ಆದಾಯ ತೆರಿಗೆ ಕಾನೂನಿಗೆ ಅನುಗುಣವಾಗಿ ಮೈನರ್ ಅಥವಾ ಮಕ್ಕಳು ಗಳಿಸುವ ಆದಾಯ ಯಾರಿಗೆ ಸೇರುತ್ತದೆ ಎಂಬ ಪ್ರಶ್ನೆ ಒಡಮೂಡುತ್ತದೆ. ಕೌಶಲ್ಯ, ಜ್ಞಾನ, ಕಲೆ, ಸಾಹಿತ್ಯ ಮುಂತಾದ ಯಾವುದಾದರೂ ಒಂದು ವಿಭಾಗದಿಂದ ಆದಾಯ ಗಳಿಸಿದರೆ ಅದು ಪಾಲಕರ ಆದಾಯಕ್ಕೆ ಸೇರ್ಪಡೆಯಾಗುವುದಿಲ್ಲ.
ಆದರೆ ಕೆಲವೊಂದು ಸಂದರ್ಭದಲ್ಲಿ ಮಕ್ಕಳ ಆದಾಯ ಪಾಲಕರ ಆದಾಯದೊಂದಿಗೆ ಸೇರ್ಪಡೆಯಾಗುತ್ತದೆ. ಪಾಲಕರ ಅಥವಾ ಮಕ್ಕಳ ಆದಾಯದಲ್ಲಿ ಯಾರದ್ದೂ ಜಾಸ್ತಿ ಇರುತ್ತದೆಯೋ ಅದಕ್ಕೆ ಕಡಿಮೆಯಿರುವುದು ಸೇರ್ಪಡೆಯಾಗುತ್ತದೆ.[ಪಿಪಿಎಫ್ ಖಾತೆಗೆ ಆನ್ ಲೈನ್ ಹಣ ರವಾನೆ ಹೇಗೆ?]

ಒಂದು ವೇಳೆ ಡೈವೋರ್ಸ್ ಅಥವಾ ಮರುಮದುವೆಯಂಥ ಸಂದರ್ಭಗಳು ಎದುರಾದರೆ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಿದ್ದಾರೋ ಅವರ ಖಾತೆಗೆ ಮಕ್ಕಳ ಆದಾಯ ಸೇರ್ಪಡೆಯಾಗುವುದು. ಮಗು ಅಂಗವಿಕಲತೆಯಿಂದ ಕೂಡಿದ್ದರೆ ಸೆಕ್ಷನ್ 80 ಸಿ ಅನ್ವಯ ಮಗುವಿನ ಆದಾಯ ಪಾಲಕರಿಗೆ ಸಿಗುವುದಿಲ್ಲ.
ಉದಾಹರಣೆಯೊಂದರ ಮೂಲಕ ನೋಡಿದರೆ ಇದರ ಅರ್ಥವನ್ನು ವಿವರವಾಗಿ ತಿಳಿಯಬಹುದು.[ಅಂಚೆ ಕಚೇರಿಯಿಂದ PPF ವರ್ಗಾವಣೆ ಹೇಗೆ?]
ರಾಜೇಶ್ ಎಂಬುವರಿಗೆ ಅಜಯ್ ಮತ್ತು ವಿಜಯ್ ಎಂಬ ಇಬ್ಬರು ಪುತ್ರರಿದ್ದಾರೆ. ಅಜಯ್ ಒಬ್ಬ ಕಲಾವಿದ. ಆದರೆ ವಿಜಯ್ 80 ಸಿ ಹೇಳುವಂಥ ಅಂಗವೈಕಲ್ಯದಿಂದ ಬಳಲುತ್ತಿದ್ದಾನೆ.
* ಅಜಯ್ ನ ಸ್ಟೇಜ್ ಶೋಗಳ ಆದಾಯ 2, 00,000 ರೂ.
* ಅಜಯ್ ನ ಬ್ಯಾಂಕ್ ಖಾತೆಯಿಂದ ದೊರೆಯುತ್ತಿರುವ ಬಡ್ಡಿ 9,000 ರೂ.
* ವಿಜಯ್ ನ ಬ್ಯಾಂಕ್ ಖಾತೆಯಿಂದ ದೊರೆಯುತ್ತಿರುವ ಬಡ್ಡಿ 1, 20,000 ರೂ.
ಅಜಯ್ ನ ಸ್ಟೇಜ್ ಶೋಗಳಿಂದ ದೊರೆಯುತ್ತಿರುವ ಆದಾಯ ತಂದೆ ರಾಜೇಶ್ ಆದಾಯಕ್ಕೆ ಸೇರ್ಪಡೆಯಾಗುವುದಿಲ್ಲ. ಆದರೆ ಬ್ಯಾಂಕ್ ಖಾತೆಯಿಂದ ದೊರೆಯುತ್ತಿರುವ ಬಡ್ಡಿ ತಂದೆ ರಾಜೇಶ್ ಆದಾಯಕ್ಕೆ ಸೇರ್ಪಡೆಯಾಗುತ್ತದೆ. ಅಂಗವೈಕಲ್ಯದಿಂದ ನರಳುತ್ತಿರುವ ವಿಜಯ್ ಗೆ ಸಂಬಂಧಿಸಿದ ಯಾವ ಆದಾಯವೂ ತಂದೆ ರಾಜೇಶ್ ಗೆ ಸೇರುವುದಿಲ್ಲ.
ಕೆಲವೊಂದು ಸಂದರ್ಭದಲ್ಲಿ ತೆರಿಗೆ ವಿನಾಯಿತಿ ಪಡೆಯಲು ಅರ್ಜಿ ಸಲ್ಲಿಸಬಹುದು. 6 ಸಾವಿರ ರೂ. ಗೂ ಅಧಿಕ ಬಡ್ಡಿ ಮೊತ್ತ ರಾಜೇಶ್ ಖಾತೆಗೆ ಸೇರ್ಪಡೆಯಾಗಿದ್ದರೆ ಅವರು ಬಡ್ಡಿ ವಿನಾಯಿತಿ ಕೇಳಬಹುದು. (ಗುಡ್ ರಿಟರ್ನ್ಸ್, ಇನ್)


Click it and Unblock the Notifications