For Quick Alerts
ALLOW NOTIFICATIONS  
For Daily Alerts

ಯಾವುದೆ ವಿಮೆ ಮಾಡಿಸುವ ಮುನ್ನ ಇದನ್ನೊಮ್ಮೆ ಓದಿ

|

ಆ ಪಾಲಿಸಿ ಮಾಡಿಸಿ, ಈ ಪಾಲಿಸಿ ಮಾಡಿಸಿ, ಆರೋಗ್ಯ ವಿಮೆ ಮಾಡಿಸಿ, ವಿಮೆ ಮಾಡಿಸಿ ತೆರಿಗೆ ವಿನಾಯಿತಿ ಪಡೆಯುರಿ ಎಂದು ವಿಮಾ ಕಂಪನಿಗಳು ಜಾಹೀರಾತು ನೀಡಿದರೆ, ಏಜೆಂಟರು ಮನೆ ಬಾಗಿಲಿಗೆ ಎಡತಾಕುವುದು ಸಾಮಾನ್ಯ. ಅವರು ತಮ್ಮ ಪಾಲಿಸಿ ಒಳಗೊಂಡಿರುವ ಸಕಾರಾತ್ಮಕ ಅಂಶಗಳನ್ನು ಮಾತ್ರ ಹೇಳುತ್ತಾರೆ.

ಆದರೆ ನಮೆಗೆ ನಿಜಕ್ಕೂ ಗೊಂದಲ ಬಗೆಹರಿದಿರುವುದಿಲ್ಲ. ಯಾವ ಪಾಲಿಸಿ ಮಾಡಿಸಬೇಕು? ಅದರ ಮೂಲ ತತ್ವಗಳು ಏನು? ಯಾವ ಸಂದರ್ಭದಲ್ಲಿ ಇವು ಲಾಭ ತಂದುಕೊಡಬಲ್ಲದು? ಹಣದ ರಿಟರ್ನ್ಸ್ ಪ್ರಮಾಣ ಎಂಥದ್ದು? ಎಷ್ಟು ವರ್ಷದವರೆಗೆ ಕಾಯಬೇಕು? ಎಂಬ ಹತ್ತಾರು ಮಾಹಿತಿಗಳು ಅಗತ್ಯವಾಗುತ್ತದೆ. ಅವುಗಳ ಮೇಲೆ ಒಂದು ಕಣ್ಣಾಡಿಸುವುದು ಉತ್ತಮ....[30 ವರ್ಷ ಆಸುಪಾಸಿನವರು ವಿಮೆ ಮಾಡಿಸಬೇಕೆ?]

ಯಾವುದೆ ವಿಮೆ ಮಾಡಿಸುವ ಮುನ್ನ ಇದನ್ನೊಮ್ಮೆ ಓದಿ

1. ವಿಮೆಗೆ ಒಳಪಟ್ಟವ
ವಿಮೆಗೆ ಒಳಪಟ್ಟವ ಅಂದರೆ ಯಾರ ಹೆಸರಿನಲ್ಲಿ ವಿಮೆ ಇರುವುದೋ ಆತ. ಸಾಮಾನ್ಯವಾಗಿ ಈತನ ಹೆಸರಿನಲ್ಲಿಯೇ ಪ್ರೀಮಿಯಂ ಪಾವತಿಯಾಗುತ್ತಿರುತ್ತದೆ.

2. ಇನ್ಶೂರರ್ ಅಥವಾ ಪಾಲಿಸಿ ಜವಾಬ್ದಾರ
ಯಾವ ಕಂಪನಿ ಅಥವಾ ಸಂಸ್ಥೆ ವಿಮೆಯನ್ನು ನೀಡಿರುತ್ತದೆಯೋ ಅದನ್ನು ಇನ್ಶೂರರ್ ಅಥವಾ ಪಾಲಿಸಿ ಜವಾಬ್ದಾರ ಎಂದು ಕರೆಯಬಹುದು. ಉದಾಹರಣೆಗೆ ಎಲ್ಐಸಿ, ಬಿರ್ಲಾ ಸನ್ ಲೈಫ್, ಐಸಿಐಸಿಐ ಪ್ರೋಡೆನ್ಶಿಯಲ್, ಎಚ್ ಡಿಎಫ್ ಸಿ ಸ್ಟ್ಯಾಂಡರ್ಡ್ ಲೈಫ್ ನ್ನು ಹೆಸರಿಸಬಹುದು.

3. ನಾಮಿನಿ ಅಥವಾ ನಾಮಾಂಕಿತ
ಪಾಲಿಸಿದಾರನಿಗೆ ಏನಾದರೂ ಅವಘಡ ಸಂಭಿಸಿದಲ್ಲಿ ಅಥವಾ ಹಣ ಪಡೆಯಲು ಸಾಧ್ಯವಾಗದ ಪಕ್ಷದಲ್ಲಿ ನಾಮಿನಿ ವಿಮಾ ಹಣ ಪಡೆದುಕೊಳ್ಳುತ್ತಾನೆ. ಪಾಲಿಸಿ ಮಾಡುವ ವೇಳೆಯೇ ನಾಮಿನಿಯಾಗಿ ಒಬ್ಬರನ್ನು ಹೆಸರಿಸಬೇಕಾಗುತ್ತದೆ. ಪಾಲಿಸಿ ಮುಂದುವರಿಯುತ್ತಿದ್ದ ಸಮಯದಲ್ಲಿ ಅಗತ್ಯಬಿದ್ದರೆ ನಾಮಿನಿಯನ್ನು ಬದಲಾವಣೆ ಮಾಡಬಹುದು.[ವಿಲ್ ಮಾಡಿಸಿದರೆ ಸಾಲದು, ನೋಂದಣಿಯೂ ಆಗಿರಬೇಕು]

4. ಪಾಲಿಸಿದಾರ
ಪಾಲಿಸಿದಾರ ಮತ್ತು ವಿಮೆಗೆ ಒಳಪಟ್ಟವನ ನಡುವೆ ಕೊಂಚ ವ್ಯತ್ಯಾಸವಿದೆ. ಪಾಲಿಸಿದಾರ ಅಂದರೆ ವಿಮೆಯನ್ನು ಖರೀದಿ ಮಾಡಿದವ ಎಂದು ಅರ್ಥೈಸಿಕೊಳ್ಳಬಹುದು. ಕುಟುಂಬದ ಯಜಮಾನ ಕುಟುಂದ ಎಲ್ಲರನ್ನೂ ಸೇರಿಸಿ ವಿಮೆ ಮಾಡಲೂಬಹುದು.

5. ಪ್ರೀಮಿಯಂ ಅಥವಾ ಪಾಲಿಸಿ ಕಂತು
ನಿರ್ದಿಷ್ಟ ಅವಧಿಗೆ ಸಂಬಂಧಿಸಿ ಪಾಲಿಸಿದಾರ ಹಣ ಪಾವತಿ ಮಾಡಬೇಕಾಗುತ್ತದೆ. ಈ ಪಾವತಿ ಮಾಡುವ ಕಂತನ್ನು ಅಥವಾ ಹಣದ ಮೊತ್ತವನ್ನು ಪ್ರೀಮಿಯಂ ಕಂತು ಎಂದು ಕರೆಯಬಹುದು. [ಎಲ್ ಐಸಿ ಪಾಲಿಸಿ ಮೇಲೆ ಸಾಲ ಪಡೆಯುವುದು ಹೇಗೆ?]

6. ವಿಮಾ ಮೊತ್ತ
ವಿಮೆಗೆ ಒಳಪಟ್ಟವ ಸಾವನ್ನಪ್ಪಿದರೆ ಅಥವಾ ಗಾಯಗೊಂಡರೆ ವಿಮೆ ಪಾವತಿಯಾದ ಕಂತನ್ನು ಆಧರಿಸಿ ನಿರ್ದಿಷ್ಟ ಮೊತ್ತದ ಹಣವನ್ನು ಪಡೆದುಕೊಳ್ಳಬಹುದು. ಆರಂಭಿಕ ಹಂತ ಅಂದೆ ಅಪಘಾತ ಅಥವಾ ಸಾವು ಸಂಭವಿಸಿದ 15 ದಿನದೊಳಗಾಗಿ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ವಿಮಾ ಕಂಪನಿಗೆ ಸಲ್ಲಿಸಬೇಕಾಗುತ್ತದೆ.

8. ಅಧಿಕಾರ
ಪ್ರತಿಯೊಂದು ಪಾಲಿಸಿಯೂ ನಿರ್ದಿಷ್ಟ ಅವಧಿ ಅಂದರೆ ಕಂತುಗಳ ನಂತರ ಅಧಿಕಾರ ಪಡೆದುಕೊಳ್ಳುತ್ತದೆ. ಸಾಮಾನ್ಯವಾಗಿ ಮೂರು ವರ್ಷಗಳ ಕಾಲವನ್ನು ನಿಗದಿಪಡಿಸಲಾಗಿರುವುದನ್ನು ಕಾಣುತ್ತೇವೆ.[ಅಂಚೆ ಇಲಾಖೆ ನೀಡುವ ಪ್ರಮುಖ 7 ವಿಮಾ ಯೋಜನೆಗಳು]

9. ಲ್ಯಾಪ್ಸ್ ಅಥವಾ ಅರ್ಧಕ್ಕೆ ನಿಂತ ವಿಮೆ
ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಪಾಲಿಸಿ ಪ್ರೀಮಿಯಂ ಕಟ್ಟಲು ಅಸಾಧ್ಯವಾದರೆ ಅದು ಲ್ಯಾಪ್ಸ್ ಎಂದು ಕರೆಸಿಕೊಳ್ಳುತ್ತದೆ. ಒಂದಿಷ್ಟು ದಂಡ ತುಂಬಿ ನಂತರ ವಿಮೆಗೆ ಮತ್ತೆ ಜೀವ ಬರಿಸಿಕೊಳ್ಳಬಹುದು.

ಒಂದು ಉದಾಹರಣೆ ಮೂಲಕ ನೋಡಿದರೆ ಪಾಲಿಸಿಯ ಆಳ ಅಗಲಗಳು ಮತ್ತಷ್ಟು ಅರ್ಥವಾಗಬಹುದು.
ಕುಟುಂಬದ ಯಜಮಾನ ಅರ್ನಾಬ್ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳ ಹಿತದೃಷ್ಟಿಯಿಂದ ಎಲ್ ಐಸಿ ಪಾಲಿಸಿಯೊಂದನ್ನು ಮಾಡಿಸುತ್ತಾರೆ. 10 ಲಕ್ಷ ಮೊತ್ತದ ಪಾಲಿಸಿಯ ಪ್ರೀಮಿಯಂ ವರ್ಷಕ್ಕೆ 3 ಸಾವಿರ ರು. 10 ವರ್ಷ ಅವಧಿಯ ಪಾಲಿಸಿಗೆ ಆತನ ಹೆಂಡತಿ ಅನುಷಾ ನಾಮಿನಿಯಾಗಿರುತ್ತಾಳೆ. ಪಾಲಿಸಿಗೆ ಸಂಬಂಧಿತ ದಾಖಲೆಗಳು 26 ಡಿಸೆಂಬರ್ 2013 ಕ್ಕೆ ಆತನ ಕೈ ಸೇರುತ್ತವೆ.

ವಿಮೆಗೆ ಒಳಪಟ್ಟವ: ಅರ್ನಾಬ್
ಪಾಲಿಸಿದಾರ: ಅರ್ನಾಬ್
ನಾಮಿನಿ: ಅನುಷಾ
ಪಾಲಿಸಿ ಮೊತ್ತ: 10 ಲಕ್ಷ ರು.
ಪ್ರೀಮಿಯಂ: 3 ಸಾವಿರ
ಅಧಿಕಾರ: 26 ಡಿಸೆಂಬರ್ 2013

ಒಟ್ಟಿನಲ್ಲಿ ವಿಮೆಯೂ ಜೀವ ಮತ್ತು ಜೀವನಕ್ಕೆ ಭದ್ರತೆ ಒದಗಿಸುತ್ತದೆ ಎಂದೇ ನಂಬಲಾಗಿದ್ದು ಭಾರತದಲ್ಲಿ ಅನೇಕ ಬಗೆಯ ಪಾಲಿಸಿಗಳು ಚಾಲ್ತಿಯಲ್ಲಿದ್ದು ಸರ್ಕಾರಿ ಸ್ವಾಮ್ಯದ ಕಂಪನಿಗಳು ಕಡಿಮೆ ಬಡ್ಡಿ ನೀಡಿದರೆ, ಖಾಸಗಿಯವರು ಹೆಚ್ಚಿನ ಬಡ್ಡಿ ದರ ನೀಡುತ್ತಿವೆ (ಗುಡ್ ರಿಟರ್ನ್ಸ್.ಇನ್)

English summary

9 Basic Insurance Terms You Should be Aware

Sometimes jargon can be confusing and wrong assumption of the term can lead you to lot of trouble. Here are few terms which you should be aware if you are planning for a policy or planning to opt one.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X