ಭಾರತದ ಖಾಸಗಿ ವಲಯದಲ್ಲಿ ಪ್ರಮುಖ ಸ್ಥಾನ ಗಳಿಸಿರುವ ಐಸಿಐಸಿಐ ಬ್ಯಾಂಕ್ ಯುವಕರನ್ನು ದೃಷ್ಟಿಯಲ್ಲಿಟ್ಟುಕೊಂಡು 'ಪೊಕೆಟ್ಸ್' ಎಂಬ ಹೆಸರಿನಲ್ಲಿ ನೂತನ ಅಪ್ಲಿಕೇಷನ್ ಬಿಡುಗಡೆ ಮಾಡಿದೆ.
ನಿಮ್ಮ ಕೈಲಿರುವ ಸ್ಮಾರ್ಟ್ ಫೋನ್ ನಿಂದ ಸುಲಭವಾಗಿ ಹಣ ರವಾನೆ ಸಾಧ್ಯಮಾಡಿದೆ, ಗೂಗಲ್ ಪ್ಲೇ ಸ್ಟೋರ್ ನಿಂದ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡರೆ ಹಣ ರವಾನೆ ತಂತ್ರಗಳನ್ನು ತಿಳಿದುಕೊಳ್ಳಬಹುದು. ಐಸಿಐಸಿಐ ಬ್ಯಾಂಕ್ ಗ್ರಾಹಕರು ಅಪ್ಲಿಕೇಷನ್ ಹಾಕಿಸಿಕೊಂಡರೆ ಬೇರೆ ಬ್ಯಾಂಕ್ ಖಾತೆಗೆ ಹಣ ಹಾಕುವ ಸೌಲಭ್ಯವನ್ನು ಪಡೆದುಕೊಳ್ಳುತ್ತಾರೆ. [ಕ್ರೆಡಿಟ್ ಕಾರ್ಡ್ ಮೇಲಿರುವ ಅಂಕೆಗಳು ಏನನ್ನು ಸೂಚಿಸುತ್ತವೆ?]

ವೀಸಾ ಕಾರ್ಡ್ ರೀತಿಯಲ್ಲೇ ಇದು ಕೆಲಸ ಮಾಡುತ್ತದೆ. ನೀವು ಯಾವುದಾದರೂ ದೊಡ್ಡ ಮೊತ್ತದ ಖರೀದಿ ಮಾಡಿದರೆ ಹಣ ಪಾವತಿಯೂ ಈ ಅಪ್ಲಿಕೇಷನ್ ಮೂಲಕವೇ ಸಾಧ್ಯವಾಗುತ್ತದೆ.
ಇಮೇಲ್ ಗೆ, ಮೊಬೈಲ್ ನಂಬರ್ ಗೆ ಸ್ನೇಹಿತರ ಫೇಸ್ ಬುಕ್ ಖಾತೆಗೂ ಹಣ ಹಾಕುವ ಅವಕಾಶ ನೀಡುತ್ತದೆ. ಈ ಅಪ್ಲಿಕೇಷನ್ ನೆರವಿನಿಂದ ಮೊಬೈಲ್ ರೀಚಾರ್ಜ್, ಬಿಲ್ ಗಳ ಪಾವತಿ, ಸಿನಿಮಾ ಟಿಕಲೆಟ್ ಬುಕಿಂಗ್, ಫೂಡ್ ಆರ್ಡರ್, ಗಿಫ್ಟ್ ಖರೀದಿ ಎಲ್ಲವೂ ಸುಲಭ ಸಾಧ್ಯ.[ಪಾನ್ ಕಾರ್ಡ್ ಕಳೆದುಕೊಂಡರೆ ಏನು ಮಾಡಬೇಕು?]
ಈ ಅಪ್ಲಿಕೇಷನ್ ಬಳಸುವವರಿಗೆ ಝಿರೋ ಬ್ಯಾಲೆನ್ಸ್ ಸೌಲಭ್ಯ ನೀಡಲಾಗಿದೆ. ಅಪ್ಲಿಕೇಶನ್ ಮತ್ತು ಉಳಿತಾಯ ಖಾತೆಯನ್ನು ಪೊಕೆಟ್ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ. ಇಂದಿನ ಯುವಜನತೆ ಅಗತ್ಯಕ್ಕೆ ತಕ್ಕಂತೆ ಅಪ್ಲಿಕೇಶನ್ ಹೊರತರಲಾಗಿದೆ. ಸಂಶೋಧನೆ ಮತ್ತು ಹೊಸ ತಂತ್ರಜ್ಞಾನಗಳಿಗೆ ಸದಾ ಪ್ರೋತ್ಸಾಹ ನೀಡುವ ಕಂಪನಿ ಇಂಥದ್ದೊಂದು ವಿನೂತನ ಕ್ರಮ ಜಾರಿಗೆ ತಂದಿದೆ ಎಂದು ಐಸಿಐಸಿಐ ಬ್ಯಾಂಕ್ ಎಂಡಿ ಚಂದಾ ಕೊಚ್ಚಾರ್ ತಿಳಿಸಿದ್ದಾರೆ.


Click it and Unblock the Notifications