Englishहिन्दी മലയാളം தமிழ் తెలుగు

30 ವರ್ಷ ಆಸುಪಾಸಿನವರು ಇದನ್ನು ಓದಲೇಬೇಕು

Subscribe to GoodReturns Kannada

ನಮಗೇನು 30 ವರ್ಷ ಆರಾಮಾಗಿ ಇನ್ನೊಂದು ಹತ್ತು ವರ್ಷ ಕಳೆದ ಮೇಲೆ ಉಳಿತಾಯ ಮಾಡೋಣ ಎಂದು ಕೈ ಬಿಚ್ಚಿ ಖರ್ಚು ಮಾಡುತ್ತಾ ಕುಳಿತರೆ ಮುಂದೆ ಆತಂಕಕ್ಕೆ ಸಿಕ್ಕಿ ಹಾಕಿಕೊಳ್ಳಬೇಕಾಗುವುದು. ಓಡುತ್ತಿರುವ ಕಾಲದಲ್ಲಿ ಹಣದ ಉಳಿತಾಯಕ್ಕೆ ಪ್ರತಿಯೊಬ್ಬರು ಮೊದಲ ಆದ್ಯತೆ ನೀಡಬೇಕಾಗುತ್ತದೆ. ಮೊದಲಿನಿಂದಲೇ ಉಳಿತಾಯ ಪ್ರವೃತ್ತಿ ಮೈಗೂಡಿಸಿಕೊಂಡರೆ ಆತಂಕದ ಕಾಲದಲ್ಲಿ ನೆರವಾಗಬಹುದು.

ಜೀವನದಲ್ಲಿ ಇಂಥದ್ದೇ ವೇಳೆ ಹಣಕಾಸು ಮುಗ್ಗಟ್ಟು ಎದುರಾಗುತ್ತದೆ ಎಂದು ಹೇಳಲಾಗುವುದಿಲ್ಲ. ಅದರಲ್ಲೂ 30 ವರ್ಷ ಆಸುಪಾಸಿನ ವ್ಯಕ್ತಿಗಳು ಈ ಬಗ್ಗೆ ಹೆಚ್ಚಿನ ಗಮನವನ್ನು ನೀಡಲೇಬೇಕಾಗುತ್ತದೆ. ಆದರೆ ನಿರ್ದಿಷ್ಟ ಯೋಜನೆಯೊಂದರ ಮೇಲೆ ಹಣ ಹೂಡುವಾಗ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಿ. ದೀರ್ಘಾವಧಿ ಹೂಡಿಕೆ ಮತ್ತು ಲಾಭಗಳನ್ನು ಇಲ್ಲಿ ಪರಿಗಣಿಸಬೇಕಾಗುತ್ತದೆ.[ಗುಡ್ ರಿಟರ್ನ್ಸ್.ಇನ್]

ಹಣದುಬ್ಬರದ ಮಹತ್ವ ತಿಳಿದುಕೊಳ್ಳಿ

ಸುಮ್ಮನೆ ಯಾವುದೋ ಒಂದು ಯೋಜನೆಯ ಮೇಲೆ ಹೂಡಕೆ ಮಾಡುವುದು ಒಳಿತಲ್ಲ. ಹಣದುಬ್ಬರದ ಬದಲಾವಣೆಗಳನ್ನು ಗಮನಿಸಿ ಹೆಜ್ಜೆ ಇಡಬೇಕು. ಬ್ಯಾಂಕ್ ನ ಫಿಕ್ಸೆಡ್ ಡಿಪಾಸಿಟ್ ನಲ್ಲಿ ಹಣ ಹೂಡಿಕೆ ಮಾಡಿದರೆ ನಿಮ್ಮ ಗುರಿ ಸಾಧಿಸಲು ಸಾಧ್ಯವಾಗಲ್ಲ.[ಹೆಚ್ಚು ರಿಟರ್ನ್ಸ್ ನೀಡುವ 7 ಹೂಡಿಕೆ ಟಿಪ್ಸ್]

ನಿವೃತ್ತಿ ಮತ್ತು ಹೂಡಿಕೆ

ನಿಮ್ಮ ನಿವೃತ್ತಿ ನಂತರದ ಜೀವನ್ ಅಥವಾ ಹೂಡಿಕೆ ಬಗ್ಗೆ ಗಮನ ನೀಡಿರದಿದ್ದರೇ ಇಂದೇ ಆ ಕುರುತು ಚಿಂತನೆ ನಡೆಸಿ. ನಿವೃತ್ತಿ ನಂತರ ನಿರ್ದಿಷ್ಟ ಹಣ ಪ್ರತಿ ತಿಂಗಳು ನಿಮ್ಮ ಕೈ ಗೆ ಬರುವಂತೆ ಮಾಡಿಕೊಳ್ಳಲು ಈಗಲೇ ಯೋಜನೆ ರೂಪಿಸಬೇಕು.

ತಂತ್ರಜ್ಞಾನದ ಲಾಭ ಪಡೆದುಕೊಳ್ಳಿ

ಆನ್ ಮೈನ್ ಮೂಲಕ ಎಲ್ಲ ವಿಭಾದಲ್ಲೂ ಹೂಡಿಕೆ ಮಾಡಲು ಸಾಧ್ಯವಾಗಿದೆ. ಮ್ಯೂಚುವಲ್ ಫಂಡ್, ಎಸ್ ಐಪಿ ಮುಂತಾದ ವಿಭಾಗದಲ್ಲಿ ಹೂಡಿಕೆ ಮಾಡಬಹುದು. ಈ ಬಗ್ಗೆ ಅಂತರ್ಜಾಲ ತಾಣಗಳಲ್ಲಿ ವಿಫುಲ ಮಾಹಿತಿ ದೊರೆಯುತ್ತದೆ.

ವಿಮೆ ಪಡೆದುಕೊಳ್ಳಿ

ಯಾವುದಾದರೊಂದು ವಿಮೆ ಮಾಡಿಸಿಕೊಳ್ಳುವುದು ಅಗತ್ಯ. ಅದು ಜೀವ ವಿಮೆ ಯಾಗಿರಬಹುದು ಅಥವಾ ಮನಿ ಬ್ಯಾಕ್ ಇರಬಹುದು. ಇದು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಭದ್ರತೆ ಒದಗಿಸುತ್ತದೆ. ಅಪಘಾತ ಮತ್ತಿತರ ತುರ್ತು ಸಂದರ್ಭದಲ್ಲಿ ಭಯ ಬೀಳಬೇಕಾದ ಅಗತ್ಯವಿರುವುದಿಲ್ಲ.

ಗೃಹ ಸಾಲ

ನೀವು ಅತಿಹೆಚ್ಚು ತೆರಿಗೆ ತುಂಬುವವರಾಗಿದ್ದರೆ ಗೃಹ ಸಾಲ ನಿಮಗೆ ವಿನಾಯತಿ ನೀಡುವ ಸಾಧನವಾಗಿ ಪರಿಣಮಿಸಬಲ್ಲದು. ಅಲ್ಲದೇ ಇದೇ ಹೆಸರಿನಲ್ಲಿ ಕೆಲವೇ ವರ್ಷದಲ್ಲಿ ನೀವು ಸ್ವಂತ ಮನೆಯ ಮಾಲಿಕತ್ವವನ್ನು ಪಡೆಯಬಹುದು.[ಅತಿ ಹೆಚ್ಚು ಗೃಹ ಸಾಲ ಪಡೆಯಲು ಏನು ಮಾಡಬೇಕು?]

ತುರ್ತು ಆರ್ಥಿಕ ನಿಧಿ

ನೀವು ಒಂದೆಲ್ಲಾ ಒಂದು ರೀತಿಯ ತುರ್ತು ಆರ್ಥಿಕ ನಿಧಿ ಹೊಂದಿರಲೇಬೇಕು. ಇಲ್ಲವಾದಲ್ಲಿ ಆ ಬಗ್ಗೆ ಗಮನ ಹರಿಸಿ ಎಫ್ ಡಿ ಖಾತೆಯನ್ನೋ ಅಥವಾ ಇನ್ನಿತರ ರೀತಿಯ ನೆರವಿಗೆ ಧಾವಿಸುವ ಹಣಕಾಸನ್ನು ಹೊಂದಿರಬೇಕಾದದ್ದು ಅಗತ್ಯ.[ಆಪತ್ಕಾಲದಲ್ಲಿ ಪಡೆಯಬಹುದಾದ ಸಾಲಗಳು ಯಾವವು?]

ವಿಲ್ ಮಾಡಿಸಲು ಮರೆಯಬೇಡಿ

30 ನೇ ವಯಸ್ಸಿನಲ್ಲಿ ವಿಲ್ ಮಾಡಿಸುವುದು! ಎಂದು ನಿಮಗೆ ಆಶ್ಚರ್ಯವಾಗಬಹುದು. ಆದರೆ ಮಾಡಿಸುವುದು ಉತ್ತಮ. ಹಣಕಾಸಿನ ವ್ಯವಸ್ಥೆ ಅಥವಾ ಭದ್ರತೆ ನೆರವಿನ ದೃಷ್ಟಿಯಿಂದ ಅಲ್ಲದೇ ಯಾವುದೇ ಗೊಂದಲಗಳು ಉಂಟಾಗದಂತೆ ಮಾಡಲು ವಿಲ್ ಮಾಡಿಸುವುದು ಉತ್ತಮ.[ವಿಲ್ ಮಾಡಿಸಿದರೆ ಸಾಲದು, ನೋಂದಣಿಯೂ ಆಗಿರಬೇಕು]

English summary

7 Financial Commitments For Individuals in 30s

It is never too early too start planning your finances, its better you start early and reap the benefits of power of compounding. Managing finances comes only with experience as each individuals financial commitments and earning capacity defers.
 
 
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns