ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಹೊಸ ಹಣಕಾಸು ನೀತಿ ಪ್ರಕಟಿಸುತ್ತಿದ್ದಂತೆ ಬ್ಯಾಂಕುಗಳು ಕೂಡಾ ತನ್ನ ಬಡ್ಡಿದರದಲ್ಲಿ ಏರು ಪೇರು ಮಾಡುವುದು ಮಾಮೂಲಿ. ಬ್ಯಾಂಕುಗಳಲ್ಲಿನ ಠೇವಣಿಯ ಬಡ್ಡಿದರ ಇಳಿಮುಖವಾಗುತ್ತಿದ್ದು, ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡಾ ತನ್ನ ಬಡ್ಡಿದರವನ್ನು ಕಡಿತಗೊಳಿಸಲು ಮುಂದಾಗುತ್ತವೆ, ಅದರೆ, ಖಾಸಗಿ ವಲಯದ ಬ್ಯಾಂಕುಗಳು ತಕ್ಷಣಕ್ಕೆ ಬಡ್ಡಿದರದಲ್ಲಿ ಬದಲಾವಣೆ ಮಾಡುವುದು ಕಡಿಮೆ.
ಉತ್ತಮ ಬಡ್ಡಿ ನೀಡುವ ಬ್ಯಾಂಕುಗಳಲ್ಲಿ ತಮ್ಮ ಸಂಬಳವನ್ನು ಹಾಕಿಕೊಳ್ಳುವುದು ಜಾಣತನ, ಸದ್ಯದ ಪರಿಸ್ಥಿತಿಯಲ್ಲಿ ಉತ್ತಮ ಬಡ್ಡಿದರ ನೀರಿಕ್ಷೆ ಇದ್ದರೆ ಕನಿಷ್ಠ 3 ರಿಂದ 5 ವರ್ಷದ ಅವಧಿಗೆ ಹೂಡಿಕೆ ಮಾಡಬೇಕಾಗುತ್ತದೆ. ಕನಿಷ್ಠ 12 ರಿಂದ 24 ತಿಂಗಳು, 15 ಲಕ್ಷದಿಂದ 1 ಕೋಟಿ ರು ತನಕ ಹೂಡಿಕೆಗೆ ಶೇ 9ಕ್ಕಿಂತ ಹೆಚ್ಚಿನ ಬಡ್ಡಿದರ ನೀಡುವ ಪ್ರಮುಖ ಬ್ಯಾಂಕುಗಳ ವಿವರ ಇಲ್ಲಿದೆ.
ಬ್ಯಾಂಕುಗಳಲ್ಲದೆ ಆರ್ಥಿಕ ಸಂಸ್ಥೆಗಳಾದ ಮಹೀಂದ್ರ ಫೈನಾನ್ಸ್, ಕೇರಳ ಸರ್ಕಾರದ ಕೆಟಿಡಿಎಫ್ ಸಿ ಮುಂತಾದ ಸಂಸ್ಥೆಗಳು ಶೇ 10ರಷ್ಟು ಬಡ್ಡಿದರ ನೀಡುತ್ತಿವೆ. ಮಾರುಕಟ್ಟೆಯಲ್ಲಿ ಭಾರಿ ಆರ್ಥಿಕ ಸಂಚಲನವಾಗದಿದ್ದರೆ ಅಬ್ಬಬ್ಬಾ ಎಂದರೆ ಶೇ 0.50 ರಿಂದ ಶೇ 0.75 ರಷ್ಟು ಬಡ್ಡಿದರ ಇಳಿಕೆಯಾಗಬಹುದು ಅಷ್ಟೇ. ಹೀಗಾಗಿ ಹೂಡಿಕೆಗೂ ಮುನ್ನ ಆಲೋಚಿಸಿ...
ಬಸ್ಸೆನ್ ಕ್ಯಾಥೋಲಿಕ್ ಕೋ ಆಪರೇಷನ್ ಬ್ಯಾಂಕ್
ಶೇ 9.85
ಅವಧಿ: 12 ತಿಂಗಳಿಂದ 18 ತಿಂಗಳು
15 ಲಕ್ಷ ರು ಹಾಗೂ ಅಧಿಕ ಮೊತ್ತದ ಹೂಡಿಕೆಗೆ
ರತ್ನಾಕರ್ ಬ್ಯಾಂಕ್
ಶೇ 9.25
ಅವಧಿ: 12 ತಿಂಗಳಿಂದ 24 ತಿಂಗಳು
1 ಕೋಟಿ ರು ರಿಂದ 3 ಕೋಟಿ ರು ತನಕ
ಶಾಮರಾವ್ ವಿಠಲ್ ಕೋ ಆಪರೇಟಿವ್ ಬ್ಯಾಂಕ್
ಶೇ 9.15
ಎವಿ ಡಿಪಾಸಿಟ್ ಸ್ಕೀಮ್-366 ದಿನಗಳು (ಸಾಮಾನ್ಯ ಬಡ್ಡಿ)
1 ಕೋಟಿ ರು ಗೂ ಕಡಿಮೆ ಹೂಡಿಕೆ
ಕ್ಯಾಥಲೀಕ್ ಸಿರಿಯನ್ ಬ್ಯಾಂಕ್
ಶೇ 9.1೦
400 ದಿನಗಳು (ಆಚಾರ್ಯ ಡಿಪಾಸಿಟ್ಸ್)
1 ಕೋಟಿ ರು ಹಾಗೂ ಅಧಿಕ ಹೂಡಿಕೆಗೆ
ಯಸ್ ಬ್ಯಾಂಕ್
ಶೇ 8.85
21 ತಿಂಗಳು, 10 ದಿನಗಳು ಅವಧಿ 21 ತಿಂಗಳು, 20 ದಿನಗಳು
1 ಕೋಟಿ ರು ಗೂ ಕಡಿಮೆ ಹೂಡಿಕೆ
ಲಕ್ಷ್ಮಿ ವಿಲಾಸ್ ಬ್ಯಾಂಕ್
ಶೇ 8.80
1 ವರ್ಷದಿಂದ 2 ವರ್ಷದ ಅವಧಿ
1 ಕೋಟಿ ರು ಗೂ ಕಡಿಮೆ ಹೂಡಿಕೆ


Click it and Unblock the Notifications