ಆಧುನಿಕ ಸಮಾಜದ ಪ್ರತಿದಿನ ವ್ಯವಹಾರಗಳಿಗೆ ಹಣದ ಚಲಾವಣೆ ಅತಿ ಅಗತ್ಯವಾಗಿರುತ್ತದೆ. ಇ-ವಾಲೆಟ್ ಮುಖಾಂತರ ಎಲ್ಲ ರೀತಿಯ ಹಣದ ಟ್ರಾನ್ಸಾಕ್ಷನ್ ನಿಭಾಯಿಸಬಹುದು. ಅಗತ್ಯವಿದಲ್ಲಿ ಕ್ರೆಡಿಟ್ ಕಾರ್ಡ್ ಸಹ ಬಳಕೆ ಮಾಡಿಕೊಳ್ಳಬಹುದು.
ಇ-ವಾಲೆಟ್ ನಲ್ಲಿ ನೀವು ಒಂದಕ್ಕಿಂತ ಹೆಚ್ಚಿನ ಕ್ರೆಡಿಟ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ದಾಖಲು ಮಾಡಿ ಇಟ್ಟುಕೊಳ್ಳಬಹುದು. ಶಾಪಿಂಗ್ ಮಾಡಿದ ವೇಳೆ ಸುಲಭವಾಗಿ ಹಣ ಪಾವತಿ ಮಾಡಲು ಸಾಧ್ಯವಾಗುತ್ತದೆ. ಇ-ವಾಲೆಟ್ ಸಹಾಯದಿಂದ ವಿಮಾನ ಟಿಕೆಟ್ ಮತ್ತು ಆನ್ ಲೈನ್ ಶಾಪಿಂಗ್ ಸಹ ಸಾಧ್ಯವಿದೆ.[ಆದಾಯ ತೆರಿಗೆ ರಿಫಂಡ್ ಚೆಕ್ ಹಿಂದಕ್ಕೆ ಪಡೆಯುವುದು ಹೇಗೆ?]

ಇ-ವಾಲೆಟ್ ಪಡೆದುಕೊಳ್ಳುವುದು ಹೇಗೆ?
ಯಾರೂ ಬೇಕಾದರೂ ಸುಲಭವಾಗಿ ಇ-ವಾಲೆಟ್ ರಚಿಸಿಕೊಳ್ಳಬಹುದು ಅಥವಾ ಪ್ರೋಫೈಲ್ ರಚಿಸಿಕೊಳ್ಳಬಹುದು. ಆರಂಭದಲ್ಲಿ ಕೆಲವೇ ಪ್ರಮುಖ ಕಂಪನಿಗಳು ಇ-ವಾಲೆಟ್ ವ್ಯವಸ್ಥೆಗೆ ಒಳಪಟ್ಟಿದ್ದವು. ಐಸಿಐಸಿಐ ಬ್ಯಾಂಕ್, ಏಕ್ಸಿಸ್ ಬ್ಯಾಂಕ್, ಎಸ್ ಬಿಐ ಈ ವ್ಯವಸ್ಥೆಯನ್ನು ಪರಿಚಯಿಸಿದ್ದವು. ಈಗ ಎಲ್ಲ ಬ್ಯಾಂಕುಗಳು ಇ-ವಾಲೆಟ್ ವ್ಯವಸ್ಥೆಗೆ ಒತ್ತು ನೀಡುತ್ತಿವೆ.
ಇ-ವಾಲೆಟ್ ನ ಲಾಭಗಳು
ನಿಮ್ಮ ಶಾಪಿಂಗ್ ಕೆಲಸವನ್ನು ಇದು ಸರಳಗೊಳಿಸುತ್ತದೆ. ಇದು ಪ್ರೀ ಪೇಯ್ಡ್ ಖಾತೆಯಾಗಿರುವುದರಿಂದ ಹಣದ ಚಲಾವಣೆ ಅಥವಾ ಟ್ರಾನ್ಸಾಕ್ಷನ್ ನಲ್ಲಿ ಯಾವ ಗೊಂದಲಗಳು ಏರ್ಪಡುವುದಿಲ್ಲ. ಯಾವುದೇ ವ್ಯಕ್ತಿ 10 ರೂ. ದಿಂದ 10 ಸಾವಿರ ರೂ. ಇಟ್ಟು ಇ-ವಾಲೆಟ್ ಖಾತೆಯನ್ನು ತೆರೆಯಬಹುದು. ಇಲ್ಲಿ ಕ್ರಡಿಟ್ ಹಿಸ್ಟರಿಯನ್ನು ಕೇಳಲಾಗುವುದಿಲ್ಲ.[ಅತ್ಯುತ್ತಮ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಗಳು ಯಾವವು?]
ನೀವು ಇ-ವಾಲೆಟ್ ಖಾತೆ ತೆರೆಯುತ್ತೀರಾ?
ಇ-ವಾಲೆಟ್ ಗೆ ಹಾಕಿರುವ ಹಣಕ್ಕೆ ಯಾವುದೇ ರೀತಿಯ ಬಡ್ಡಿ ಸಿಗುವುದಿಲ್ಲ. ನಿಮೆಗೆ ಎಷ್ಟು ಬೇಕೋ ಅಷ್ಟು ಹಣವನ್ನು ಮಾತ್ರ ತೊಡಗಿಸುವುದು ಉತ್ತಮ. ಇ-ವಾಲೆಟ್ ನಲ್ಲಿ ಕೆಲ ಬದಲಾವಣೆ ಕುರಿತು ಇನ್ನು ಚರ್ಚೆಗಳು ನಡೆಯುತ್ತಿದ್ದು ಗ್ರಾಹಕ ಸ್ನೇಹಿ ವ್ಯವಸ್ಥೆ ಜಾರಿಗೆ ಪ್ರಯತ್ನ ಮಾಡಲಾಗುತ್ತಿದೆ.
ಸಾಮಾನ್ಯ ಹಣಕಾಸು ಟ್ರಾನ್ಸಾಕ್ಷನ್ ಗೂ ನಿರ್ದಿಷ್ಟ ಶುಲ್ಕವನ್ನು ಮುರಿದುಕೊಳ್ಳಲಾಗುತ್ತದೆ. ಖಾತೆ ತೆರೆಯುವ ಮುನ್ನ ಶುಲ್ಕಗಳ ಬಗ್ಗೆ ಒಮ್ಮ ಗಮನ ನೀಡಬೇಕಾಗುತ್ತದೆ. ಆಧುನಿಕ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮುನ್ನ ಒಮ್ಮೆ ಲಾಭ ಮತ್ತು ನಷ್ಟಗಳ ಕುರಿತಾಗಿ ಗಮನ ಹರಿಸಬೇಕಾಗುತ್ತದೆ. (ಗುಡ್ ರಿಟರ್ನ್ಸ್.ಇನ್)
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications