For Quick Alerts
ALLOW NOTIFICATIONS  
For Daily Alerts

ಪ್ಯಾನ್ ಕಾರ್ಡ್ ಪಡೆಯುವುದಕ್ಕೂ ಮುನ್ನ 7 ಅಂಶ ನೆನಪಲ್ಲಿರಲಿ!

By Mahesh
|

ಆದಾಯ ತೆರಿಗೆ ಪಾವತಿ, ಟಿಡಿಎಸ್/ಟಿಸಿಎಸ್ ಕ್ರೆಡಿಟ್ ಪಡೆಯಲು, ಆದಾಯ ತೆರಿಗೆ ರಿಟರ್ನ್ಸ್ ಪಡೆಯಲು ಮತ್ತಿತರ ಹಣದ ರವಾನೆ ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಅತ್ಯಗತ್ಯವಾಗಿ ಬೇಕಾಗುತ್ತದೆ. ಆದಾಯ ತೆರಿಗೆ ಪಾವತಿ ಮಾಡುವರೆಂತೂ ಕಡ್ಡಾಯವಾಗಿ ಪ್ಯಾನ್ ಕಾರ್ಡ್ ಹೊಂದಿರಬೇಕಾಗುತ್ತದೆ.

ಬ್ಯಾಂಕ್ ಸಾಲ ಪಡೆಯಲು, ಹಣ ಹೂಡಿಕೆ ಮಾಡಲು, ಆಸ್ತಿ ಖರೀದಿ- ಮಾರಾಟ ಹೀಗೆ ಯಾವುದೇ ವಾಣಿಜ್ಯ ಉದ್ದೇಶಿತ ವ್ಯವಹಾರಕ್ಕೆ ಪಾನ್ ಕಾರ್ಡ್ ಬೇಕಾಗುತ್ತದೆ.ಪ್ಯಾನ್ ಕಾರ್ಡ್ ಪಡೆಯಲು 49 ಎ ಅರ್ಜಿಯನ್ನು ಆನ್ ಲೈನ್ ನಲ್ಲಿ ತುಂಬಿ ಸಲ್ಲಿಸಬೇಕಾಗುತ್ತದೆ. ಅದರೆ, ಇದಕ್ಕೂ ಮುನ್ನ ಪ್ಯಾನ್ ಕಾರ್ಡ್ ಪಡೆಯುವವರು ಮುನ್ನ ಗಮನದಲ್ಲಿಟ್ಟುಕೊಳ್ಳಬೇಕಾದ 7 ಅಂಶಗಳು ಇಲ್ಲಿವೆ :

ಪ್ಯಾನ್ ಕಾರ್ಡ್ ಪಡೆಯುವುದಕ್ಕೂ ಮುನ್ನ 7 ಅಂಶ ನೆನಪಲ್ಲಿರಲಿ!


1. ವೈಯಕ್ತಿಕ ಅರ್ಜಿದಾರರರು

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸದ ಮೇಲೆ ಸ್ವೀಕೃತಿ ಪತ್ರಕ್ಕೆ ಸಹಿ ಹಾಕುವುದನ್ನು ಮರೆಯಬೇಡಿ. ಅಪ್ರಾಪ್ತ ವಯಸ್ಕರು/ ಮಾನಸಿಕ ಅಸ್ವಸ್ಥರು/ಅನಾರೋಗ್ಯ ಪೀಡಿತರ ಅರ್ಜಿಯನ್ನು ಅವರ ಪ್ರತಿನಿಧಿಯಾಗಿ ನೇಮಕಗೊಂಡ ಉತ್ತರಾಧಿಕಾರಿಗಳು ಸಹಿ ಹಾಕಬೇಕು.
2. ಹಿಂದೂ ಅವಿಭಕ್ತ ಕುಟುಂಬದಿಂದ ಅರ್ಜಿಯ ಸ್ವೀಕೃತಿ ಪತ್ರಕ್ಕೆ ಕುಟುಂಬದ ಹಿರಿಯರಿಂದ ಸಹಿ ಹಾಕಿಸಬಹುದು. ಸಂಸ್ಥೆ/ ಸಂಘಟನೆ/ಸಮಿತಿಯಿಂದ ಬಂದ ಅರ್ಜಿಯ ವಿಷಯದಲ್ಲಿ ಸಂಸ್ಥೆಯ ಮುಖ್ಯಸ್ಥರಿಂದ ಸಹಿ ಮಾಡಿಸಬಹುದು.
3. ಪ್ಯಾನ್ ಕಾರ್ಡ್ ನಲ್ಲಿ ಬಳಸುವ ಭಾವಚಿತ್ರ ಇತ್ತೀಚಿನದ್ದಾಗಿರಬೇಕು ಹಾಗೂ ಅರ್ಜಿದಾರರ ಮುಖ ಚರ್ಯೆ ಸುಲಭವಾಗಿ ಪತ್ತೆಯಾಗಿರುವಂತಿರಬೇಕು. 3.5 ಸೆಂ. ಮೀ ‌ X 2.5 ಸೆಂ. ಮೀ ಜಾಗದಲ್ಲಿ ವರ್ಣಮಯ ಭಾವಚಿತ್ರ ಅಂಟಿಸಬೇಕು. ಅಪ್ರಾಪ್ತ ವಯಸ್ಕರ ಚಿತ್ರವನ್ನು ಪ್ಯಾನ್ ಕಾರ್ಡ್ ನಲ್ಲಿ ಮುದ್ರಿಸಲಾಗುವುದಿಲ್ಲ. ಹೀಗಾಗಿ ಅರ್ಜಿ ಸ್ವೀಕೃತಿಯಲ್ಲಿ ಯಾವುದೇ ಭಾವಚಿತ್ರ ಅಂಟಿಸಬೇಕಾಗಿಲ್ಲ.

4. ಸಹಿ ಹಾಗೂ ಬೆರಳಚ್ಚು ಮುದ್ರಣ
ಎಡಗೈ ಹೆಬ್ಬೆರಳಚ್ಚು ಮುದ್ರಣ ಹಾಗೂ ಹಸ್ತಾಕ್ಷರವನ್ನು ಸಂಬಂಧಪಟ್ಟ ಜಾಗದಲ್ಲೇ ಹಾಕಬೇಕು. ಭಾವಚಿತ್ರದ ಮೇಲೆ ಸಹಿ ಹಾಕಬಾರದು. ಹೆಬ್ಬೆರಳಚ್ಚು ಮುದ್ರಣಕ್ಕೆ ಮ್ಯಾಜಿಸ್ಟ್ರೇಟ್ ಅಥವಾ ನೋಟರಿ ಅಥವಾ ಗೆಜೆಟೆಡ್ ಅಧಿಕಾರಿಗಳಿಂದ ಅಟೇಸ್ಟ್ ಮಾಡಿ ಸಹಿ, ಸೀಲ್ ಹಾಕಿಸಬೇಕು.5. ಶುಲ್ಕ ಪಾವತಿ
ಭಾರತದಲ್ಲಿ ಪ್ಯಾನ್ ಕಾರ್ಡ್ ಅರ್ಜಿ ಶುಲ್ಕ 106 ರು (93 + ಸೇವಾ ಶುಲ್ಕ) , ವಿದೇಶಕ್ಕೆ ರವಾನಿಸಲು 985 ರು (ಸೇವಾ ಶುಲ್ಕ) . ಶುಲ್ಕ ಪಾವತಿಗೆ ಡಿಮ್ಯಾಂಡ್ ಡ್ರಾಫ್ಟ್, ಚೆಕ್ ಅಥವಾ ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಬಳಸಬಹುದು. ಚೆಕ್ ಹಾಗೂ ಡಿಡಿಯಾದರೆ ಹಿಂಬದಿಯಲ್ಲಿ ಸ್ವೀಕೃತಿ ಪತ್ರದ ಸಂಖ್ಯೆ ಬರೆಯಬೇಕು.

6. ವಿಳಾಸ ಖಾತ್ರಿ
ಹುಟ್ಟಿದ ದಿನಾಂಕ, ವಿಳಾಸದ ಖಾತ್ರಿ ಪುರಾವೆಗಳನ್ನು ನೀಡಬೇಕಾಗುತ್ತದೆ. ಅರ್ಜಿಯ ಕಲಂ 1ರಲ್ಲಿರುವ ಮಾಹಿತಿಯನ್ನು ತುಂಬಿ.

7. ದಾಖಲೆಗಳನ್ನು ಕಳಿಸಿ
ಮೇಲ್ಕಂಡ ದಾಖಲೆ ಹಾಗೂ ಅದಕ್ಕೆ ತಕ್ಕ ಪುರಾವೆಗಳನ್ನು ಅರ್ಜಿ ಸಮೇತ ಕೆಳಕಂಡ ವಿಳಾಸಕ್ಕೆ ಕಳಿಸಿ.
Income Tax PAN Services Unit, NSDL e-Governance Infrastructure Limited, 5th floor, Mantri Sterling, Plot No. 341, Survey No. 997/8, Model Colony, Near Deep Bungalow Chowk, Pune - 411016' (ಗುಡ್ ರಿಟರ್ನ್ಸ್.ಇನ್)

English summary

PAN Card: 7 Things To Know Before Applying For Pan Card

Individuals who are applying for a Permanent account Number (PAN), should fill Form 49A online and submit the form.PAN card is necessary as it can be used as a identification documentation, though the only worry is it does not serve as a address proof. Here are 7 must know things before applying for Pan card.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X