ಎಟಿಎಂ ಬಳಕೆ ಕಡಿಮೆ ಮಾಡುವುದು ಹೇಗೆ?

ಎಟಿಎಂ ಬಳಕೆ ಯಾರಿಗೆ ತಾನೇ ಗೊತ್ತಿಲ್ಲ. ಎಟಿಎಂ ಕಾರ್ಟ್ ಬಳಕೆ ಮೇಲೆ ನಿರ್ಭಂಧ ಹೇರಿ ಹಲವು ತಿಂಗಳುಗಳೆ ಕಳೆದಿವೆ. ನಿಗದಿತ ಸಾರಿಗಿಂತ ಹೆಚ್ಚು ಬಾರಿ ಒಂದು ತಿಂಗಳ ಅವಧಿಯಲ್ಲಿ ಎಟಿಎಂ ಬಳಕೆ ಮಾಡಿದರೆ ನಿರ್ದಿಷ್ಟ ಶುಲ್ಕ ಕಟ್ಟಬೇಕಾಗುತ್ತದೆ. ಬೇರೆ ಬೇರೆ ಬ್ಯಾಂಕ್ ಗಳು ಬೇರೆ ಬೇರೆ ಶುಲ್ಕವನ್ನು ಆಕರಣೆ ಮಾಡುತ್ತವೆ. ನಗರದಿಂದ ನಗರಕ್ಕೂ ಅದು ಬದಲಾವಣೆ ಆಗಬಹುದು.

ಮಹಾನಗರಗಳಲ್ಲಿ ಮೂರು ಸಾರಿ ಎಟಿಎಂ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕಿಂತ ಹೆಚ್ಚಿನ ಸಾರಿ ಬಳಕೆ ಮಾಡಿದರೆ 20 ರು. ಶುಲ್ಕವನ್ನು ನೀಡಬೇಕಾಗುತ್ತದೆ. ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ, ಹೈದ್ರಾಬಾದ್ ಮತ್ತು ಬೆಂಗಳೂರಿನಲ್ಲಿ ಈ ನಿಯಮ ಜಾರಿಯಲ್ಲಿದೆ.[ಎಟಿಎಂ ಮೂಲಕ ಹಣ ಡಿಪಾಸಿಟ್ ಮಾಡೋದು ಹೇಗೆ?]

ಇಂಧೋರ್, ಕಾನ್ಪುರ, ಪುಣೆಯಲ್ಲಿ 5 ಸಾರಿ ತೆಗೆಯಲು ಅವಕಾಶವಿದೆ. ಹಾಗಾದರೆ ಇಂಥ ಅನಗತ್ಯ ಶುಲ್ಕ ತಡೆಯಲು ಏನು ಮಾಡಬಹುದು ಎಂಬುದಕ್ಕೆ ಉತ್ತರ ಇಲ್ಲಿದೆ. ಕೆಲವೊಮ್ಮೆ ಸ್ಟೇಟ್ ಮೆಂಟ್, ಬ್ಯಾಲೆನ್ಸ್ ಚೆಕ್ ಅನ್ನು ಸಹ ಟ್ರಾನ್ಸಾಕ್ಷನ್ ಎಂದೇ ಪರಿಗಣಿಸಲಾಗುತ್ತದೆ.[ಆದಾಯ ತೆರಿಗೆ ರಿಫಂಡ್ ಚೆಕ್ ಹಿಂದಕ್ಕೆ ಪಡೆಯುವುದು ಹೇಗೆ?]

ಹೆಚ್ಚಿನ ಮೊತ್ತ ಡ್ರಾ ಮಾಡಿ

ಹೆಚ್ಚಿನ ಮೊತ್ತ ಡ್ರಾ ಮಾಡಿ

ನಿಮ್ಮ ತಿಂಗಳ ಖರ್ಚು ನಿಮಗೆ ಗೊತ್ತಿರುತ್ತದೆ. ಹಾಗಾಗಿ ಡ್ರಾ ಮಾಡುವ ಮುನ್ನ ಒಮ್ಮೆ ಯೋಚಿಸಿ ಕೊಂಚ ಅಧಿಕ ಮೊತ್ತವನ್ನೇ ಪಡೆದುಕೊಳ್ಳುವುದು ಉತ್ತಮ. ಕಡಿಮೆ ಮೊತ್ತ ಡ್ರಾ ಮಾಡಿದರೆ ಮತ್ತೆ ಎಟಿಎಂಗೆ ತೆರಳುವ ಅನಿವಾರ್ಯತೆಗೆ ಸಕ್ಕಿಹಾಕಿಕೊಳ್ಳಬೇಕಾಗುತ್ತದೆ.

ಇಂಟರ್ ನೆಟ್ ಬ್ಯಾಂಕಿಂಗ್ ಬಳಕೆಮಾಡಿ

ಇಂಟರ್ ನೆಟ್ ಬ್ಯಾಂಕಿಂಗ್ ಬಳಕೆಮಾಡಿ

ಎಲ್ಲದಕ್ಕಿಂತ ಉತ್ತಮ ಎಂದರೆ ಇಂಟರ್ ನೆಟ್ ಬ್ಯಾಂಕಿಂಗ್ ಬಳಕೆ. ಬಳಕೆ ಮಾಡಿದ ನಂತರ ಒಂದು ಪ್ರಿಂಟ್ ಔಟ್ ಪಡೆದುಕೊಳ್ಳಿ. ಇಲ್ಲಿ ವಿನಂತಿಗಳನ್ನು ಸಲ್ಲಿಕೆ ಮಾಡಿದರೆ ನಿಮಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.

ಇತರೆ ಬ್ಯಾಂಕ್ ಎಟಿಎಂ ಬಳಕೆ ಬೇಡ

ಇತರೆ ಬ್ಯಾಂಕ್ ಎಟಿಎಂ ಬಳಕೆ ಬೇಡ

ಇತರೆ ಬ್ಯಾಂಕ್ ಗಳ ಎಟಿಎಂ ಯಂತ್ರ ಅನಿವಾರ್ಯ ಎಂದಾದಲ್ಲಿ ಮಾತ್ರ ಬಳಕೆ ಮಾಡಿ. ನಿಮ್ಮ ಹತ್ತಿರದಲ್ಲಿ ಇರುವ ನಿಮ್ಮದೇ ಬ್ಯಾಂಕ್ ನ ಎಟಿಎಂ ಬಳಸುವುದು ಎಲ್ಲ ಬಗೆಯಿಂದಲೂ ಉತ್ತಮ.

ನಗದು ವ್ಯವಹಾರ ನಿಲ್ಲಿಸಿ

ನಗದು ವ್ಯವಹಾರ ನಿಲ್ಲಿಸಿ

ಎಲ್ಲ ಸಾರಿಯೂ ನಗದು ವ್ಯವಹಾರಗಳನ್ನು ಬಳಕೆ ಮಾಡುವುದನ್ನು ಬಂದ್ ಮಾಡಿ. ಶಾಪಿಂಗ್ ಮತ್ತಿತರ ಸಂದರ್ಭ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಬಳಕೆ ಮಾಡುವುದನ್ನು ರೂಢಿಸಿಕೊಳ್ಳಿ(ಗುಡ್ ರಿಟರ್ನ್ಸ್. ಇನ್)

{promotion-urls}

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+