For Quick Alerts
ALLOW NOTIFICATIONS  
For Daily Alerts

ಸರ್ಕಾರಿ-ಖಾಸಗಿ ಬ್ಯಾಂಕ್ ಗಳ ನಡುವಿನ ವ್ಯತ್ಯಾಸವೇನು?

|

ನಾವು ಒಂದಿಲ್ಲೊಂದು ಕಾರಣಕ್ಕೆ ಬ್ಯಾಂಕಿಂಗ್ ಕೆಲಸದಲ್ಲಿ ತೊಡಗಿಕೊಂಡಿರುತ್ತೇವೆ. ಆದರೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಮತ್ತು ಖಾಸಗಿ ಒಡೆತನದ ಬ್ಯಾಂಕ್ ಇವುಗಳ ನಡುವಿನ ಕೆಲ ವ್ಯತ್ಯಾಸಗಳು ಗೊತ್ತಿರುವುದಿಲ್ಲ.

ಹೆಸರೇ ಹೇಳುವಂತೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಲ್ಲಿ ಸರ್ಕಾರದ ಷೇರು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಖಾಸಗಿ ಬ್ಯಾಂಕ್ ಗಳ ಷೇರು ವ್ಯಕ್ತಿಗಳ ಒಡೆತನದಲ್ಲಿ ಇರುತ್ತದೆ. ['ಮುದ್ರಾ' ಬ್ಯಾಂಕ್ ಯಾಕಾಗಿ? ಯಾರು ಫಲಾನುಭವಿಗಳು?]

ಸರ್ಕಾರಿ-ಖಾಸಗಿ ಬ್ಯಾಂಕ್ ಗಳ ನಡುವಿನ ವ್ಯತ್ಯಾಸವೇನು?

ಎಸ್ ಬಿಐ ನ್ನು ಸರ್ಕಾರಿ ಸ್ವಾಮ್ಯದ ಮತ್ತು ಐಸಿಐಸಿಐ ನ್ನು ಖಾಸಿಗಿ ಒಡೆತನದ ಬ್ಯಾಂಕ್ ಎಂದು ಸಾಮಾನ್ಯ ಉದಾಹರಣೆ ನೀಡಬಹುದು. ಎರಡು ಬ್ಯಾಂಕ್ ಗಳು ಒಂದೇ ಬಗೆಯ ಸೇವೆಯನ್ನು ಒದಗಿಸುತ್ತವೆ. ಆದರೆ ಸಮಯ ಮಿತಿ, ಬಡ್ಡಿ ದರದಲ್ಲಿ ಕೊಂಚ ವ್ಯತ್ಯಾಸಗಳಿರುವುದನ್ನು ಕಾಣಬಹುದಾಗಿದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್
ಎಸ್ ಬಿಐ ನ್ನೇ ಉದಾಹರಣೆಯನ್ನಾಗಿ ತೆಗೆದುಕೊಂಡರೆ ಸುಮಾರು ಶೇ.58.87 ಷೇರನ್ನು ಸರ್ಕಾರ ತನ್ನ ಹತ್ತಿರ ಇಟ್ಟುಕೊಂಡಿದೆ. ಪಂಜಾಬ್ ನ್ಯಾಶನಲ್ ಬ್ಯಾಂಕ್ ನ ಶೇ. 58.87 ಷೇರುಗಳು ಸರ್ಕಾರದ ಕೈಯಲ್ಲಿವೆ. ಸಾಮಾನ್ಯವಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಸುಮಾರು ಶೇ.50 ಕ್ಕೂ ಅಧಿಕ ಷೇರುಗಳು ಸರ್ಕಾರದ ಒಡೆತನದಲ್ಲಿ ಇರುತ್ತವೆ. ರಾಷ್ಟ್ರೀಕೃತ ಬ್ಯಾಂಕ್ ಗಳು ಇದರ ಅಡಿಯಲ್ಲೇ ಬರಲಿದ್ದು ಸರ್ಕಾರದ ನಿರ್ದೇಶನಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತವೆ.

ಖಾಸಗಿ ವಲಯದ ಬ್ಯಾಂಕ್ ಗಳು ಖಾಸಗಿ ಒಡೆತನದಲ್ಲಿರುತ್ತವೆ. ಸಂಪೂರ್ಣವಾಗಿ ಮಾಲೀಕನ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ. 1990 ರ ನಂತರ ಸರ್ಕಾರದ ನೀತಿಗಳಲ್ಲಿ ಮಹತ್ತರ ಬದಲಾವಣೆಗಳಾಗಿದ್ದು ಖಾಸಗಿ ವಲಯದಲ್ಲಿ ಹೊಸ ಬ್ಯಾಂಕ್ ನಿರ್ಮಾಣಕ್ಕೆ ಸರ್ಕಾರ ಸುಲಭವಾಗಿ ಲೈಸನ್ಸ್ ನೀಡುತ್ತಿಲ್ಲ.[ಸ್ಯಾಲರಿ ಅಕೌಂಟ್-ಉಳಿತಾಯ ಖಾತೆ ನಡುವಿನ ವ್ಯತ್ಯಾಸವೇನು?]

ಸರ್ಕಾರಿ ಸ್ವಾಮ್ಯ ಮತ್ತು ಖಾಸಗಿ ಬ್ಯಾಂಕ್ ನಡುವಿನ ಪ್ರಮುಖ ವ್ಯತ್ಯಾಸಗಳು
1. ಷೇರು ಯಾರ ಕೈಯಲ್ಲಿರುತ್ತದೆ?
* ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಶೇ. 50 ಕ್ಕಿಂತ ಅಧಿಕ ಷೇರು ಸರ್ಕಾರದ ಕೈಯಲ್ಲಿರುತ್ತದೆ.
* ಖಾಸಗಿ ಬ್ಯಾಂಕ್ ಅತಿಹೆಚ್ಚು ಷೇರಿನ ಒಡೆತನ ವ್ಯಕ್ತಿಗಳ ಕೈಯಲ್ಲಿರುತ್ತದೆ.

2. ಬಡ್ಡಿದರ ಎಷ್ಟು?
* ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಬಡ್ಡಿ ದರ ಕೊಂಚ ಹೆಚ್ಚು.
* ಖಾಸಗಿ ಬ್ಯಾಂಕ್ ಗಳಲ್ಲಿ ಹಲವು ಸಂದರ್ಭ ಕಡಿಮೆ ಬಡ್ಡಿ ದರ ಆಕರಣೆ ಮಾಡಲಾಗುತ್ತದೆ.

3. ಸೇವೆ ಮತ್ತು ಶುಲ್ಕ ಗಳು
ಖಾಸಗಿ ವಲಯದ ಬ್ಯಾಂಕ್ ಗಳು ಉತ್ತಮ ಸೇವೆ ನೀಡುತ್ತವೆ ಎಂಬ ವಾತಾವರಣ ಜನರಲ್ಲಿ ನಿರ್ಮಾಣವಾಗಿದೆ. ವಿಶೇಷ ರೀತಿಯ ಸೌಲಭ್ಯಗಳನ್ನು ಒದಗಿಸುವ ಬ್ಯಾಂಕ್ ಗಳು ಅದಕ್ಕೆ ಶುಲ್ಕವನ್ನು ಪಡೆದುಕೊಳ್ಳುತ್ತವೆ.[30 ವರ್ಷ ಆಸುಪಾಸಿನವರು ಇದನ್ನು ಓದಲೇಬೇಕು]

ಖಾಸಗಿ ಬ್ಯಾಂಕ್ ಗಳಿಗೆ ಹೋಲಿಸಿದರೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳು ವಿಧಿಸುವ ಶುಲ್ಕ ಸ್ವಲ್ಪ ಕಡಿಮೆಯಿರುತ್ತದೆ. ಆದರೆ ಉತ್ತಮ ಸೇವೆ ನೀಡುವುದರಲ್ಲಿ ಇನ್ನು ಬೆಳೆಯಬೇಕಿದೆ ಎಂಬ ಮಾತೂ ಇದೆ.

4. ಗ್ರಾಹಕರು ಯಾರು?
ಸರ್ಕಾರಿ ಸೇವೆಯಲ್ಲಿರುವವರ ಖಾತೆಗಳನ್ನು ವಿವಿಧ ಕಾರಣಕ್ಕೆ ಅಂದರೆ ಅವರ ವೇತನ ಪಾವತಿ, ಪೆನ್ಶನ್ ಗೆ ಸಂಬಂಧಿಸಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ನಲ್ಲಿಯೇ ಮಾಡಲಾಗುತ್ತದೆ.

ಖಾಸಗಿ ಬ್ಯಾಂಕ್ ಗಳು ಕಂಪನಿಗಳ ನೌಕರರ ಮೇಲೆ ತಮ್ಮ ಗಮನವನ್ನು ಕೇಂದ್ರಿಕರಿಸುತ್ತವೆ. ನೆಟ್ ಬ್ಯಾಕಿಂಗ್, ಆಣ್ ಲೈನ್ ಆಫರ್ ಗಳನ್ನು ನೀಡುವುದರಲ್ಲಿ ಇವು ಮುಂಚೂಣಿಯಲ್ಲಿವೆ.

ಕೊನೆ ಮಾತು: ಸಾರ್ವಜನಿಕ ವಲಯದ ಬ್ಯಾಂಕ್ ಗಳು ಮತ್ತು ಖಾಸಗಿ ಬ್ಯಾಂಕ್ ಗಳ ನಡುವೆ ಹಲವಾರು ವ್ಯತ್ಯಾಸಗಳಿದ್ದರೂ ಅಪುಗಳ ಅಂತಿಮ ಗುರು ಜನರಿಗೆ ಸೇವೆ ನೀಡುವುದೇ ಆಗಿದೆ. ಸಾರ್ವಜನಿಕ ಬ್ಯಾಂಕ್ ಗಳು ಕೆಲಸವನ್ನು ವಿಳಂಬ ಮಾಡುತ್ತವೆ ಎಂಬ ದೂರು ಇದೆ.(ಗುಡ್ ರಿಟರ್ನ್ಸ್.ಇನ್)

English summary

What is the Difference Between Public Sector and Private Sector Banks

Public sector banks are those where majority of the stake in the bank is held by government. Where as in private sector bank, majority is held by share holders of the bank. Individuals get a fair idea, if we say SBI is a public sector bank and ICICI is a private sector bank.
 
 
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X