ಅನಾರೋಗ್ಯ ಪೀಡಿತ ವ್ಯಕ್ತಿ ಮೃತನಾದರೆ ಆತನ ಆದಾಯ ತೆರಿಗೆ ಪಾವತಿ ಮಾಡಲು ಅಥವಾ ಮರುಪಾವತಿ ಪಡೆಯಲು ಉತ್ತರಾಧಿಕಾರಿ ಅಗತ್ಯ ಬೀಳುತ್ತದೆ. ಈ ಕಾನೂನು ಬದ್ಧ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ ಹೇಗೆ ಎಂಬುದನ್ನು ತಿಳಿದುಕೊಂಡಿರಬೇಕಾಗುತ್ತದೆ.
ಆದಾಯ ತೆರಿಗೆ ಇಲಾಖೆಯ ವೆಬ್ ತಾಣಕ್ಕೆ ಲಾಗ್ ಇನ್ ಆಗಿ ಉತ್ತರಾಧಿಕಾರಿ ನೋಂದಣಿ ಮಾಡಬೇಕಾಗುತ್ತದೆ. ಹಾಗಾದರೆ ಕಾನೂನು ಬದ್ಧವಾಗಿ ಉತ್ತರಾಧಿಕಾರಿ ಯಾವ ರೀತಿ ಆಧಾದಾಯ ತೆರಿಗೆ ಪಾವತಿ ಹಕ್ಕು ಪಡೆದುಕೊಳ್ಳಬಹುದು?. ಅದಕ್ಕೆ ಅನುಸರಿಸಬೇಕಾದ ಕ್ರಮಗಳೇನು? ಎಂಬುದರ ಬಗ್ಗೆ ತಿಳಿದುಕೊಳ್ಳೊಣ.[ಆನುವಂಶಿಕ ಆಸ್ತಿ ಪಡೆವ ಮುನ್ನ ಏಳು ಹೆಜ್ಜೆಗಳು]

ಆದಾಯ ತೆರಗಿ ಮರುಪಾವತಿ ಸಹ ಮೃತ ವ್ಯಕ್ತಿಯ ಹೆಸರಲ್ಲಿ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಉತ್ತರಾಧಿಕಾರಿ ಎನಿಸಿಕೊಂಡವರು ಸಂಪೂರ್ಣ ವ್ಯವಹಾರ ನೋಡಿಕೊಳ್ಳಬೇಕಾಗುತ್ತದೆ.
ಉತ್ತರಾಧಿಕಾರಿ ನೋಂದಣಿ ಪ್ರಕ್ರಿಯೆ ಹೇಗೆ?
1. ಮೊದಲು ಇ-ಫಿಲ್ಲಿಂಗ್ ಸೈಟ್ ಗೆ ಲಾಗ್ ಇನ್ ಆಗಿ
2. ಅಲ್ಲಿಂದ ಮೈ ಅಕೌಂಟ್ ಗೆ ತೆರಳಿ: ಅಗತ್ಯ ದಾಖಲೆಗಳು ಅಂದರೆ ಪ್ಯಾನ್ ನಂಬರ್, ಡಿಒಬಿ, ಅಡ್ಡ ಹೆಸರು, ಹೆಸರು ಮತ್ತು ಸಾವಿಗೀಡಾದ ವ್ಯಕ್ತಿಯ ಮರಣ ದಾಖಲೆಯ ಸ್ಕ್ಯಾನ್ ಕಾಪಿಯನ್ನು ನೀಡಬೇಕಾಗುವುದು.
3. ಮತ್ತೊಂದು ಜಿಪ್ ಪೈಲ್ ನಲ್ಲಿ 1 ಎಂಬಿಗೆ ಮೀರದಂತೆ ಕೆಲ ದಾಖಲೆಗಳನ್ನು ನೀಡಬೇಕಾಗುತ್ತದೆ, ಇದು ಮರಣ ಪ್ರಮಾಣ ಪತ್ರದ ಪ್ರತಿ, ಮರಣ ಹೊಂದಿದ ವ್ಯಕ್ತಿಯ ಪ್ಯಾನ್ ಕಾರ್ಡ್ ಪ್ರತಿ, ನಿಮ್ಮ ದೃಢೀಕೃತ ಪ್ಯಾನ್ ಕಾರ್ಡ್ ಪ್ರತಿ, ಉತ್ತರಾಧಿಕಾರಿ ಪ್ರಮಾಣ ಪತ್ರ, ನೋಟರಿ ಮಾಡಿಸಿದ ಅಫಿಡವಿಟ್ ಒಳಗೊಂಡಿರಬೇಕು.
ಉತ್ತರಾಧಿಕಾರಿ ಪ್ರಮಾಣ ಪತ್ರ ಎಂದರೇನು? ಎಲ್ಲಿಂದ ಪಡೆದುಕೊಳ್ಳಬಹುದು?
* ನ್ಯಾಯಾಲಯದ ಅನುಮತಿಯ ಮೇರೆಗೆ ಉತ್ತರಾಧಿಕಾರಿ ಪ್ರಮಾಣ ಪತ್ರ ಪಡೆದುಕೊಳ್ಳಬಹುದು.
* ಸ್ಥಳೀಯ ಕಂದಾಯ ಇಲಾಖೆ ಸಹ ಪ್ರಮಾಣ ಪತ್ರ ನೀಡುವ ಅಧಿಕಾರ ಹೊಂದಿರುತ್ತದೆ.
* ನೋಂದಣಿ ಮಾಡಿಸಿಸದ ವಿಲ್ ಸಹ ಪ್ರಮಾಣ ಪತ್ರವಾಗಬಲ್ಲದು.
* ಕುಟುಂಬದ ಪೆನ್ಶನ್ ಪತ್ರದ ಆಧಾರದ ಮೇಲೂ ಉತ್ತರಾಧಿಕಾರಿ ಪತ್ರ ಪಡೆದುಕೊಳ್ಳಬಹುದು.[ವಿಲ್ ಮಾಡಿಸಿದರೆ ಸಾಲದು, ನೋಂದಣಿಯೂ ಆಗಿರಬೇಕು]
4. ಕೊನೆಯದಾಗಿ ಸಬ್ ಮಿಟ್ ಐಕಾನ್ ಕ್ಲಿಕ್ ಮಾಡಿ
5. ಈ ಎಲ್ಲ ಹಂತಗಳು ಮುಗಿದ ನಂತರ ಮತ್ತೊಮ್ಮೆ ಎಲ್ಲಾ ದಾಖಲೆಗಳು ಸರಿಯಾಗಿವೆಯೇ ಎಂದು ಪರಿಶೀಲಿಸಬೇಕು. ನಿಮ್ಮ ಉತ್ತರಾಧಿಕಾರ ಹಕ್ಕು ಊರ್ಜಿತ ಅಥವಾ ಅನುರ್ಜಿತ ಎಂಬುದು ಇಲ್ಲಿ ಗೊತ್ತಾಗುತ್ತದೆ.
ಇದೊಂದು ತಾತ್ಕಾಲಿಕ ಅಥವಾ ಶಾಶ್ವತ ಉತ್ತರಾಧಿಕಾರತ್ವವಾಗಿದಯೇ ಎಂಬುದು ನೀವು ಕೊಡಮಾಡಿದ ದಾಖಲೆಗಳ ಆಧಾರಲ್ಲಿ ನಿರ್ಧಾರ ಮಾಡಲಾಗುತ್ತದೆ.


Click it and Unblock the Notifications