾಂಪ್ ಡ್ಯೂಟಿ

ಸ್ಟಾಂಪ್ ಡ್ಯೂಟಿ

ಸ್ಟಾಂಪ್ ಡ್ಯೂಟಿ ಶುಲ್ಕ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತಿರುತ್ತದೆ. ನೀವು ಅಡವಿಡುವ ಆಸ್ತಿ ಮತ್ತು ಪಡೆಯುವ ಸಾಲವೂ ಇದರ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ ಸಿಗುತ್ತಿರುವ ಸವಲತ್ತುಗಳು, ಸಂಪನ್ಮೂಲಗಳ ಲಭ್ಯತೆ. ಕಾರ್ ಪಾರ್ಕಿಂಗ್, ಯಾವ ಮಹಡಿ ಈ ರೀತಿಯ ಅನೇಕ ಅಂಶಗಳು ಸ್ಟಾಂಪ್ ಡ್ಯೂಟಿ ಶುಲ್ಕ ನಿರ್ಧಾರ ಮಾಡುತ್ತವೆ.

ಇತರೆ ಶುಲ್ಕಗಳು

ಇತರೆ ಶುಲ್ಕಗಳು

ಗೃಹ ಸಾಲ ಪಡೆಯುವಾಗ ಇತರ ಕಣ್ಣಿಗೆ ಕಾಣದ ಕೆಲ ಶುಲ್ಕಗಳನ್ನು ಭರ್ತಿ ಮಾಡಬೇಕಾಗುತ್ತದೆ. ಸಾಲ ನೀಡುವ ಸಂಸ್ಥೆಗೆ ಸಂಬಂಧಿಸಿದ ಶುಲ್ಕ, ಕಾನೂನು ಶುಲ್ಕ, ಡಾಕ್ಯೂಮಿಂಟೇಷನ್, ವಿಳಂಬ ಈ ರೀತಿ ಹಲವಾರು ಕಾರಣಗಳಿಗೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ.

ಗ್ರಾಹಕ ಜಾಗೃತಿ

ಗ್ರಾಹಕ ಜಾಗೃತಿ

ಪ್ರತಿಯೊಂದು ಸಾಲ ಪಡೆಯುವಿಕೆಗೂ ಶುಲ್ಕ ನೀಡುವಿಕೆಗೂ ನಿಕಟ ಸಂಬಂಧ ಇರುತ್ತದೆ. ಕೆಲವೊಂದನ್ನು ಪರಿಗಣಿಸಲು ಸಾಧ್ಯವಿಲ್ಲದಿದ್ದರೂ, ಕೆಲ ಕಡೆ ಹೆಚ್ಚಿನ ಮೊತ್ತ ನೀಡಬೇಕಾಗುತ್ತದೆ. ಸಾಲ ಪಡೆಯುವಿಕೆಗೆ ಅರ್ಜಿ ಸಲ್ಲಿಸುವ ಮೊದಲು ಮೇಲಿನ ಅಂಶಗಳನ್ನು ತಿಳಿದಿಟ್ಟುಕೊಳ್ಳುವುದು ಒಳಿತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+