ಕೆಲಸಕ್ಕೆ ಸೇರುವ ಮೊದಲು ಅಪಾಯಿಂಟ್ ಮೆಂಟ್ ಲೆಟರ್ ನಲ್ಲಿನ ಮೊತ್ತ ನೋಡಿ ಸಂತಸಗೊಂಡಿರುತ್ತೇವೆ. ಆದರೆ ಮೊದಲ ತಿಂಗಳ ವೇತನ ಕೈಗೆ ಬಂದಾಗ ಏನೋ ಒಂದು ತರಹದ ಬೇಸರ ಒಡಮೂಡುತ್ತದೆ. ಅಪಾಯಿಂಟ್ ಮೆಂಟ್ ಲೆಟರ್ ನಲ್ಲಿ ಇರುವ ಮೊತ್ತಕ್ಕೂ ಪಾವತಿಯಾದ ಮೊತ್ತಕ್ಕೂ ಏನೋ ವ್ಯತ್ಯಾಸವಾದಂತೆ ಅನಿಸುತ್ತದೆ.
ಈಗ ನೀವು ನಿಮ್ಮ ಕಂಪನಿಯನ್ನು ದೂರುವಂತಿಲ್ಲ. ನಿಮ್ಮನ್ನು ನೀವೆ ಬೈದುಕೊಳ್ಳಬೇಕಾಗುತ್ತದೆ. ಸಿಟಿಸಿ ಮತ್ತು ಟೇಕ್ ಹೋಮ್ ನಡುವಿನ ವ್ಯತ್ಯಾಸ ತಿಳಿದುಕೊಳ್ಳದೇ ರುಜು ಮಾಡಿದ್ದು ನಿಮ್ಮದೇ ತಪ್ಪು. ಹಾಗಾಗಿ ಸಿಟಿಸಿ ಮತ್ತು ಟೇಕ್ ಹೋ ಸ್ಯಾಲರಿ ನಡುವಿನ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ತಿಳಿದುಕೊಂಡಿರಬೇಕಾಗುತ್ತದೆ.[ಪಾನ್ ಕಾರ್ಡ್ ಹೇಗೆ ಪಡೆಯಬೇಕು? ಏತಕ್ಕೆ ಬೇಕು?]

ಕಾಸ್ಟ್ ಟು ಕಂಪನಿ (ಸಿಟಿಸಿ)ಅಂದರೆ ಏನು?
ಸಿಬ್ಬಂದಿಗೆ ಕಂಪನಿ ಕೊಡಮಾಡುವ ಮೊತ್ತವನ್ನು ಕಾಸ್ಟ್ ಟು ಕಂಪನಿ ಎಂದು ಕರೆಯಬಹುದು. ಇದು ಬೋನಸ್ ಮತ್ತಿತರ ಸಂಗತಿಗಳನ್ನು ಒಳಗೊಂಡಿರುತ್ತದೆ.
ಭವಿಷ್ಯ ನಿಧಿ ಸಹ ಸಿಟಿಸಿ ಗೆ ಸೇರ್ಪಡೆಯಾಗಿರುತ್ತದೆ. ಹಾಗಾಗಿ ನಿಮಗೆ ಕಂಪನಿ ವೇತನದ ಆಫರ್ ನೀಡಿದ ಮೊತ್ತಕ್ಕಿಂತ ಶೇ. 10-20 ರಷ್ಟು ಕಡಿಮೆ ಹಣ ಕೈ ಸೇರುತ್ತದೆ. ಅಂದರೆ ಪಿಎಫ್ ಮತ್ತಿತರ ಮೊತ್ತವನ್ನು ಕಡಿತ ಮಾಡಿಕೊಳ್ಳಲಾಗುತ್ತದೆ.[ಯಾವ ಬ್ಯಾಂಕ್ ನಿಂದ ಕಿಸಾನ್ ವಿಕಾಸ್ ಪತ್ರ ಪಡೆಯಬಹುದು?]
ನಿಮ್ಮ ಸಿಟಿಸಿ ಅಥವಾ ಗ್ರಾಸ್ ಸ್ಯಾಲರಿ ಅಂದರೇನು?
ಉದಾಹರಣೆಯೊಂದಿಗೆ ಇದನ್ನು ನೋಡೋಣ
ಬೆಸಿಕ್ ಸ್ಯಾಲರಿ-3,೦೦,೦೦೦ ರೂ.
ಮನೆ ಬಾಡಿಗೆ ಪಾವತಿ-60 ಸಾವಿರ
ವೈದ್ಯಕೀಯ ವೆಚ್ಚಕ್ಕೆ-15 ಸಾವಿರ
ಕನ್ವೆಯನ್ಸ್ ವೆಚ್ಚ- 8 ಸಾವಿರ
ಒಟ್ಟು ವೇತನದ ಮೊತ್ತ ವರ್ಷಕ್ಕೆ- 3,83,000 ರೂ. (ತಿಂಗಳಿಗೆ ಗ್ರಾಸ್ ಸ್ಯಾಲರಿ-31,917 ರೂ.)
ಕಡಿತಗಳು ಯಾವವು?
ಬೆಸಿಕ್ ಸ್ಯಾಲರಿ ಮತ್ತು ಎಚ್ ಆರ್ ಎ ಮೇಲಿನ ತೆರಿಗೆ-11,000 ರೂ.
ಇಪಿಎಫ್(ಬೆಸಿಕ್ ಸ್ಯಾಲರಿ ಮೇಲೆ ಶೇ. 12)- 36,000 ರೂ.
ವೈದ್ಯಕೀಯ ವಿಮೆ-3600 ರೂ.
ನೆಟ್ ಸ್ಯಾಲರಿ-3,39,400 ರೂ. (ಪ್ರತಿ ತಿಂಗಳಿಗೆ ವೇತನ-28,283 ರೂ.)
ಇಲ್ಲಿ ನಿಮಗೆ ವ್ಯತ್ಯಾಸ ಸರಿಯಾಗಿ ಗೊತ್ತಾಗುವುದು, ಮೇಲಿನ ಅಂಕಿ ಅಂಶಾಗಳು ನಿಮ್ಮ ಸಿಟಿಸಿ ಮತ್ತು ನೆಟ್ ಸ್ಯಾಲರಿ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಸೂಚಿಸುವುದು.
ನಿಮಗೆ ಕಂಪನಿ ಸ್ಯಾಲರಿ ಆಫರ್ ನೀಡಿದಾಗಲೇ ಇದನ್ನೆಲ್ಲ ತಿಳಿದುಕೊಳ್ಳುವುದು ಉತ್ತಮ. ಕೆಲವೊಮ್ಮೆ ತೆರಿಗೆ ವಿನಾಯಿತಿಯಿಂದಲೂ ತಪ್ಪಿಸಿಕೊಳ್ಳಲು ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗುವ ಸಂಭವವಿರುತ್ತದೆ. ಇದರೊಂದಿಗೆ ವೈದ್ಯಕೀಯ ವಿಮೆಯನ್ನು ಭರ್ತಿ ಮಾಡುವುದು ಕಡ್ಡಾಯ.
ಕಂಪನಿಯಿಂದ ಊಟಕ್ಕೆ ಕೂಪನ್ ಪಡೆಯುವ ಮೂಲಕ ತೆರಿಗೆ ವಿನಾಯಿತಿ ಪಡೆದುಕೊಳ್ಳುವ ತಂತ್ರವೂ ಕೆಲವು ಕಟಡೆ ಚಾಲ್ತಿಯಲ್ಲಿದೆ. ಸಿಬ್ಬಂದಿ ಮತ್ತು ಕಂಪನಿ ನಡುವಿನ ಕರಾರಿಗೆ ಸಂಬಂಧಿಸಿಯೇ ವೇತನ ಪಾವತಿಯಾಗುತ್ತಿರುತ್ತದೆ.
ಕೊನೆ ಮಾತು: ಕೆಲಸಕ್ಕೆ ಸೇರುವ ಮೊದಲು ಅಥವಾ ಅಪಾಂಟ್ ಮೆಂಟ್ ಲೆಟರ್ ಗೆ ಸಹಿ ಹಾಕುವ ಮೊದಲು ಸ್ಯಾಲರಿ ಕುರಿತಾಗಿ ಸಮಗ್ರ ಮಾತುಕತೆ ಮಾಡಿಕೊಳ್ಳಬೇಕು ಮತ್ತು ತೆರಿಗೆ ವಿನಾಯಿತಿ ತಂತ್ರಗಳನ್ನು ತಿಳಿದುಕೊಂಡಿರಬೇಕು.(ಗುಡ್ ರಿಟರ್ನ್ಸ್.ಇನ್)


Click it and Unblock the Notifications