ಆಧುನಿಕ ಸಮಾಜದಲ್ಲಿ ಕ್ರೆಡಿಟ್ ಕಾರ್ಡ್ ಸಹ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದೆ. ಕ್ಯಾಶ್ ಬ್ಯಾಕ್ ಆಫರ್ ಗಳು, ರಿವಾರ್ಡ್ ಪಾಯಿಂಟ್ಸ್ ನಂಥ ಕ್ರಮಗಳು ಇವುಗಳ ಹೆಚ್ಚೆಚ್ಚು ಬಳಕೆಗೆ ಮನಸ್ಸನ್ನು ಸದಾ ಪ್ರೇರೇಪಿಸುತ್ತಿರುತ್ತವೆ.
ಮಹಾನಗರದಲ್ಲಿ ವಾಸಿಸುವ ಎಲ್ಲರ ಬಳಿ ಕ್ರೆಡಿಟ್ ಕಾರ್ಡ್ ಇದ್ದೇ ಇರುತ್ತದೆ. ಆದರೆ ಅವುಗಳ ಸರಿಯಾದ ಉಪಯೋಗದ ಬಗ್ಗೆ ಹಲವರಿಗೆ ಮಾಹಿತಿ ಇರುವುದಿಲ್ಲ. ದಿಢೀರ್ ಅಂಥ ಕಿಸೆಯಿಂದ ಕ್ರೆಡಿಟ್ ಕಾರ್ಡ್ ತೆಗದು ಉಪಯೋಗಿಸುವ ಮುನ್ನ ಈ ಆರು ಅಂಶಗಳನ್ನು ಗಮನಿಸುವುದು ಉತ್ತಮ. [ಕ್ರೆಡಿಟ್ ಕಾರ್ಡ್ ಕೊಳ್ಳುವ ಮುನ್ನ 9 ಅಂಶ ತಲೆಯಲ್ಲಿರಲಿ]

1. ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಇಟ್ಟುಕೊಳ್ಳುವುದು
ನಿಮ್ಮ ಬಳಿ ಒಂದು ಕ್ರೆಡಿಟ್ ಕಾರ್ಡ್ ಇಟ್ಟುಕೊಳ್ಳುವುದು ಉತ್ತಮ. ಆದರೆ ಒಂದಕ್ಕಿಂತ ಹೆಚ್ಚಿದ್ದರೆ ನಿಮ್ಮ ಖರ್ಚು ವೆಚ್ಚದ ಮೇಲೆ ನಿಗಾ ತಪ್ಪಿ ಅದು ದುಂದುವೆಚ್ಚಕ್ಕೆ ಕಾರಣವಾಗಬಹುದು. ರಿವಾರ್ಡ್ ಪಾಯಿಂಟ್ಸ್ ಆಸೆಯಲ್ಲಿ ನಾವು ಅನಗತ್ಯ ಖರ್ಚು ಮಾಡುವ ಸಂಭವವಿರುತ್ತದೆ.
2. ಪ್ರತಿ ತಿಂಗಳು ಕನಿಷ್ಠ ಬ್ಯಾಲೆನ್ಸ್ ಮಾತ್ರ ತುಂಬುವುದು
ಇದು ಸಹ ನಿಮ್ಮ ಆರ್ಥಿಕ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರಬಲ್ಲದು. ವಿಳಂಬ ಬಿಲ್ ಪಾವತಿ ಮಾಡಿದರೆ ಸುಮ್ಮನೆ ಹೆಚ್ಚಿನ ಬಡ್ಡಿ ತೆರಬೇಕಾಗುತ್ತದೆ ಎಂಬುದನ್ನು ಗಮನದಲ್ಲಿರಿಸಿಕೊಂಡಿರಬೇಕು. ಒಂದು ವೇಳೆ ನಿಮ್ಮ ಬಳಿ ಬ್ಯಾಲೆನ್ಸ್ ಮೊತ್ತ ತುಂಬಲು ಸಾಧ್ಯವಾಗದಿದ್ದರೆ ಖರ್ಚು ಮಾಡುವುದನ್ನಾದರೂ ನಿಲ್ಲಿಸಬೇಕಾಗುತ್ತದೆ.[ಕ್ರೆಡಿಟ್ ಕಾರ್ಡ್ ಕಳಕೊಂಡ್ರಾ? ತಕ್ಷಣವೇ ಸುದ್ದಿ ಓದಿ]
3. ಹಳೆಯ ಖಾತೆಗಳನ್ನು ಕ್ಲೋಸ್ ಮಾಡಲು ಸಮಯವಿಲ್ಲ
ನಿಮ್ಮ ಕ್ರೆಡಿಟ್ ಕಾರ್ಡ್ ದಾಖಲಾತಿಗಳನ್ನು ಉತ್ತಮವಾಗಿ ಇಟ್ಟುಕೊಳ್ಳಬೇಕು ಎಂದರೆ ಹಳೆಯ ಬಾಕಿ ಮತ್ತು ಅಕೌಂಟ್ ಗಳನ್ನು ಮೊದಲು ಕ್ಲೋಸ್ ಮಾಡಬೇಕು. ಈ ಮೂಲಕ ನಿಮ್ಮ ರಿವಾರ್ಡ್ ಪಾಯಿಂಟ್ಸ್ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಅಲ್ಲದೇ ಅನಗತ್ಯ ತಲೆನೋವು ತಪ್ಪುತ್ತದೆ.
4. ಸುರಕ್ಷತಾ ಕ್ರಮಗಳ ತಿರಸ್ಕಾರ
ನೀವು ಆನ್ ಲೈನ್ ಮೂಲಕ ಖರೀದಿ ಮಾಡುತ್ತಿದ್ದರೆ ಸುರಕ್ಷತಾ ಕ್ರಮಗಳನ್ನು ಅನುಸರಿಸಲೇ ಬೇಕು. ಯಾವ ಯಾವ ಸಂದರ್ಭಗಳಲ್ಲಿ ಕೋಡ್ ಬಳಸಬೇಕು ಎಂಬ ಸ್ಪಷ್ಟ ತಿಳಿವಳಿಕೆಯನ್ನು ಹೊಂದಿರಬೇಕು.
5. ರಿವಾರ್ಡ್ ಪಾಯಿಂಟ್ಸ್ ಲೆಕ್ಕಾಚಾರ
ಸುಮ್ಮನೆ ರಿವಾರ್ಡ್ ಪಾಯಿಂಟ್ಸ್ ದೊರೆಯುತ್ತದೆ ಎಂದು ಖರೀದಿ ಮಾಡುವುದು. ಆ ಪಾಯಿಂಟ್ಸ್ ಗಳನ್ನು ನಿಗದಿತ ಅವಧಿಯಲ್ಲಿ ಬಳಸಿಕೊಳ್ಳಬೇಕು ಎಂದು ಮತ್ತಷ್ಟು ಖರೀದಿಗೆ ಇಳಿಯುವುದು ನಿಮ್ಮನ್ನು ಆರ್ಥಿಕ ದುಸ್ಥಿತಿಗೆ ತಳ್ಳಬಹುದು.[ಕ್ರೆಡಿಟ್ ಕಾರ್ಡ್ ಬೇಕೆ? ಆನ್ ಲೈನ್ ನಲ್ಲೇ ಅಪ್ಲೈ ಮಾಡಿ]
6. ಸರಿಯಾದ ಸ್ಥಳದಲ್ಲಿ ಬಳಕೆ ಮಾಡಿ
ಲಕ್ಸುರಿ ವಸ್ತುಗಳನ್ನು ಕೊಳ್ಳಲು, ಶಾಪಿಂಗ್ ಹುಚ್ಚಿಗಾಗಿ ಕ್ರೆಡಿಟ್ ಕಾರ್ಡ್ ಬಳಸಿಕೊಳ್ಳಬಾರದು. ಅಗತ್ಯವಿದ್ದಡೆ, ಬಿಲ್ ಪಾವತಿ ಯಂಥ ಸಂದರ್ಭಗಳಲ್ಲಿ ಇದನ್ನು ಬಳಸಿಕೊಳ್ಳುವುದು ಒಳಿತು.
ಕ್ರೆಡಿಟ್ ಕಾರ್ಡ್ ಕೈಯಲ್ಲಿದೆ ಎಂದು ಖರೀದಿಗೆ ಮುಗಿಬೀಳುವುದು ತರವಲ್ಲ. ಕಂಪನಿಗಳು, ಮಾಲ್ ಗಳು ನೀಡುವ ಕೊಡುಗೆಗೆ ಮರುಳಾಗಿ ಕ್ರೆಡಿಟ್ ಕಾರ್ಡ್ ಬಳಸಿದರೆ ಆರ್ಥಿಕ ದುಸ್ಥಿತಿಗೆ ತಲುಪಬೇಕಾಗುತ್ತದೆ.(ಗುಡ್ ರಿಟರ್ನ್ಸ್.ಇನ್)


Click it and Unblock the Notifications