ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಜಾರಿ ಮಾಡಿರುವ ಸುಕನ್ಯಾ ಸಮೃದ್ಧಿ ಯೋಜನೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಆದರೆ ಇನ್ನು ಕೆಲ ಬ್ಯಾಂಕ್ ಮತ್ತು ಅಂಚೆ ಕಚೇರಿಗಳು ಈ ಬಗ್ಗೆ ಜಾಗೃತಗೊಂಡಿಲ್ಲ. ಅಥವಾ ಅವುಗಳಿಗೆ ಸಮರ್ಪಕವಾದ ಮಾಹಿತಿ ಸಿಗುತ್ತಿಲ್ಲ. ಹಾಗಾದರೆ ಅಂಚೆ ಕಚೇರಿಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ಹೇಗೆ ತೆರೆಯಬೇಕು ಎಂಬುದಕ್ಕೆ ಇಲ್ಲಿದೆ ಉತ್ತರ.['ಸುಕನ್ಯಾ ಸಮೃದ್ಧಿ' ಖಾತೆಯ ಸಂಕ್ಷಿಪ್ತ ಮಾಹಿತಿ ತಿಳಿಯಿರಿ]
ಯೋಜನೆಯ ಅರ್ಜಿಯನ್ನು ಆನ್ ಲೈನ್ ಮುಖಾಂತರ ಡೌನ್ ಲೋಡ್ ಮಾಡಿಕೊಂಡು, ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನೀಡಬೇಕಾಗುತ್ತದೆ. ಅಗತ್ಯ ಭಾವಚಿತ್ರಗಳೊಂದಿಗೆ ಅಂಚೆ ಕಚೇರಿಗೆ ಸಲ್ಲಿಕೆ ಮಾಡಬೇಕಾಗುತ್ತದೆ.
ಅರ್ಜಿ ಡೌನ್ ಲೋಡ್ ಮಾಡಿಕೊಳ್ಳಿ
* ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ
* ನಿಮ್ಮ ಗುರುತಿನ ಚೀಟಿ ಮತ್ತು ವಿಳಾಸ ದೃಢೀಕರಣ ತೆಗೆದುಕೊಂಡು ಹೋಗಲು ಮರೆಯಬೇಡಿ
* ಆಧಾರ್ ಕಾರ್ಡ್ ಹೊಂದಿದ್ದರೆ ಒಳಿತು
* ಹೆಣ್ಣು ಮಗುವಿನ ಜನ್ಮ ದಾಖಲೆ ಅಗತ್ಯ
* ಹೆಣ್ಣು ಮಗುವಿನ ಪಾಲಕರ ಫೋಟೋ
ಸುಕನ್ಯಾ ಸಮೃದ್ಧಿ ಯೋಜನೆ ಮತ್ತಷ್ಟು ಮಾಹಿತಿ
* ಕನಿಷ್ಠ ಮತ್ತು ಗರಿಷ್ಠ ಡಿಪಾಸಿಟ್- 1೦೦೦ ದಿಂದ 1 .5 ಲಕ್ಷ ರೂ.
* ಬಡ್ಡಿ ದರ- ಶೇ. 9.1
* ವಿತ್ ಡ್ರಾ- ಹೆಣ್ಣು ಮಗುವಿಗೆ 18 ವರ್ಷ ತುಂಬಿದ ನಂತರ ಕೆಲ ಪ್ರಮಾಣದ ಹಣ ವಿತ್ ಡ್ರಾ ಮಾಡಬಹುದು. 21 ವರ್ಷದ ನಂತರ ಸಂಪೂರ್ಣ ಹಣ ಡ್ರಾ ಮಾಡಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ.
* ಸೆಕ್ಷನ್ 80 ಸಿ ಅನ್ವಯ ತರಿಗೆ ವಿನಾಯಿತಿ ಲಭ್ಯವಿದೆ
* ಸಾಲ ಸೌಲಭ್ಯವಿಲ್ಲ
* ಆನ್ ಲೈನ್ ಸೌಲಭ್ಯವಿಲ್ಲ[ಫಿಕ್ಸೆಡ್ ಡಿಪಾಸಿಟ್ ಕಾಲಾವಧಿ ಬಗ್ಗೆ ನಿಮಗೆಷ್ಟು ಗೊತ್ತು?]
ಒಂದು ವರ್ಷಕ್ಕೆ ಸಾವಿರ ರೂಪಾಯಿಂದ 1.5 ಲಕ್ಷ ರೂ. ವರೆಗೆ ಡಿಪಾಸಿಟ್ ಮಾಡಲು ಅವಕಾಶವಿದೆ. ಹಣಕಾಸು ವರ್ಷದಲ್ಲಿ ಎಷ್ಟು ಸಾರಿ ಬೇಕಾದರೂ ಡಿಪಾಸಿಟ್ ಮಾಡಬಹುದು.
ಕಳೆದ ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚಿವರು ಯೋಜನೆಗೆ ತೆರಿಗೆ ವಿನಾಯಿತಿ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದ್ದಾರೆ. ಪಿಪಿಎಫ್ ಗೆ ಹೋಲಿಸಿದರೆ ಇಲ್ಲಿ ಬಡ್ಡಿ ಪ್ರಮಾಣ ಜಾಸ್ತಿಯಿದೆ ಎಂಬುದನ್ನು ಗಮನಿಸಬೇಕಾಗುತ್ತದೆ. ಖಾತೆ ತೆಗೆದು ಒಂದು ವರ್ಷ ಡಿಪಾಸಿಟ್ ಕಟ್ಟಲು ವಿಫಲರಾದರೆ 50 ರೂ. ದಂಡ ತುಂಬಬೇಕಾಗುತ್ತದೆ.
ಹೆಣ್ಣು ಮಗುವಿಗೆ 18 ವರ್ಷ ತುಂಬಿದ ನಂತರ ಒಟ್ಟು ಮೊತ್ತದ ಶೇ.50 ಭಾಗವನ್ನು ವಿತ್ ಡ್ರಾ ಮಾಡಬಹುದು. 21 ವರ್ಷದ ನಂತರ ಖಾತೆಯನ್ನು ಕ್ಲೋಸ್ ಮಾಡಿ ಅಷ್ಟು ಹಣ ಡ್ರಾ ಮಾಡಬಹುದು.
18 ವರ್ಷಕ್ಕೆ ಹೆಣ್ಣು ಮದುವೆಯಾಗುವುದಾದರೆ ಹಣ ಡ್ರಾ ಮಾಡಿಕೊಳ್ಳಲು ಸಾಧ್ಯವಿದೆ. ಒಬ್ಬ ವ್ಯಕ್ತಿ ಅಥವಾ ತಂದೆ ಈ ಯೋಜನೆಯಡಿ ಕೇವಲ ಎರಡು ಖಾತೆ ತೆರೆಯಲು ಮಾತ್ರ ಅವಕಾಶವಿರುತ್ತದೆ.
ಕೊನೆ ಮಾತು
ಯೋಜನೆಯ ದೊಡ್ಡ ಕೊರತೆ ಎಂದರೆ ಕಾಲಾವಧಿ, ಜತೆಗೆ ಯಾವುದೇ ರೀತಿಯ ಸಾಲ ಸೌಲಭ್ಯ ಸಿಗದಿರುವುದು. ಆದರೆ ಸರ್ಕಾರ ಇಂಥ ಹೆಜ್ಜೆ ಇಟ್ಟಿರುವುದನ್ನು ಸ್ವಾಗತಿಸಬೇಕಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಸೌಲಭ್ಯ ವಿರುವ ಯೋಜನೆಗಳು ಸಿಗಲು ಸಾಧ್ಯವಿದೆ.(ಗುಡ್ ರಿಟರ್ನ್ಸ್.ಇನ್)


Click it and Unblock the Notifications