ಭಾರತದ ನಾಗರಿಕರಿಗೆ 10 ಡಿಜಿಟ್ ಗಳ ಪ್ಯಾನ್ ಕಾರ್ಡ್ ನ್ನು ಆದಾಯ ತೆರಿಗೆ ಇಲಾಖೆ ಕೊಡಮಾಡುತ್ತದೆ. ಆಧುನಿಕ ಜಗತ್ತಿನಲ್ಲಿ ಪ್ರತಿಯೊಂದು ವ್ಯವಹಾರಗಳನ್ನು ನಡೆಸಲು ಪ್ಯಾನ್ ಕಾರ್ಡ್ ಅತ್ಯಗತ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಆದಾಯ ತೆರಿಗೆ ಪಾವತಿ, ಟಿಡಿಎಸ್/ಟಿಸಿಎಸ್ ಕ್ರೆಡಿಟ್ ಪಡೆಯಲು, ಆದಾಯ ತೆರಿಗೆ ರಿಟರ್ನ್ಸ್ ಪಡೆಯಲು ಮತ್ತಿತರ ಹಣದ ರವಾನೆ ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಅತ್ಯಗತ್ಯವಾಗಿ ಬೇಕಾಗುತ್ತದೆ. ಆದಾಯ ತೆರಿಗೆ ಪಾವತಿ ಮಾಡುವರೆಂತೂ ಕಡ್ಡಾಯವಾಗಿ ಪ್ಯಾನ್ ಕಾರ್ಡ್ ಹೊಂದಿರಬೇಕಾಗುತ್ತದೆ.[ಪಾನ್ ಕಾರ್ಡ್ ಕಳೆದುಕೊಂಡರೆ ಏನು ಮಾಡಬೇಕು?]

ಪ್ಯಾನ್ ಕಾರ್ಡ್ ಏತಕ್ಕೆ ಬೇಕು?
* ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಆದಾಯ ಗಳಿಸುವ ಪ್ರತಿಯೊಬ್ಬ ವ್ಯಕ್ತಿಯೂ ಪ್ಯಾನ್ ಕಾರ್ಡ್ ಆಧಾರದಲ್ಲಿಯೇ ಆದಾಯ ತೆರಿಗೆ ಪಾವತಿ ಮಾಡಬೇಕಾಗುತ್ತದೆ.
* 139(4ಎ) ಅಡಿಯಲ್ಲಿ ಚಾರಿಟೆಬಲ್ ಟ್ರಸ್ಟ್ ಸಹ ಕೆಲವೊಂದು ಸಂದರ್ಭ ಆದಾಯ ತೆರಿಗೆ ಪಾವತಿ ಮಾಡಬೇಕಾಗುತ್ತದೆ.
* ಯಾವುದೇ ವ್ಯಕ್ತಿ ವಾಣಿಜ್ಯ ವ್ಯವಹಾರ ನಡೆಸುತ್ತಿದ್ದು ಆತನ ಕಂಪನಿ ಅಥವಾ ಸಂಸ್ಥೆಯ ವಾರ್ಷಿಕ ವ್ಯವಹಾರ 5 ಲಕ್ಷ ರೂ. ಮೀರಿದರೆ ಪ್ಯಾನ್ ಕಾರ್ಡ್ ಮೂಲಕವೇ ತೆರಿಗೆ ಪಾವತಿ ಮಾಡಬೇಕಾಗುತ್ತದೆ.[ಪ್ಯಾನ್ ಕಾರ್ಡ್ ಯಾವಾಗ ಬೇಕಾಗುತ್ತದೆ?]
* ಆಮದು ಮತ್ತು ರಫ್ತು ಕೆಲಸದಲ್ಲಿ ತೊಡಗಿಕೊಂಡಿರುವವರು ಪ್ಯಾನ್ ಕಾರ್ಡ್ ಆಧಾರದಲ್ಲಿಯೇ ರಫ್ತು ಕೋಡ್ ಪಡೆದುಕೊಳ್ಳಬೇಕಾಗುತ್ತದೆ.
* ಆದಾಯ ತೆರಿಗೆ ಮರುಪಾವತಿ ವಿಧಾನವೂ ಪ್ಯಾನ್ ಕಾರ್ಡ್ ನ ನಂಬರ್ ಆಧಾರದಲ್ಲಿಯೇ ನಡೆಯುತ್ತದೆ.
* ಅಬಕಾರಿ ಸುಂಕ ಪಾವತಿ ಮಾಡುವ ವಿಧಾನಕ್ಕೂ ಪ್ಯಾನ್ ಕಾರ್ಡ್ ಆಧಾರವಾಗಿರುತ್ತದೆ.
* 1944, ಅಬಕಾರಿ ಕಾಯಿದೆ 57 ಎಇ ಅಡಿ ಇನ್ವಾಯ್ಸ್ ಹೊರಡಿಸುವ ಅಥವಾ ಕೊಡಮಾಡುವ ವ್ಯಕ್ತಿಗೂ ಪ್ಯಾನ್ ಕಾರ್ಡ್ ಅಗತ್ಯ.
* ಸೇವಾ ಶುಲ್ಕ ಅಥವಾ ಸರ್ವೀಸ್ ಟ್ಯಾಕ್ಸ್ ಪಾವತಿ ವಿಧಾನಕ್ಕೂ ಪ್ಯಾನ್ ಕಾರ್ಡ್ ಬೇಕು.
* ಅಲ್ಲದೇ ಇನ್ನು ಕೆಲವು ಅಂದರೆ ಆಸ್ತಿ ಮಾರಾಟ, ಉತ್ತರಾಧಿಕಾರ ಹಕ್ಕು ಪಡೆಯುವಿಕೆ ಮುಂದಾದ ಸಂದರ್ಭಗಳಲ್ಲಿಯೂ ಪ್ಯಾನ್ ಕಾರ್ಡ್ ಅಗತ್ಯ ಬೀಳುತ್ತದೆ.
ಯಾವುದೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿರಲು ಅವಕಾಶವಿಲ್ಲ. ಹಾಗೊಂದು ವೇಳೆ ಹೊಂದಿದ್ದು ಕಂಡುಬಂದಲ್ಲಿ ಸೆಕ್ಷನ್ 1961ರ ಆದಾಯ ತೆರಿಗೆ ಕಾನೂನಿನ 272ಬಿ ಅಡಿ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಒಂದು ವೇಳೆ ನೀವು ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿದ್ದರೆ ಒಂದನ್ನು ಆದಾಯ ತೆರಿಗೆ ಇಲಾಖೆ ಸುಪರ್ದಿಗೆ ಒಪ್ಪಿಸುವುದು ಒಳಿತು.(ಗುಡ್ ರಿಟರ್ನ್ಸ್.ಇನ್)


Click it and Unblock the Notifications