ಆನ್ ಲೈನ್ ಮೂಲಕ ಹೊಸದಾಗಿ ಆದಾಯ ತೆರಿಗೆ ಪಾವತಿ ಮಾಡುವವರು ಯಾವ ಕ್ರಮ ಅನುಸರಿಸಬೇಕು ಎಂಬ ಗೊಂದಲದಲ್ಲಿರುತ್ತಾರೆ. ಆನ್ ಲೈನ್ ನಲ್ಲಿ ಪಾವತಿ ಮಾಡುವುದು ಹೇಗೆ ಎಂದು ಗೊತ್ತಿರುವುದಿಲ್ಲ. ಇದಕ್ಕೆಲ್ಲ ಉತ್ತರ ಇಲ್ಲಿದೆ.
ಆನ್ ಲೈನ್ ಮೂಲಕ ಹೇಗೆ ನೋಂದಣಿ ಮಾಡಿಕೊಳ್ಳಬೇಕು. ಆದಾಯ ತೆರಿಗೆ ಮರುಪಾವತಿ ಹೇಗೆ, ಆದಾಯ ತೆರಿಗೆ ಕಂಡಿಷನ್ ಗಳೇನು ಎಂಬುದನ್ನು ಓದಿ ತಿಳಿದುಕೊಳ್ಳಬೇಕಾಗುತ್ತದೆ.[ಆದಾಯ ತೆರಿಗೆ ಸೈಟ್ ನಲ್ಲಿ ಉತ್ತರಾಧಿಕಾರತ್ವ ನೋಂದಣಿ ಹೇಗೆ?]

ಸರ್ಕಾರಕ್ಕೆ ಆದಾಯ ತೆರಿಗೆ ಇಲಾಖೆ ಮೂಲಕ ಹಣವನ್ನು ನೇರವಾಗಿ ಪಾವತಿ ಮಾಡಲಾಗುತ್ತದೆ. ಪ್ರತಿ ವರ್ಷದ ತಲಾ ಆದಾಯದ ಮೇಲೆ ಆದಾಯ ತೆರಿಗೆ ಮೊತ್ತ ನಿರ್ಧರಿತವಾಗುತ್ತದೆ. ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಆದಾಯ ತೆರಿಗೆ ಇಲಾಖೆ ಕೆಲವೊಂದು ರಿಯಾಯಿತಿಯನ್ನು ನೀಡಿದೆ.
ಆದಾಯ ತೆರಿಗೆ ತಾಣದಲ್ಲಿ ನೋಂದಣಿ ಮಾಡಿಕೊಳ್ಳುವುದು ಹೇಗೆ?
* ಆದಾಯ ತೆರಿಗೆ ವೆಬ್ ತಾಣಕ್ಕೆ ಲಾಗ್ ಇನ್ ಆಗಿ
* Click on Register Yourself ಐಕಾನ್ ಮೇಲೆ ಕ್ಲಿಕ್ ಮಾಡಿ
* ವೈಯಕ್ತಿಕ ದಾಖಲು ಆಯ್ಕೆ ಸೆಲೆಕ್ಟ್ ಮಾಡಿ
* ಅಗತ್ಯ ದಾಖಲೆಗಳಾದ ಪ್ಯಾನ್ ಕಾರ್ಡ್, ಇ ಮೇಲ್, ಮೊಬೈಲ್ ನಂಬರ್ ನೀಡಬೇಕಾದ್ದು ಕಡ್ಡಾಯ
* ಸೆಕ್ಯೂರಿಟಿ ಪ್ರಶ್ವೆಗಳಿಗೆ ಅಗತ್ಯ ಉತ್ತರ ನೀಡಿ
* ನಂತರ Continue ಬಟನ್ ಕ್ಲಿಕ್ ಮಾಡಿ
* ಪಾಸ್ ವರ್ಡ್ ಮತ್ತು ಕಾಟಾಕ್ಟ್ ಡಿಟೇಲ್ಸ್ ದಾಖಲಿಸಿ[ಆದಾಯ ತೆರಿಗೆ ರಿಫಂಡ್ ಚೆಕ್ ಹಿಂದಕ್ಕೆ ಪಡೆಯುವುದು ಹೇಗೆ?]
* ನಿಮ್ಮ ಅಕೌಂಟ್ ನೋಂದಣಿಯಾದ ನಂತರ, ನೋಂದಾಯಿತ ಇ ಮೇಲ್ ಗೆ ಸಂದೇಶ ಬರುತ್ತದೆ.
* ಇಲ್ಲಿನ ಆಕ್ಟಿವೇಶನ್ ಲಿಂಕ್ ಮೂಲಕ ಮತ್ತೆ ಪ್ರವೇಶ ಪಡೆಯಬೇಕಾಗುತ್ತದೆ.
* ನಿಮ್ಮ ಲಾಗ್ ಇನ್ ಐಡಿ ಮತ್ತು ಪಾಸ್ ವರ್ಡ್ ಮತ್ತು ಜನ್ಮ ದಿನಾಂಕದ ಮೂಲಕ ಮುಂದುವರಿಯಲು ಸಾಧ್ಯವಾಗುತ್ತದೆ.
ಒಮ್ಮೆ ನೀವು ನೋಂದಣಿ ಮಾಡಿಸಿಕೊಂಡರೆ ಆನ್ ಲೈನ್ ಮೂಲಕ ಆದಾಯ ತೆರಿಗೆ ಪಾವತಿ, ಐಟಿ ರಿಟರ್ನ್ಸ್ ಗಳ ವೀಕ್ಷಣೆ, ಮರುಪಾವತಿ ಅಂಕಿಅಂಶಗಳು ಮುಂತಾದವನ್ನು ಸುಲಭವಾಗಿ ನೋಡಬಹುದು.
ಕೊನೆ ಮಾತು: ನಿಮ್ಮ ಅಡ್ರೆಸ್ ಬದಲಾವಣೆ ಮಾಡಿದ್ದರೆ ಅದನ್ನು ಆದಾಯ ತೆರಿಗೆ ತಾಣದಲ್ಲಿ ನೋಂದಣಿ ಮಾಡಲು ಮಾತ್ರ ಮರೆಯಬೇಡಿ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications