ಷೇರು ಮಾರುಕಟ್ಟೆಯಲ್ಲಿ ವ್ಯವಹಾರದಲ್ಲಿ ನಿರತವಾಗಿರುವವರು ಆಗು ಹೋಗುಗಳ ಬಗ್ಗೆ ಸಮಗ್ರ ತಿಳಿವಳಿಕೆ ಹೊಂದಿದ್ದರೆ ಒಳ್ಳೆಯದು. ವಿಶ್ಲೇಷಣೆ ಎಲ್ಲ ಕಾರಣದಿಂದಲೂ ಉತ್ತಮವೇ. ಮೂಲಭೂತವಾಗಿ ಟೆಕ್ನಿಕಲ್ ಅನಾಲಿಸಿಸ್ ಮತ್ತು ಫಂಡಮೆಂಟಲ್ ಅನಾಲಿಸಿಸ್ ಎಂದು ಕರೆಯಬಹುದು.
ಹೆಸರೇ ಹೇಳುವಂತೆ ಟೆಕ್ನಿಕಲ್ ಅನಾಲಿಸಿಸ್ ಎಂದರೆ ತಾಂತ್ರಿಕ ಅಂಶಗಳು, ಚಾರ್ಟ್ ಗಳ ಆಧಾರದಲ್ಲಿ ತೀರ್ಮಾನಕ್ಕೆ ಬರುವುದೇ ಆಗಿದೆ. ಫಂಡಮೆಂಟಲ್ ಅನಾಲಿಸಿಸ್ ಎಂದರೆ ಹಣಕಾಸಿನ ವ್ಯವಹಾರ, ಇಪಿಎಸ್, ಪುಸ್ತಕಗಳು, ಸಿದ್ಧಾಂತಗಳ ಆಧಾರದಲ್ಲಿ ತೀರ್ಮಾನ ತೆಗೆದುಕೊಳ್ಳುವುದೇ ಆಗಿದೆ.

ಈ ಎರಡು ಅನಾಲಿಸಿಸ್ ಮೇಲೆ ಒಂದು ನೋಟ ಹರಿಸೋಣ
ಟೆಕ್ನಿಕಲ್ ಅನಾಲಿಸಿಸ್[ಡಿಮಾಟ್ ಖಾತೆಗೂ ಮುನ್ನ ಈ 6 ಅಂಶ ತಿಳಿದುಕೊಂಡಿರಬೇಕು]
* ಸಾಮಾನ್ಯವಾಗಿ ಚಾರ್ಟ್ ಮತ್ತು ಉಳಿದ ತಾಂತ್ರಿಕ ಅಂಶಗಳೇ ಇದಕ್ಕೆ ಆಧಾರ
* MACD ಯಂಥ ಕ್ಲಿಷ್ಟಕರ ಚಾರ್ಟ್ ನ್ನು ಇಲ್ಲಿ ಬಳಕೆ ಮಾಡಿಕೊಳ್ಳುತ್ತಾರೆ.
* ಟ್ರೇಡರ್ ಗಳು ಇದನ್ನು ಬಹುವಾಗಿ ನೆಚ್ಚಿಕೊಂಡಿದ್ದಾರೆ.
* ಶಾರ್ಟ್ ಟೈಮ್ ಹಣ ಹೂಡಿಕೆಗೆ ಟೆಕ್ನಿಕಲ್ ಅನಾಲಿಸಿಸ್ ಬಳಕೆ ಮಾಡಿಕೊಳ್ಳುವುದು ಹೆಚ್ಚು.
ಫಂಡಮೆಂಟಲ್ ಅನಾಲಿಸಿಸ್
* ಬ್ಯಾಲೆನ್ಸ್ ಶೀಟ್ ಸೇರಿದಂತೆ ಉಳಿದ ಅಂಕಿಅಂಶಗಳನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
* ಪ್ರಮುಖವಾಗಿ ಇಪಿಎಸ್, ಪಿ/ಇ, ಬುಕ್ ವ್ಯಾಲ್ಯೂ, ಪ್ರೈಸ್ ಗಳನ್ನು ವಿಶ್ಲೇಷಣೆ ಮಾಡಲಾಗುತ್ತದೆ.
* ಲಾಂಗ್ ಟರ್ಮ್ ಬಂಡವಾಳ ಹೂಡಿಕೆದಾರರು ಹೆಚ್ಚಾಗಿ ಬಳಕೆ ಮಾಡಿಕೊಳ್ಳುತ್ತಾರೆ.
* ದೀರ್ಘಾವಧಿ ಹೂಡಿಕೆ ಸಂಬಂಧ ನಿರ್ಧಾರಕ್ಕೆ ಬರಲು ಇದು ನೆರವು ನೀಡುತ್ತದೆ.[ಒಳ್ಳೆ ಸಾಲ-ಕೆಟ್ಟ ಸಾಲ: ನಡುವಿನ ವ್ಯತ್ಯಾಸ ತಿಳ್ಕೊಳ್ಳಿ]
ಟೆಕ್ನಿಕಲ್ ಅನಾಲಿಸಿಸ್ ಷೇರಿನ ಬೆಲೆಯನ್ನು ಆಧಾರವಾಗಿಟ್ಟುಕೊಂಡು ಸಲಹೆ ನೀಡುತ್ತದೆ. ಫಂಡಮೆಂಟಲ್ ಅನಾಲಿಸಿಸ್ ಅಂಕಿ ಅಂಶಗಳನ್ನು ಆಧಾರವಾಗಿಟ್ಟುಕೊಂಡು ವರದಿ ಸಿದ್ಧಮಾಡುತ್ತದೆ.
ಇವೆರಡರಲ್ಲಿ ಯಾವುದು ಉತ್ತಮ?
ದೀರ್ಘಕಾಲಕ್ಕೆ ಹೂಡಿಕೆ ಮಾಡ ಬಯಸುವವರು ಷೇರಿನ ಮೇಲೆ ಅಥವಾ ಮಾರುಕಟ್ಟೆಯ ಮೇಲೆ ಆಗುತ್ತಿರುವ ತಾತ್ಕಾಲಿಕ ಬದಲಾವಣೆಗಳಿಗೆ ಗಮನ ನೀಡುವುದಿಲ್ಲ. ಆದರೆ ಶಾರ್ಟ್ ಟರ್ಮ್ ಹೂಡಿಕೆದಾರರು ಆ ದಿನದ ಬೆಳವಣಿಗೆಯನ್ನು ಮಾತ್ರ ಗಮನದಲ್ಲಿ ಇರಿಸಿಕೊಳ್ಳುತ್ತಾರೆ. ಬ್ಯಾಲೆನ್ಸ್ ಶೀಟ್ ನ್ನು ವಿಶ್ಲೇಷಣೆ ಮಾಡುವ ಸಾಧ್ಯತೆ ಬಹಳ ಕಡಿಮೆ. ಎರಡು ವಿಧನದಲ್ಲಿ ವಿಶ್ಲೇಷಣೆ ಮಾಡಿ ಮುಂದುವರಿದರೆ ನಿಮಗೆ ಮತ್ತಷ್ಟು ಸ್ಪಷ್ಟ ಚಿತ್ರಣ ಸಿಗಲು ಸಾಧ್ಯವಿದೆ.(ಗುಡ್ ರಿಟರ್ನ್ಸ್. ಇನ್)


Click it and Unblock the Notifications