ಆದಾಯ ತೆರಿಗೆ ರಿಟರ್ನ್ಸ್ ಪಾವತಿಗೆ ಕೊನೆ ದಿನ(ಆಗಸ್ಟ್ 31) ಹತ್ತಿರ ಬರುತ್ತಿದೆ. 5 ಲಕ್ಷ ರು. ಗೂ ಅಧಿಕ ಆದಾಯ ಹೊಂದಿರುವವರು ಎಲ್ಲ ಮಾಹಿತಿಗಳನ್ನು, ದಾಖಲೆಯನ್ನು ಸಲ್ಲಿಕೆ ಮಾಡಲೇಬೇಕಾಗುತ್ತದೆ.
ಎಲ್ಲಿಂದ ಬೇಕಾದರೂ ಇ ಫಿಲ್ಲಿಂಗ್ ಮಾಡಲು ಸಾಧ್ಯವಿದೆ. ಅಲ್ಲದೇ ಅಂತರ್ಜಾಲದ ಮೂಲಕ ಸಲ್ಲಿಕೆ ಮಾಡಿರುವ ರಿಟರ್ನ್ಸ್ ಗಳ ವೇಗವೂ ಹೆಚ್ಚು. ನಿಗದಿತ ದಿನಾಂಕದೊಳಗೆ ಸಲ್ಲಿಕೆ ಮಾಡದಿದ್ದರೆ ನೀವು ಬಡ್ಡಿಯನ್ನು ಕಟ್ಟಬೇಕಾಗುತ್ತದೆ.

ಹಾಗಾದರೆ ಇ ಫಿಲ್ಲಿಂಗ್ ಮಾಡಲು ಲಭ್ಯವಿರುವ ವೆಬ್ ತಾಣಗಳು ಯಾವವು? ಅವುಗಳಲ್ಲಿ ಉತ್ತಮವಾದದ್ದು ಯಾವವು? ಎಂಬುದರ ಮೇಲೆ ಒಂದು ನೋಟ ಹರಿಸೋಣ..
1. ಎಚ್ ಆಂಡ್ ಆರ್ ಬ್ಲಾಕ್
ಎಚ್ ಆಂಡ್ ಆರ್ ಬ್ಲಾಕ್ ವ್ಯಕ್ತಿಗೆ ಉಚಿತವಾಗಿ ರಿಟರ್ನ್ಸ್ ಫೈಲ್ ಅವಕಾಶ ಕಲ್ಪಿಸಿ ಕೊಡುತ್ತದೆ.ಫಾರ್ಮ್ 16 ನ್ನು ಇದು ಆಟೋ ರೀಡ್ ಮಾಡುತ್ತದೆ. ಎನ್ ಆರ್ ಐಗಳು ಸಹ ಇದರ ಮೂಲಕ ರಿಟರ್ನ್ಸ್ ಸಲ್ಲಿಕೆ ಮಾಡಲು ಅವಕಾಶವಿದೆ. ನೀವು ಸಲ್ಲಿಸುವ ರಿಟರ್ನ್ಸ್ ಆಧಾರದ ಮೇಲೆ ಶುಲ್ಕ ತೆಗೆದುಕೊಳ್ಳಲಾಗುತ್ತದೆ.
2. ವಿಟ್ಟೆ ಟ್ಯಾಕ್ಸ್
ಸದ್ಯ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಪ್ರಮುಖ ತಾಣಗಳಲ್ಲಿ ವಿಟ್ಟೆ ಹೆಸರು ಮಾಡಿದೆ. ವೇತನ ಪಡೆಯುತ್ತಿರುವವರು, ಪೆನ್ಶನ್ ದಾರರು, ಉದ್ದಿಮೆದಾರರು, ಎನ್ ಆರ್ ಐ ಮತ್ತು ವಿದೇಶದಲ್ಲಿ ಉದ್ಯೋಗ ಕಂಡುಕೊಳ್ಳಲು ಬಯಸುವವರಿಗೆ ಈ ತಾಣ ಹೇಳಿ ಮಾಡಿಸಿದ್ದಾಗಿದೆ.
3. ಕ್ಲೀಯರ್ ಟ್ಯಾಕ್ಸ್
ಕೇಂದ್ರ ಸರ್ಕಾರದ ಅಡಿಯಲ್ಲಿ ಕ್ಲೀಯರ್ ಟ್ಯಾಕ್ಸ್ ಕಾರ್ಯ ನಿರ್ವಹಿಸುತ್ತ ಬಂದಿದೆ. ಮಹಿಳೆಯರು, ಹಿರಿಯ ನಾಗರಿಕರು, ಸೈನಿಕರಿಗೆ ಅನುಕೂಲ ಆಗುವರ ರೀತಿಯಲ್ಲಿ ಇದನ್ನು ಡಿಸೈನ್ ಮಾಡಲಾಗಿದೆ. ನೀವು ಸಲ್ಲಿಕೆ ಮಾಡುವ ರಿಟರ್ನ್ಸ್ ಆಧಾರದಲ್ಲಿ 599-1800 ರು. ವರೆಗೂ ಶುಲ್ಕ ತೆಗೆದುಕೊಳ್ಳಲಾಗುತ್ತದೆ.
4. ಟ್ಯಾಕ್ಸ್ ಸ್ಮೈಲ್
ಕಾರ್ಪೋರೇಟ್ ಕ್ಷೇತ್ರದಲ್ಲಿರುವವರನ್ನು ಗಣನೆಗೆ ತೆಗೆದುಕೊಂಡು ಇದನ್ನು ಡಿಸೈನ್ ಮಾಡಲಾಗಿದೆ. ನೀವೇ ಆದಾಯ ತೆರಿಗೆ ರಿಟರ್ನ್ಸ್ ದಾಖಲು ಮಾಡುತ್ತೀರಿ ಎಂದಾದಲ್ಲಿ ಈ ತಾಣವನ್ನು ಬಳಸಿಕೊಳ್ಳುವುದು ಉತ್ತಮ. ಫಾರ್ಮ್ 16 ನ್ನು ಸಲ್ಲಿಕೆ ಮಾಡಿದರೆ ಸಾಕು ಉಳಿದ ಕೆಲಸವನ್ನು ಟ್ಯಾಕ್ಸ್ ಸ್ಮೈಲ್ ನೋಡಿಕೊಳ್ಳುತ್ತದೆ.
5. ಟ್ಯಾಕ್ಸ್ ಸ್ಪಾನರ್
ಭಾರತದಲ್ಲಿ ಅತಿ ಹೆಚ್ಚು ನಂಬುಗೆಗೆ ಪಾತ್ರವಾದ ತಾಣ ಎಂಬ ಹಿರಿಮೆಯನ್ನು ಇದು ಪಡೆದುಕೊಂಡಿದೆ. ಆದರೆ ಇಲ್ಲಿ ಯಾವ ಉಚಿತ ಅವಕಾಶಗಳಿಲ್ಲ. 449 ರು. ನಿಂದ ಶುಲ್ಕಗಳು ಆರಂಭವಾಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರು ಶೇ. 50 ಕಡಿತ ಪಡೆಯಬಹುದು. ಇ-ಫೈಲ್, ಇನ್ ವೆಸ್ಟರ್ -ಇ ಫೈಲ್, ಬಿಸಿನೆಸ್ ಇ-ಫೈಲ್ ಎಂಬ ವಿವಿಧ ಬಗೆಯ ಕೆಟಗೆರಿಯನ್ನು ಹೊಂದಿದೆ.
6. ಇನ್ ಕಮ್ ಟ್ಯಾಕ್ಸ್ ಇಂಡಿಯಾ ಇನ್ ಕಮ್
ಆದಾಯ ತೆರಿಗೆ ಇಲಾಖೆಯ ಸೇವೆಗಳನ್ನು ಬಳಸಿಕೊಂಡೆ ಇದು ಕೆಲಸ ಮಾಡುತ್ತದೆ. ಎಲ್ಲ ಸೇವೆಗಳು ಉಚಿತವಾಗಿ ಲಭ್ಯವಿದ್ದು 24 ಗಂಟೆಗಳ ಸೇವಾ ಕೇಂದ್ರದ ಸೌಲಭ್ಯವನ್ನು ಹೊಂದಿರುತ್ತದೆ.
ಕೊನೆ ಮಾತು: ಆದಾಯ ತೆರಿಗೆ ಪಾವತಿ ಸಲ್ಲಿಕೆ ಮಾಡುವುದು ಕಡ್ಡಾಯ. ಒಂದು ವೇಳೆ ಯಾವುದೋ ನೆಪ ಹೇಳಿ ತಪ್ಪಿಸಿಕೊಂಡರೆ ಮುಂದೆ ತೊಂದರೆಗೆ ಸಿಕ್ಕಿ ಹಾಕಿಕೊಳ್ಳಬೇಕಾಗುತ್ತದೆ.(ಗುಡ್ ರಿಟರ್ನ್ಸ್. ಇನ್)


Click it and Unblock the Notifications