ಭಾರತದಲ್ಲಿ ಆಭರಣಗಳನ್ನು ಸಾಮಾನ್ಯವಾಗಿ 22 ಕ್ಯಾರಟ್ ಚಿನ್ನದಿಂದ ತಯಾರಿಸುತ್ತಾರೆ. ಹಬ್ಬದ ಸಂದರ್ಭಗಳಲ್ಲೆಂತೂ ಭಾರತದ ಚಿನ್ನದ ಮಳಿಗೆಗಳು ಗ್ರಾಹಕರಿಂದ ತುಂಬಿ ತುಳುಕುತ್ತಿರುತ್ತವೆ.
ಸಾಕಷ್ಟು ಹುಡುಕಾಡಿ ಇಷ್ಟದ ಡಿಸೈನ್ ಇರುವ ಆಭರಣ ಕೊಳ್ಳುತ್ತೇವೆ. ಆಭರಣ ಕೊಳ್ಳಲು ಸಮಯ ಮತ್ತು ಶ್ರಮವನ್ನು ವ್ಯರ್ಥ ಮಾಡಿರುತ್ತೇವೆ. ಹಾಗಾಗಿ ಚಿನ್ನಾಭರಣ ಖರೀದಿಗೂ ಮುನ್ನ ಅನುಸರಿಸಬೇಕಾದ ಸೂತ್ರಗಳೇನು? ಯಾವ ಯಾವ ಪರೀಕ್ಷೆಗಳನ್ನು ನಾವೇ ಮಾಡಲು ಸಾಧ್ಯ? ಎಂಬ ಮೂಲಭೂತ ತಿಳಿವಳಿಕೆ ಇಟ್ಟುಕೊಳ್ಳುವುದು ಅಗತ್ಯ. ಚಿನ್ನಾಭರಣ ಖರೀದಿಗೂ ಮನ್ನ ಈ ವರದಿಯನ್ನು ಮತ್ತೊಮ್ಮೆ ಓದಿಕೊಂಡು ಹೋಗುವುದು ಒಳ್ಳೆಯದು.[ಭಾರತದಲ್ಲಿ ಚಿನ್ನಾಭರಣ ಖರೀದಿಗೆ 8 ಸೂತ್ರ]

ಚಿನ್ನದ ಗುಣಮಟ್ಟವನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ನಿಗದಿ ಮಾಡುತ್ತದೆ. ಹಾಲ್ ಮಾರ್ಕ್ ನೀಡುವುದರ ಮೂಲಕ ಪರಿಶುದ್ಧತೆಯನ್ನು ತಿಳಿಸಿಕೊಡುತ್ತದೆ.
ಚಿನ್ನದ ಪರಿಶುದ್ಧತೆ ಅಳೆಯುವ ಕೆಲ ತಂತ್ರಗಳು
ಬಿಐಎಸ್ ಸ್ಟ್ಯಾಂಡರ್ಡ್ ಗುರುತು
ತ್ರಿಕೋನ ಆಕೃತಿಯ ಗುರುತು ಚಿನ್ನದ ಪರಿಶುದ್ಧತೆ ಪ್ರಮಾಣವನ್ನು ದೃಢೀಕರಿಸುತ್ತದೆ. ಬಿಐಎಸ್ ನೀಡಿರುವ ಹಾಲ್ ಮಾರ್ಕ್ ನ್ನು ಸಾಮಾನ್ಯವಾಗಿ ಆಭರಣದ ಮಧ್ಯ ಭಾಗದಲ್ಲಿ ಹಾಕಲಾಗಿರುತ್ತದೆ.
ಪ್ಯೂರಿಟಿ ಗ್ರೇಡ್
ಆಭರಣದ ಮೇಲೆ ದಾಖಲು ಮಾಡಿರುವ ಅಂಕೆಗಳು ಎಷ್ಟು ಕ್ಯಾರಟ್ ಎಂಬುದನ್ನು ಸೂಚಿಸುತ್ತದೆ.
999 - 24 ಕ್ಯಾರಟ್
958 - 23 ಕ್ಯಾರಟ್
916 - 22 ಕ್ಯಾರಟ್
875 - 21 ಕ್ಯಾರಟ್
750 - 18 ಕ್ಯಾರಟ್
708 - 17 ಕ್ಯಾರಟ್
585 - 14 ಕ್ಯಾರಟ್
417 - 10 ಕ್ಯಾರಟ್
375 - 9 ಕ್ಯಾರಟ್
333 - 8 ಕ್ಯಾರಟ್
ಹಾಲ್ ಮಾರ್ಕ್ ಸೆಂಟರ್ ಲೋಗೋ
ಈ ಮಾರ್ಕ್ ಚಿನ್ನಾಭರಣವನ್ನು ಎಲ್ಲಿ ತಯಾರು ಮಾಡಲಾಗಿದೆ? ಯಾವ ವರ್ಷ ತಯಾರಿಸಲಾಗಿದೆ ಎಂಬುದನ್ನು ತಿಳಿಸುತ್ತದೆ. ಇದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು http://www.bis.org.in/cert/hallmarkass.htm ಲಾಗ್ ಇನ್ ಆಗುವುದರ ಮುಖೇನ ಪಡೆದುಕೊಳ್ಳಬಹುದು.
ತಯಾರಿಕೆ ವರ್ಷವೂ ಮಹತ್ವದ್ದು
ಕೋಡ್ ಸಂಖ್ಯೆಗಳು ಚಿನ್ನಾಭರಣ ತಯಾರಾದ ವರ್ಷವನ್ನು ಪ್ರತಿನಿಧಿಸುತ್ತವೆ. ಇದನ್ನು ಬಿಐಎಸ್ ನಿರ್ಧಾರ ಮಾಡುತ್ತದೆ. ಉದಾಹರಣೆಗೆ 'ಎ' ಎಂದಿದ್ದರೆ 2000ನೇ ಇಸವಿ, 'ಜೆ' ಎಂದಿದ್ದರೆ 2008 ಎಂದು ತಿಳಿದುಕೊಳ್ಳಬಹುದು.
ತಯಾರಿಕರ ದೃಢೀಕರಣ
ಪ್ರಖ್ಯಾತ ಚಿನ್ನ ತಯಾರಿಕ ಸಂಸ್ಥೆಗಳು ಈ ಮಾರ್ಕ್ ಪಡೆದುಕೊಂಡಿರುತ್ತವೆ. ನೋಂದಣಿಯಾಗದ ಸಂಸ್ಥೆಗಳ ಚಿನ್ನಕ್ಕೆ ಚಿಹ್ನೆ ನೀಡಲಾಗುವುದಿಲ್ಲ.
ಚಿನ್ನಾಭರಣ ಪರೀಕ್ಷೆ ಏಕೆ ಮಾಡಬೇಕು?
ಖರೀದಿಸಿದ ಆಭರಣಗಳನ್ನು ಮಾರಬೇಕಾದ ಸಂದರ್ಭ ಒದಗಿ ಬಂದರೆ ಮೇಲಿನ ಎಲ್ಲ ಅಂಶಗಳು ಪ್ರಮುಖವಾಗುತ್ತವೆ. ಹೈದ್ರಾಬಾದ್ ನಲ್ಲಿ ಸ್ಥಾಪನೆ ಮಾಡಿರುವ ಚಿನ್ನಾಭರಣ ಪರಿಶೀಲನೆ ಯಂತ್ರ ಆಭರಣದ ಕ್ಯಾರಟ್ ನಿರ್ಧರಿಸಿ ನೀಡುತ್ತದೆ. ಕಳಪೆ ಚಿನ್ನವನ್ನು ಖರೀದಿಸಿದ್ದರೆ ನೀವು ನಷ್ಟ ಮಾಡಿಕೊಳ್ಳುವುದರಲ್ಲಿ ಅನುಮಾನವಿಲ್ಲ.(ಗುಡ್ ರಿಟರ್ನ್ಸ್. ಇನ್)


Click it and Unblock the Notifications