ಕಳೆದ ವರ್ಷ ಕೇಂದ್ರ ಸರ್ಕಾರ ಮತ್ತೆ ಜಾರಿಗೆ ತಂದಿರುವ ಕಿಸಾನ್ ವಿಕಾಸ ಪತ್ರ ಚಿಕ್ಕ ಪ್ರಮಾಣದ ಉಳತಾಯ ಯೋಜನೆಗೆ ನೆರವಾಗುತ್ತಿದೆ. ಕಪ್ಪು ಹಣವನ್ನು ಇದರಲ್ಲಿ ತೊಡಗಿಸಲಾಗುತ್ತಿದೆ ಎಂದು 20011 ರಲ್ಲಿ ಕಿಸಾನ್ ವಿಕಾಸ ಪತ್ರ ಸವಲತ್ತನ್ನು ಬಂದ್ ಮಾಡಲಾಗಿತ್ತು.
80ರ ದಶಕದಲ್ಲಿ ಜಾರಿಗ ಬಂದ ಯೋಜನೆ ಐದು ವರ್ಷ ಆರು ತಿಂಗಳಲ್ಲಿ ನೀವು ಹೂಡಿಕೆ ಮಾಡಿದ ಹಣವನ್ನು ದ್ವಿಗುಣ ಮಾಡಿ ನೀಡುತ್ತಿತ್ತು. ಈಗ ಪುನಃ ಯೋಜನೆಯನ್ನು ಅನುಷ್ಠಾನ ಮಾಡಲಾಗಿದ್ದು ಚಿಕ್ಕ ಪ್ರಮಾಣದ ಹೂಡಿಕೆಗೆ ಉತ್ತಮ ತಾಣವೆಂದೇ ಪರಿಗಣಿಸಲ್ಪಟ್ಟಿದೆ.[ಆರ್ ಬಿಐ ಹೊಸ ಹಣಕಾಸು ನೀತಿ ಮುಖ್ಯಾಂಶಗಳು]

ಯಾವ ಯಾವ ಬ್ಯಾಂಕ್ ಗಳಲ್ಲಿ ಕಿಸಾನ್ ವಿಕಾಸ್ ಪತ್ರ ಪಡೆಯಬಹುದು?
ಭಾರತೀಯ ಅಂಚೆ ಇಲಾಖೆ ಹೊರತುಪಡಿಸಿ ಅನೇಕ ಬ್ಯಾಂಕ್ ಗಳು ಸಹ ಕಿಸಾನ್ ವಿಕಾಸ ಪತ್ರ ಕೊಡಮಾಡುತ್ತವೆ.
1. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
2. ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ
3. ಪಂಜಾಬ್ ನ್ಯಾಷನಲ್ ಬ್ಯಾಂಕ್
4. ಬ್ಯಾಂಕ್ ಆಫ್ ಬರೋಡಾ
5. ಸ್ಟೇಟ್ ಬ್ಯಾಂಕ್ ಆಫ್ ಬಿಕನೆರ್ ಮತ್ತು ಜೈಪುರ್
6. ಅಲಹಾಬಾದ್ ಬ್ಯಾಂಕ್
7. ಆಂಧ್ರಾ ಬ್ಯಾಂಕ್
8. ಬ್ಯಾಂಕ್ ಆಫ್ ಮಹಾರಾಷ್ಟ್ರ
9. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
10. ಕಾರ್ಪೊರೇಷನ್ ಬ್ಯಾಂಕ್
11. ದೇನಾ ಬ್ಯಾಂಕ್
12. ಇಂಡಿಯನ್ ಬ್ಯಾಂಕ್
13. ಯುನಿಯನ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
14. ಯುಸಿಒ ಬ್ಯಾಂಕ್
15. ಓರಿಯಂಟಲ್ ಬ್ಯಾಂಕ್
16. ಐಡಿಬಿಐ ಬ್ಯಾಂಕ್
17. ಐಸಿಐಸಿಐ ಬ್ಯಾಂಕ್
ಕಿಸಾನ್ ವಿಕಾಸ ಪತ್ರಕ್ಕೆ ಎಷ್ಟು ಬಡ್ಡಿ ನೀಡಲಾಗುತ್ತದೆ?
ಪ್ರತಿ ವರ್ಷ ಕಿಸಾನ್ ವಿಕಾಸ ಪತ್ರ ಶೇ. 8.67 ಬಡ್ಡಿ,ನೀಡುತ್ತದೆ. ಅಂದರೆ ಎಂಟು ವರ್ಷ ನಾಲ್ಕು ತಿಂಗಳಿಗೆ ನೀವು ಇಟ್ಟ ಹಣ ದ್ವಿಗುಣಗೊಳ್ಳುವುದು.
ನೀವು ತೆರಿಗೆ ವಿನಾಯಿತಿ ಪಡೆಯಲು ಸಾಧ್ಯವಿಲ್ಲ. ಆದರೆ ಇಲ್ಲಿ ಹೂಡಿಕೆ ಮಾಡುವ ಮೊತ್ತಕ್ಕೆ ಇನ್ನು ಹೆಚ್ಚಿನ ರಿಟರ್ನ್ಸ್ ನೀಡುವ ಯೋಜನೆಗಳನ್ನು ಬ್ಯಾಂಕ್ ಗಳು ನಿಮ್ಮ ಮುಂದೆ ಇಡಬಹುದು.[ಭಾರತದಲ್ಲಿ ಚಿನ್ನಾಭರಣ ಖರೀದಿಗೆ 8 ಸೂತ್ರ]
ಕಿಸಾನ್ ವಿಕಾಸ ಪತ್ರದಲ್ಲಿ ಹೂಡಕೆ ಮಾಡಬಹುದೆ?
ಮೊದಲೆ ಹೇಳಿದಂತೆ ತೆರಿಗೆ ವಿನಾಯಿತಿ ಪಡೆಯಲು ಇದು ಅತ್ಯುತ್ತಮ ಯೋಜನೆ ಅಲ್ಲ. ಅಲ್ಲದೇ ಇತರೆ ಉಳಿತಾಯ ಯೋಜನೆಗಳಿಗೆ ಹೋಲಿಸಿದರೆ ಬಡ್ಡಿ ದರವೂ ಅಷ್ಟೇನು ಹೆಚ್ಚಾಗಿಲ್ಲ. ಹಾಗಾಗಿ ಇಲ್ಲಿ ಹೂಡಿಕೆ ಮಾಡುವ ಬದಲು ಇದರ ಪರ್ಯಾಯ ಯೋಜನೆಗಳತ್ತ ಗಮನ ಹರಿಸುವುದು ಒಳ್ಳೆಯದು.
ಭಾರತೀಯ ರಿಸರ್ವ್ ಬ್ಯಾಂಕ್ ಕಿಸಾನ್ ವಿಕಾಸ ಪತ್ರಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ನೀಡುವಂತೆ ಬ್ಯಾಂಕ್ ಗಳಿಗೆ ನಿರ್ದೇಶನ ನೀಡಿದೆ. ಕಿಸಾನ್ ವಿಕಾಸ ಪತ್ರದಲ್ಲಿ ಏಕರೂಪತೆ ಸಾಧಿಸಲು ಇಂಥ ಕ್ರಮ ತೆಗೆದುಕೊಳ್ಳಲಾಗಿದೆ.
ಕೆವಿಪಿಗೆ ಹೋಲಿಸಿದರೆ ದೀರ್ಘಾವಧಿ ಹೂಡಿಕೆಗೆ ಸಂಬಂಧಿಸಿ ಅನೇಕ ಯೋಜನೆಗಳು ನಮ್ಮ ಮುಂದೆ ಬರುತ್ತವೆ. ಪಿಪಿಎಫ್ ನ್ನು ಒಂದು ಉದಾಹರಣೆಯಾಗಿ ಹೆಸರಿಸಬುಹುದು. ಇಲ್ಲಿ ಹೂಡಿಕೆ ಮಾಡುವ ಬದಲು ಇತರ ಯೋಜನೆಗಳ ಮೇಲೆ ಒಂದು ನೋಟ ಹರಿಸುವುದು ಒಳ್ಳೆಯದು(ಗುಡ್ ರಿಟರ್ನ್ಸ್. ಇನ್)


Click it and Unblock the Notifications