For Quick Alerts
ALLOW NOTIFICATIONS  
For Daily Alerts

ಏನಿದು ಕಾಂಟ್ಯಾಕ್ಟ್ ಲೆಸ್ ಡೆಬಿಟ್ ಕಾರ್ಡ್? ಬಳಕೆ ಹೇಗೆ?

|

ಹಲವಾರು ಬ್ಯಾಂಕ್ ಗಳು ಕಾಂಟ್ಯಾಕ್ಟ್ ಲೆಸ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆಗೆ ಉತ್ತೇಜನ ನೀಡಲು ಮುಂದಾಗುತ್ತಿವೆ. ಐಸಿಐಸಿಐ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ಗಳು ಈಗಾಗಲೇ ಇದನ್ನು ಅಳವಡಿಸಿಕೊಂಡಿದ್ದು ಎಸ್ ಬಿಐ ಸಹ ಇದರೆಡೆ ಹೆಜ್ಜೆ ಇಟ್ಟಿದೆ.

 

ಹಾಗಾದರೆ ಕಾಂಟ್ಯಾಕ್ಟ್ ಲೆಸ್ ಕಾರ್ಡ್ ಗಳು ಎಂದರೆ ಏನು? ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಈ ಕಾರ್ಡ್ ಗಳನ್ನು ಮಶಿನ್ ಗಳ ಸಂಪರ್ಕಕ್ಕೆ ತರಬೇಕಾಗಿಲ್ಲ. ಹೊಸ ಬಗೆಯ ಕಾರ್ಡ್ ಮೇಲೆ ಸಂಪರ್ಕ ರಹಿತ ಎಂದು ಸಾರುವ ಚಿಹ್ನೆ ಇರುತ್ತದೆ. ಹಾಗಾಗಿ ಕಾರ್ಡ್ ನ್ನು ಮಶಿನ್ ಗೆ ಹಾಕಿ ಸ್ವೈಪ್ ಮಾಡುವ ಅಗತ್ಯ ವಿಲ್ಲ ಮತ್ತು ಇಲ್ಲಿ ಪಿನ್ ದಾಖಲಿಸುವ ತಾಪತ್ರಯವಿಲ್ಲ.[ಎಟಿಎಂ ಮೂಲಕ ಹಣ ಡಿಪಾಸಿಟ್ ಮಾಡೋದು ಹೇಗೆ?]

 
ಏನಿದು ಕಾಂಟ್ಯಾಕ್ಟ್ ಲೆಸ್ ಡೆಬಿಟ್ ಕಾರ್ಡ್? ಬಳಕೆ ಹೇಗೆ?

ಈ ಕಾರ್ಡ್ ಎರಡು ಬಗೆಯಲ್ಲೂ ಬಳಕೆಯಾಗುತ್ತದೆ. Near Field Communication (NFC) ತಂತ್ರಜ್ಞಾನದ ಮೂಲಕ ಈ ಕಾರ್ಡ್ ಗಳು ಕೆಲಸ ಮಾಡುತ್ತವೆ.[ಒಟಿಪಿ ಎಂದರೇನು? ಪಡೆದುಕೊಳ್ಳುವುದು ಹೇಗೆ?]

ಕಾರ್ಡ್ ಬಳಸುವುದು ಹೇಗೆ?
ಮಶಿನ್ ಮತ್ತು ನಿಮ್ಮ ಕಾರ್ಡ್ ಗೆ ಹೊಂದಾಣಿಕೆಯಾಗುವಂತೆ ಒಂದು ಚಿಹ್ನೆಯನ್ನು ನೀಡಿರಲಾಗುತ್ತದೆ. ನಿಮ್ಮ ಕಾರ್ಡ್ ನಲ್ಲಿರುವ ಚಿಹ್ನೆಯನ್ನು ಮಶಿನ್ ನ ಚಿಹ್ನೆ ಎದುರು ಹಿಡಿಯಬೇಕಾಗುತ್ತದೆ. ಹಸಿರು ದೀಪ ಬಂದು ಮಶಿನ್ ಬಿಪ್ ಸೌಂಡ್ ಮಾಡಿದರೆ ನಿಮ್ಮ ಹಣಕಾಸು ವ್ಯವಹಾರ ಆಯಿತು ಅಂತಲೇ ಅರ್ಥ.

ಈ ಕಾರ್ಡ್ ನ್ನು ವೀಸಾ ಕಾರ್ಡ್ ರೀತಿಯಲ್ಲೂ ಬಳಸಬಹುದು. ಹೆಚ್ಚಿನ ಹಣ ಪಾವತಿ ಮಾಡುವ ವೇಳೆ ಈ ರೀತಿ ಬಳಕೆ ಮಾಡಬಹುದು. ಆದರೆ ಇಲ್ಲಿ ಹಳೆಯ ವಿಧಾನ ಅಂದರೆ ಪಿನ್ ದಾಖಲಿಸುವ ವಿಧಾನವನ್ನೇ ಬಳಕೆ ಮಾಡಲಾಗುತ್ತದೆ.

ಚಿಕ್ಕ ಚಿಕ್ಕ ಹಣದ ರವಾನೆ ಅಥವಾ ಹಣ ಪಡೆಯಲು ಈ ಕಾರ್ಡ್ ಉತ್ತಮವಾಗಿದೆ. ತಿಂಗಳಲ್ಲಿ ಎಷ್ಟು ಸಾರಿ ಕಾರ್ಡ್ ಬಳಕೆ ಮಾಡಬಹುದು ಎಂಬುದಕ್ಕೆ ಬ್ಯಾಂಕ್ ಗಳು ಇನ್ನು ಯಾವ ಸ್ಪಷ್ಟ ನಿರ್ದೇಶನ ಹೊರಡಿಸಿಲ್ಲ.

ಕೆಲ ಎಚ್ಚರಿಕೆ ಸಂಗತಿಗಳು ಇವೆ
ಎರಡು ಸಾವಿರಕ್ಕೂ ಅಧಿಕ ಮೊತ್ತ ಪೇಮೆಂಟ್ ಮಾಡಬೇಕಾಗಿದೆ. ಈ ಸಂದರ್ಭ ನೀವು ಕಾಂಟಾಕ್ಟ್ ಲೆಸ್ ಮಾರ್ಗ ಅನುಸರಿಸಲು ಮುಂದಾಗುತ್ತಿದ್ದಿರಿ ಎನ್ನುವಾಗ ಒಮ್ಮೆ ಸುತ್ತಲಿನ ಪರಿಸರದ ಮೇಲೆ ಕಣ್ಣು ಹಾಯಿಸುವುದು ಉತ್ತಮ.

ಒಂದು ವೇಳೆ ಕಾರ್ಡ್ ಕಳೆದುಕೊಂಡರೆ ಕೂಡಲೇ ಅಂತರ್ಜಾಲ ತಾಣ, ಫೋನ್ ಬ್ಯಾಂಕಿಂಗ್, ಎಸ್‌ ಎಂ ಎಸ್ ಮೂಲಕ ಸಂಬಂಧಿಸಿದ ಬ್ಯಾಂಕ್ ಗೆ ಮಾಹಿತಿ ದಾಖಲು ಮಾಡಬೇಕು. (ಗುಡ್ ರಿಟರ್ನ್ಸ್.ಇನ್)

English summary

Contactless Debit Cards, Credit cards: What You Should Know

Banks are increasingly coming up with contactless debit and credit cards. ICICI Bank, HDFC followed by SBI launched the contactless cards. Contactless cards will have contactless symbol on the cards. Using the card is simple and there is no need to type your PIN in the swipe machine.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X