ತೆರಿಗೆ ಮುಕ್ತ ಬಾಂಡ್ ಖರೀದಿ ಮಾಡೋದು ಹೇಗೆ?

ತೆರಿಗೆ ಉಳಿತಾಯ ಮಾಡಲು ಅಥವಾ ವಿನಾಯಿತಿ ಪಡೆದುಕೊಳ್ಳಲು ಅನೇಕ ತಂತ್ರಗಳಿವೆ. ಭಾರತದಲ್ಲಿ ಲಭ್ಯವಿರುವ ತೆರಿಗೆ ಉಳಿತಾಯ ರೀತಿ ನೀತಿಗಳ ಬಗ್ಗೆ ನಿಮಗೆ ಗೊತ್ತಿರಬಹುದು. ಪಿಪಿಎಫ್ ಸಹ ತೆರಿಗೆ ವಿನಾಯಿತಿ ತಂತ್ರಗಳಲ್ಲಿ ಒಂದು.

ಉಳಿದಂತೆ ಫಿಕ್ಸೆಡ್ ಡಿಫಾಸಿಟ್, ಎನ್ ಎಸ್ ಸಿ, ಭಾರತೀಯ ಅಂಚೆ ಠೇವಣಿಗಳು, ಎಂಪ್ ಐಎಸ್ ಗಳನ್ನು ತೆರಿಗೆ ವಿನಾಯಿತಿಗೋಸ್ಕರ ಪಡೆದುಕೊಳ್ಳಬಹುದು.[ಹಣ ಉಳಿಬೇಕು ಅಂದ್ರೆ ಕಪಲ್ ಗಳು ಇದನ್ನು ಓದ್ಬೇಕು]

ತೆರಿಗೆ ಮುಕ್ತ ಬಾಂಡ್ ಖರೀದಿ ಮಾಡೋದು ಹೇಗೆ?

ತೆರಿಗೆ ಮುಕ್ತ ಬಾಂಡ್ ಗಳ ಬಗ್ಗೆ ತಿಳಿದುಕೊಳ್ಳಿ
ಕಳೆದ ಕೆಲ ವರ್ಷಗಳಿಂದ ತೆರಿಗೆ ಮುಕ್ತ ಬಾಂಡ್ ಗಳಿಗೆ ವಿಶೇಷ ಮಹತ್ವ ಬಂದಿದೆ. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಭಾರತೀಯ ರೈಲ್ವೆ ಹಣಕಾಸು ಕಾರ್ಪೋರೇಶನ್, ಗ್ರಾಮೀಣ ವಿದ್ಯುದ್ದೀಕರಣ ಕಾರ್ಪೋರೇಶನ್, ಹೌಸಿಂಗ್ ಆಂಡ್ ಅರ್ಬನ್ ಡೆವಲಪ್ ಮೆಂಟ್ ಕಾರ್ಪೋರೇಶನ್ ಗಳು ಸಹ ತೆರಿಗೆ ಮುಕ್ತ ಬಾಂಡ್ ಗಳನ್ನು ನೀಡುತ್ತಿವೆ.

ಸಾಮಾನ್ಯವಾಗಿ ಈ ಎಲ್ಲ ಬಾಂಡ್ ಗಳು ಶೇ. 7 ರಿಂದ 9.5 ರ ನಡುವೆ ಬಡ್ಡಿ ಒದಗಿಸುತ್ತದೆ. ತೆರಿಗೆ ವಿನಾಯಿತಿ ತಂತ್ರದಲ್ಲಿ ಈ ಬಗೆಯ ಬಾಂಡ್ ಗಳ ಬಳಕೆ ಪ್ರಸಿದ್ಧಿ ಪಡೆದುಕೊಳ್ಳುತ್ತಿದ್ದು ಮಾರುಕಟ್ಟೆಯಿಂದ ನೇರವಾಗಿ ಖರೀದಿ ಮಾಡಬಹುದು.[ತೆರಿಗೆ ಮುಕ್ತ ಆದಾಯ ಗಳಿಕೆಗೆ 7 ವಿಧಾನಗಳು]

ತೆರಿಗೆ ಮುಕ್ತ ಬಾಂಡ್ ಗಳನ್ನು ಕೊಳ್ಳುವುದುದು ಹೇಗೆ?
ಈ ಎಲ್ಲ ಬಾಂಡ್ ಗಳನ್ನು ನೊಫ್ಟಿ ಮತ್ತು ಸೆನ್ಸೆಕ್ಸ್ ಎರಡರಲ್ಲೂ ಲಿಸ್ಟ್ ಮಾಡಲಾಗಿರುತ್ತದೆ. ಷೇರು ಖರೀದಿಸಿದಂತೆ ಇವುಗಳನ್ನು ಖರೀದಿಸಲು ಸಾಧ್ಯ. ನೀವು ಹುಡ್ಕೋದ ಬಾಂಡ್ ಖರೀದಿ ಮಾಡಲು ಮುಂದಾಗಿದ್ದರೆ ನೇರವಾಗಿ ಆನ್ ಲೈನ್ ತಾಣಕ್ಕೆ ಲಾಗ್ ಇನ್ ಆಗಿ. ಹುಡ್ಕೋ ಎಂದು ಟೈಪ್ ಮಾಡಿ ಅಲ್ಲಿ ನಿಮಗೆ ಖರೀದಿ ಬಗ್ಗೆ ಸಕಲ ಮಾಹಿತಿ ಸಿಗುತ್ತದೆ.

ನೀವು ಬ್ರೋಕರ್ ಬಳಿಯೂ ಮಾತನಾಡಿ ಬಾಂಡ್ ಖರೀದಿ ಮಾಡುವಂತೆ ಕೇಳಿಕೊಳ್ಳಬಹುದು. ಎನ್ ಎಸ್ ಇ ಮಾರುಕಟ್ಟೆ ದರ ವೀಕ್ಷಣೆ ಮಾಡುವಾಗ ಸಹ ಹುಡ್ಕೋ ಬೆಲೆಯನ್ನು ತಿಳಿದುಕೊಳ್ಳಬಹುದು.

ಉಳಿದ ಮಾಹಿತಿಗಳನ್ನು ನೋಂದಣಿ ಮಾಡುವುದರ ಮೂಲಕ ಬಾಂಡ್ ಗೆ ಸಂಬಂಧಿಸಿದ ವಿವರ ಪಡೆದುಕೊಳ್ಳಬಹುದು. ಇಂಥ ಬಾಂಡ್ ಗಳನ್ನು ಖರೀದಿ ಮಾಡುವುದು ಸುಲಭ. ಅಲ್ಲದೇ ತೆರಿಗೆ ವಿನಾಯಿತಿಗೆ ಅತ್ಯುತ್ತಮವಾದ ತಂತ್ರ. ಇಲ್ಲಿ ಯಾವ ಮೊತ್ತದ ಪತ್ರಗಳನ್ನು ಸಹ ಖರೀದಿ ಮಾಡಲು ಸಾಧ್ಯವಿದೆ. ಹೂಡಿಕೆ ಮಾಡುವ ಮೂಲಕ ತೆರಿಗೆ ವಿನಾಯಿತಿಯನ್ನು ಪಡೆದುಕೊಳ್ಳಲು ಮುಂದಾಗಿದ್ದರೆ ಇತ್ತ ಧಾವಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+