ನಿರ್ದಿಷ್ಟ ದಿನಾಂಕದೊಳಗೆ ನಿಮ್ಮ ಆದಾಯ ಮತ್ತು ತೆರಿಗೆ ವಿವರಗಳನ್ನು ಸಲ್ಲಿಕೆ ಮಾಡಲೇಬೇಕಾಗುತ್ತದೆ. ಮಾರ್ಚ್ 31, 2016 ರೊಳಗೆ ಎಲ್ಲ ವಿವರಗಳನ್ನು ಸಲ್ಲಿಕೆ ಮಾಡಬೇಕಾದದ್ದು ಕಡ್ಡಾಯ.
ತೆರಿಗೆ ಉಳಿತಾಯಕ್ಕೆ ಅನೇಕ ಕ್ರಮಗಳಿವೆ. ಸೆಕ್ಷನ್ 80 ಸಿ ನಿಮಗೆ ತೆರಿಗೆ ಲಾಭವನ್ನು ನೀಡುತ್ತಿದೆ. ಸರ್ಕಾರದ ಯೋಜನೆಗಳು ಸಹ ತೆರಿಗೆ ವಿನಾಯಿತಿ ಲಾಭವನ್ನು ಕಲ್ಪಿಸಿ ಕೊಡುತ್ತಿವೆ.
ಸೆಕ್ಷನ್ 80 ಸಿ ಹೊರತುಪಡಿಸಿ ತೆರಿಗೆ ರಿಯಾಯಿತಿ ಲಾಭ ಪಡೆಯಲು ಸಾಧ್ಯವಿದೆಯೇ? ಹೌದು ಕೆಲವೊಂದು ಸಂಗತಿಗಳು ನಿಮಗೆ ತೆರಿಗೆ ಉಳಿತಾಯದ ಸೌಲಭ್ಯ ನೀಡುತ್ತವೆ. 80 ಸಿ ಹೊರತುಪಡಿಸಿ ತೆರಿಗೆ ಉಳಿತಾಯದ ಲಾಭ ನೀಡುವ 7 ಅವಕಾಶಗಳನ್ನು ನೋಡಿಕೊಂಡು ಬನ್ನಿ....
ಹೊಸ ವಿಮಾ ಯೋಜನೆ(80 ಸಿಸಿಡಿ)
ವಿಮಾ ಯೋಜನೆಯಲ್ಲಿ ಈ ಬಾರಿ ಮಹತ್ತರ ಬದಲಾವಣೆ ಮಾಡಲಾಗಿದೆ. ಇಲ್ಲಿ 50 ಸಾವಿರ ರು.ಗೂ ಅಧಿಕ ಮೊತ್ತ ವಿನಿಯೋಗಿಸಿದರೆ ವಿನಾಯಿತಿ ಪಡೆಯಲು ಸಾಧ್ಯವಿದೆ. ಈಕ್ವಿಟಿ ಮತ್ತು ವಿಮಾ ಯೋಜನೆಗಳಲ್ಲಿ ಹೂಡಿಕೆ ಮಾಡಿ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು.
ರಾಜೀವ್ ಗಾಂಧಿ ಈಕ್ವಿಟಿ ಸೆವಿಂಗ್ಸ್ ಯೋಜನೆ(80 ಸಿಜಿ)
50 ಸಾವಿರ ರು. ಗಳನ್ನು ಅಧಿಕೃತ ಷೇರುಗಳ ಮೇಲೆ ಹೂಡಿಕೆ ಮಾಡಿದರೆ ರಿಯಾಯಿತಿ ಪಡೆದುಕೊಳ್ಳಬಹುದು. ಆದರೆ ಮೊದಲ ಬಾರಿ ಹೂಡಿಕೆ ಮಾಡುತ್ತಿರುವವರಿಗೆ ಮಾತ್ರ ಲಾಭ ದೊರೆಯುತ್ತದೆ.
ಶಿಕ್ಷಣದ ಸಾಲದ ಮೇಲಿನ ಬಡ್ಡಿ(80 ಇ)
ಶಿಕ್ಷಣದ ಸಾಲದ ಮೇಲೆ ತೆರಿಗೆ ವಿನಾಯಿತಿ ಸಿಗಲ್ಲ. ನೀವು ತುಂಬಬೇಕಿರುವ ಬಡ್ಡಿಯನ್ನು ಮಾತ್ರ ಇಲ್ಲಿ ಲೆಕ್ಕ ಹಾಕಲಾಗುತ್ತದೆ. ಇಲ್ಲಿ ಯಾವುದೇ ಲಿಮಿಟ್ ವಿಧಿಸಲಾಗಿಲ್ಲ.
ಮನೆ ಬಾಡಿಗೆ(80 ಸಿಜಿ)
ನೀವು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರೆ ತೆರಿಗೆ ವಿನಾಯಿತಿ ಲಾಭ ಪಡೆದುಕೊಳ್ಳಬಹುದು. ಬಾಡಿಗೆ ತುಂಬಿದ ವಿವರಗಳನ್ನು ನೀಡಬೇಕಾಗುತ್ತದೆ.
ಗೃಹ ಸಾಲ(ಸೆಕ್ಷನ್ 24)
2015-16 ರ ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಗೃಹ ಸಾಲದ ಮೇಲಿನ ಮಿತಿಯನ್ನು ಏರಿಕೆ ಮಾಡಿದ್ದಾರೆ. 1.5 ಲಕ್ಷ ರು. ಇದ್ದ ಮಿತಿಯನ್ನು 2 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇದು ಸಹ ನಿಮಗೆ ತೆರಿಗೆ ವಿನಾಯಿತಿ ನೀಡುತ್ತದೆ.
ಆರೋಗ್ಯ ವಿಮೆ(80ಡಿ)
ಆರೋಗ್ಯ ವಿಮೆ ಮಾಡಿಸುವುದರ ಮೂಲಕ ತೆರಿಗೆ ವಿನಾಯಿತಿ ಅವಕಾಶವಿದೆ. ಹಿರಿಯ ನಾಗರಿಕರಿಗೆ ಮತ್ತು ಸಾಮಾನ್ಯ ನಾಗರಿಕರಿಗೆ ಬೇರೆ ಬೇರೆ ಮಿತಿಯನ್ನು ನಿಗದಿ ಮಾಡಲಾಗಿದೆ.
ದೇಣಿಗೆ(80 ಜಿ)
ಯಾವುದೇ ಎನ್ ಜಿಒ ಅಥವಾ ಸ್ವಯಂ ಸೇವಾ ಸಂಸ್ಥೆಗಳಿಗೆ ದೇಣಿಗೆ ನೀಡಿದರೆ ಅದು ತೆರಿಗೆ ವಿನಾಯಿತಿ ವ್ಯಾಪ್ತಿಗೆ ಒಳಪಡುತ್ತದೆ. ಇಲ್ಲಿ ಸಹ ನೀವು ದಾಖಲೆಗಳನ್ನು ಹಾಜರುಪಡಿಸಬೇಕಾಗುತ್ತದೆ


Click it and Unblock the Notifications