For Quick Alerts
ALLOW NOTIFICATIONS  
For Daily Alerts

ಆಪತ್ಕಾಲದಲ್ಲಿ ಪಡೆಯಬಹುದಾದ ಸಾಲಗಳು ಯಾವವು?

|

ಆಪತ್ಕಾಲಕ್ಕೆ ನೆರವಾಗಲಿ ಎಂದು ನಾವು ಹಣವನ್ನು ಹಲವಾರು ಕಡೆ ಹೂಡಿಕೆ ಮಾಡಿರುತ್ತೇವೆ. ಬ್ಯಾಂಕ್ ಡಿಪಾಸಿಟ್, ಷೇರು ಇನ್ನು ಅನೇಕ ಕಡೆ ಲಾಭಾಂಶ ಗಳಿಸಲು ಮತ್ತು ತುರ್ತು ಸಂದರ್ಭಕ್ಕೆ ಬೇಕಾಗುತ್ತದೆ ಎಂದು ನಂಬಿ ಹಣ ಹಾಕಿರುತ್ತೇವೆ.

ಆದರೆ ನೀವು ಈ ಬಗೆಯ ಯಾವುದೇ ಹಣ ಹೂಡಿಕೆ ಮಾಡಿರದ ಸಂದರ್ಭದಲ್ಲಿ ಆರ್ಥಿಕ ಮುಗ್ಗಟ್ಟು ಎದುರಾದರೆ ಏನು ಮಾಡಬೇಕು? ಎಂಬುದಕ್ಕೆ ಉತ್ತರ ನಮ್ಮ ಬಳಿ ಇರುವುದಿಲ್ಲ. ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಅತಿ ಶೀಘ್ರವಾಗಿ ಹಣ ಬೇಕಾದಾಗ ಚಿಂತೆಗೀಡಾಗುತ್ತೇವೆ. ಹಾಗಾದರೆ ಇಂಥ ಸಂದರ್ಭಗಳಲ್ಲಿ ಯಾವ ಮೂಲಗಳಿಂದ ಹಣ ಪಡೆಯಬಹುದು ಎಂಬುದಕ್ಕೆ ಇಲ್ಲಿದೆ ಉತ್ತರ.[ಯಾವ ಬ್ಯಾಂಕ್ ನಿಂದ ಕಿಸಾನ್ ವಿಕಾಸ್ ಪತ್ರ ಪಡೆಯಬಹುದು?]

ಆಪತ್ಕಾಲದಲ್ಲಿ ಪಡೆಯಬಹುದಾದ ಸಾಲಗಳು ಯಾವವು?

ಚಿನ್ನದ ಮೇಲೆ ಸಾಲ
ನಿಮ್ಮ ಬಳಿ ಇರುವ ಚಿನ್ನವನ್ನು ಅಡವಿಟ್ಟು ಅತಿ ಶೀಘ್ರವಾಗಿ ಸಾಲ ಪಡೆಯಬಹುದು. ಸಾಮಾನ್ಯವಾಗಿ ನಿಮ್ಮ ಚಿನ್ನಾಭರಣದ ಮೌಲ್ಯದ ಶೇ. 85 ರಷ್ಟು ಮೊತ್ತವನ್ನು ಸಾಲ ಪಡೆಯಲು ಸಾಧ್ಯವಿದೆ. ಸಾಲದ ಮೇಲೆ ಶೇ. 11 ರಿಂದ 20 ರ ವರೆಗೆ ಬಡ್ಡಿ ವಿಧಿಸಲಾಗುವುದು. ನಂತರ ನೀವು ಆಭರಣ ಬಿಡಿಸಿಕೊಳ್ಳಲು ವಿಫಲರಾದರೆ ಬ್ಯಾಂಕ್ ಅದನ್ನು ಮುಟ್ಟುಗೋಲು ಹಾಕಿಕೊಳ್ಳುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.

ಕ್ರೆಡಿಟ್ ಕಾರ್ಡ್ ಮೇಲೆ ಸಾಲ
ಇದು ಸಹ ಅತ್ಯಂತ ವೇಗವಾಗಿ ಸಾಲ ಪಡೆಯುವ ಮತ್ತೊಂದು ವಿಧಾನವಾಗಿದೆ. ಆದರೆ ಇಲ್ಲಿ ಸಾಲ ಪಡೆಯುವ ಮಿತಿಗೆ ನಿರ್ಬಂಧವಿದೆ. ಅಲ್ಲದೇ ಅತಿ ಹೆಚ್ಚಿನ ಬಡ್ಡಿ ತೆರಬೇಕಾದದ್ದು ಅನಿವಾರ್ಯ. 50 ಸಾವಿರ ರೂ. ಗಿಂತ ಅಧಿಕ ಸಾಲ ಬೇಕಿದ್ದಲ್ಲಿ ಈ ವಿಧಾನ ನಿಷ್ಪ್ರಯೋಜಕವಾಗುತ್ತದೆ.
ಇಲ್ಲಿ ಶೇ. 24 ರಿಂದ ಶೇ. 40 ರವರೆಗೂ ಬಡ್ಡಿ ವಿಧಿಸಬಹುದು. ಹಣ ಪಡೆಯಲು ಬೇರೆ ಯಾವ ದಾರಿ ಉಳಿದಿಲ್ಲ ಎಂಬ ಸಂದರ್ಭದಲ್ಲಿ ಮಾತ್ರ ಕ್ರೆಡಿಟ್ ಕಾರ್ಡ್ ಮೇಲೆ ಸಾಲಪಡೆಯಬೇಕು.[ಗೃಹ ಸಾಲ ಒಳಗೊಳ್ಳುವ ಶುಲ್ಕಗಳು ಯಾವವು?]

ಪರ್ಸನಲ್ ಲೋನ್
ಇದು ಅಷ್ಟೇನು ವೇಗವಾಗಿ ಸಾಲ ಪಡೆಯುವ ವಿಧಾನ ಅಲ್ಲದಿದ್ದರೂ ಆಯ್ಕೆಯನ್ನು ಬಳಸಿಕೊಳ್ಳಬಹುದು. ಕ್ರೆಡಿಟ್ ಕಾರ್ಡ್ ಸಾಲಕ್ಕೆ ಹೋಲಿಸಿದರೆ ಇಲ್ಲಿ ಬಡ್ಡಿ ದರ ಕಡಿಮೆಯೇ. ಶೇ. 12 ರಿಂದ ಶೇ. 24 ರವರೆಗೆ ಬಡ್ಡಿ ದರ ವಿಧಿಸಲಾಗುವುದು. ಆದರೆ ಸಾಲ ಪಡೆಯುವ ಮೊತ್ತದಲ್ಲಿ ಕೆಲ ಪ್ರಮಾಣದ ಹಣವನ್ನು ಪೂರ್ವಪಾವತಿ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಸಾಲದ ಮೊತ್ತದ ಶೇ. 4 ರಷ್ಟನ್ನು ಬಂಡವಾಳದ ರೀತಿ ಇಟ್ಟುಕೊಳ್ಳಲಾಗುತ್ತದೆ.[ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಹೇಗೆ?]

ಹೂಡಿಕೆ ಮೇಲಿನ ಸಾಲ
ಷೇರು, ಪೋಸ್ಟ್ ಯೋಜನೆಗಳಾದ ಕೆವಿಪಿ ಮತ್ತು ಎನ್ ಎಸ್ ಸಿ ಗಳ ಮೇಲೂ ಸಾಲ ಪಡೆಯಬಹುದು. ನಾವು ನೀಡುವ ಪ್ರಮಾಣ ಪತ್ರದ ಮೊತ್ತದ ಆಧಾರದ ಮೇಲೆಯೇ ಸಾಲ ನೀಡಿಕೆ ಮೊತ್ತವೂ ನಿರ್ಧರಿತವಾಗುತ್ತದೆ. ಸಾಲ ನೀಡಿಕೆ ಅವಧಿ ಎರಡು ವರ್ಷಕ್ಕೆ ಸೀಮಿತವಾಗಿರುತ್ತದೆ. ಸಾಲ ನೀಡಿಕೆಗೆ ಕೆಲವೊಂದು ಶುಲ್ಕವನ್ನು ಪಡೆದುಕೊಳ್ಳಲಾಗುತ್ತದೆ.

ಕೊನೆ ಮಾತು: ಮೊದಲೇ ಹೇಳಿದಂತೆ ಈ ಸಾಲಗಳು ನಿಮ್ಮ ಕೊನೆಯ ಆಯ್ಕೆಯಾಗಿರಬೇಕು. ಹಣ ದೊರೆಯುತ್ತದೆ ಎಂಬ ಕಾರಣಕ್ಕೆ ದಿಢೀರ್ ಎಂದು ಈ ಬಗೆಯ ಸಾಲ ಪಡೆದುಕೊಂಡರೆ ಸುಮ್ಮನೆ ಅತಿ ಹೆಚ್ಚಿನ ಬಡ್ಡಿ ತೆರಬೇಕಾಗುತ್ತದೆ! (ಗುಡ್ ರಿಟರ್ನ್ಸ್. ಇನ್)

English summary

Smart Ways to Get Fast Cash in an Emergency Situation

Most of us invest so we can utlise the sum so invested in times of dire emergency. There are some investments that are pretty liquid like bank deposits, shares etc., which can be encashed pretty quickly. But, what if you do not have any investments and there is an emergency like quick medical operation that needs cash urgently. Here are few methods which you could rely on for fast cash.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X