ಎಟಿಎಂನೊಳಗೆ ಕಾರ್ಡ್ ಸಿಕ್ಕೊಂಡ್ರೆ ಏನು ಮಾಡೊದು?

ಆಧುನಿಕ ಸಮಾಜದಲ್ಲಿ ಎಟಿಎಂ ಯಂತ್ರದಿಂದ ಹಣ ತೆಗೆದುಕೊಳ್ಳುವುದನ್ನು ಯಾರಿಗೂ ಹೇಳಿಕೊಡಬೇಕಾಗಿಲ್ಲ, ಕೆಲವೆಡೆ ಕಾರ್ಡ್ ಸ್ವೈಪ್ ಮಾಡಿದರೆ ಇನ್ನು ಕೆಲವು ಯಂತ್ರಗಳ ಒಳಕ್ಕೆ ಕಾರ್ಡ್ ಹಾಕಬೇಕಾಗುತ್ತದೆ.

ನಮ್ಮ ದುರಾದೃಷ್ಟವೋ, ಗ್ರಹಚಾರವೋ, ಮಶಿನ್ ತೊಂದರೆಯೋ, ಒಳಕ್ಕೆ ಹಾಕಿದ ಕಾರ್ಡ್ ಹೊರಕ್ಕೆ ಬರುವುದಿಲ್ಲ. ಇಂಥ ಸಂದರ್ಭದಲ್ಲಿ ಒಂದು ಕ್ಷಣ ಗೊಂದಲಕ್ಕೆ ಸಿಲುಕುವುದು ನಿಜ. ತಕ್ಷಣಕ್ಕೆ ಏನು ಮಾಡಬೇಕು ಎಂಬುದು ತೋಚುವುದಿಲ್ಲ.[ಹಣ ಬಾರದಿದ್ದರೆ, ಕಾರ್ಡ್ ಸಿಕ್ಕಿಕೊಂಡರೆ ಯಾರು ಹೊಣೆ?]

ಎಟಿಎಂನೊಳಗೆ ಕಾರ್ಡ್ ಸಿಕ್ಕೊಂಡ್ರೆ ಏನು ಮಾಡೊದು?

ವಿದ್ಯುತ್ ಸಮಸ್ಯೆ, ತಪ್ಪಾದ ಪಾಸ್ ವರ್ಡ್ ಗಳನ್ನು ಮೂರು ಬಾರಿ ನಮೂದಿಸುವುದು, ಯಂತ್ರ ಕೇಳಿದ ಮಾಹಿತಿ ದಾಖಲಿಸಲು ಬಹಳ ಸಮಯ ತೆಗೆದುಕೊಳ್ಳುವುದು, ಹೀಗೆ ಹಲವಾರು ಕಾರಣಗಳಿಂದ ಕಾರ್ಡ್ ಒಳಕ್ಕೆ ಸಿಕ್ಕಿಹಾಕಿಕೊಳ್ಳಬಹುದು. ಇಂಥ ಸಂದರ್ಭದ ಎದುರಾದರೆ ನಾವು ಏನು ಮಾಡಬೇಕು ಎಂಬುದಕ್ಕೆ ಉತ್ತರ ಇಲ್ಲಿದೆ.

ಕಾರ್ಡ್ ಸಿಕ್ಕಿಕೊಂಡರೆ ಏನು ಮಾಡುವುದು?
ಕಾರ್ಡ್ ಸಿಕ್ಕಿಹಾಕಿಕೊಂಡರೆ ಮೊದಲಿಗೆ ನಿಮ್ಮ ಕಸ್ಟಮರ್ ಕೇರ್ ಗೆ ಕರೆ ಮಾಡಿ ಮಾಹಿತಿ ತಿಳಿಸಿ. ಅದು ಸಾಧ್ಯವಾಗದಿದ್ದರೆ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಸಂಗತಿ ತಿಳಿಸಿ. ನಿಮ್ಮ ಕಾರ್ಡ್ ನ್ನು ತಕ್ಷಣ ಬ್ಲಾಕ್ ಮಾಡುವಂತೆ ಬ್ಯಾಂಕ್ ಸಲಹೆ ನೀಡುತ್ತದೆ. ಆ ರೀತಿ ಮಾಡುವುದೇ ಉತ್ತಮ.[ಏನಿದು ಆಡ್ ಆನ್ ಕ್ರೆಡಿಟ್ ಕಾರ್ಡ್? ಬಳಕೆ ಮಾಡೋದು ಹೇಗೆ?]

ನಿಮ್ಮ ಕಾರ್ಡ್ ಬ್ಲಾಕ್ ಆದ ನಂತರ ಹೊಸ ಕಾರ್ಡ್ ಗಾಗಿ ಫೋನ್ ಬ್ಯಾಂಕಿಂಗ್ ಅಥವಾ ಖುದ್ದಾಗಿ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ. ವಿಳಾಸ ದೃಢೀಕರಣ ಸೇರಿದಂತೆ ವಿವಿಧ ದಾಖಲೆಗಳನ್ನು ನೀಡಬೇಕಾಗುತ್ತದೆ.

ಸಿಕ್ಕಿಹಾಕಿಕೊಂಡ ನಿಮ್ಮ ಕಾರ್ಡ್ ನ್ನು ಹಿಂದಕ್ಕೆ ಪಡೆಯುವ ಸಾಧ್ಯತೆಯೂ ಇರುತ್ತದೆ. ಆದರೆ ಕಾರ್ಡ್ ಮತ್ತು ಎಟಿಎಂ ಯಂತ್ರ ಒಂದೇ ಬ್ಯಾಂಕಿನದ್ದಾಗಿರಬೇಕು. ಎಚ್ ಡಿಎಫ್ ಸಿ ಬ್ಯಾಂಕ್ ಎಟಿಎಂ ನಲ್ಲಿ ಎಚ್ ಡಿಎಫ್ ಸಿ ಕಾರ್ಡ್ ಸಿಕ್ಕಿಕೊಂಡರೆ ಯಾವ ಎಟಿಎಂ ಎಂಬ ಮಾಹಿತಿ ನೀಡಿದರೆ ಕಾರ್ಡ್ ಹಿಂದಕ್ಕೆ ಪಡೆದುಕೊಳ್ಳಬಹುದು.

ಇದು ಸಾಧ್ಯವಾಗದಿದ್ದಾಗ ನೀವು ಹಣದ ರವಾನೆಗೆ ಬೇರೆ ಮಾರ್ಗ ಅನುಸಾರ ಮಾಡಬೇಕಾಗುತ್ತದೆ, ಹೊಸ ಕಾರ್ಡ್ ಮತ್ತು ಪಿನ್ ಬರುವಲ್ಲಿಯವರೆಗೂ ನೀವು ಕಾಯಬೇಕಾಗುತ್ತದೆ.[ಡೆಬಿಟ್ ಕಾರ್ಡ್ ಕಳೆದುಕೊಂಡರೆ ಏನು ಮಾಡಬೇಕು?]

ಕೆಲ ಬ್ಯಾಂಕ್ ಗಳು ಹೊಸ ಕಾರ್ಡ್ ನೀಡಲು ನಿರ್ದಿಷ್ಟ ಶುಲ್ಕ ವಿಧಿಸುತ್ತವೆ. ಅದನ್ನು ನೀವು ಭರಿಸಬೇಕಾಗುತ್ತದೆ. ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಯಾವುದೇ ಸಿಕ್ಕಿಹಾಕಿಕೊಂಡರೂ ಇದೇ ಹಂತಗಳನ್ನು ಅನುಸರಿಸಬೇಕಾಗುತ್ತದೆ.

ಕೊನೆ ಮಾತು
ಎಟಿಎಂ ಯಂತ್ರದಲ್ಲಿ ಕಾರ್ಡ್ ಸಿಲುಕಿದರೆ ಬ್ಯಾಂಕ್ ಯಾವ ಕಾರಣಕ್ಕೂ ಹೊಣೆಗಾರಿಕೆ ಹೊತ್ತುಕೊಳ್ಳುವುದಿಲ್ಲ. ಹೊಸ ಕಾರ್ಡ್ ಪಡೆಯಲು ನೂರು ರು. ಶುಲ್ಕ ನೀಡಬೇಕು ಎಂದು ಯೋಚನೆ ಮಾಡುತ್ತ ನಿಲ್ಲುವ ಬದಲು ಸಂಗತಿ ಗಮನಕ್ಕೆ ಬಂದ ತಕ್ಷಣ ಬ್ಯಾಂಕಿಗೆ ಮಾಹಿತಿ ನೀಡಿ ಬ್ಲಾಕ್ ಮಾಡಿಸುವುದು ಒಳಿತು.(ಗುಡ್ ರಿಟರ್ನ್ಸ್.ಇನ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+