ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಗಾದೆಯನ್ನು ಇಂದು ಕೊಂಚ ಬದಲಾವಣೆ ಮಾಡಿಕೊಳ್ಳಬಹುದು. ಸಾಲ ಮಾಡದೇ ಮನೆ ಕಟ್ಟಲು ಸಾಧ್ಯವಿಲ್ಲ ಎಂದೂ ಸೇರಿಸಿಕೊಳ್ಳಬಹುದು. ಅದಕ್ಕಾಗಿಯೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಬಗೆಯ ಗೃಹ ಸಾಲವನ್ನು 'ಎಸ್ ಬಿಐ ಫ್ಲೆಕ್ಸಿ ಪೇ' ಹೋಮ್ ಲೋನ್ ಹೆಸರಿನಲ್ಲಿ ಕೊಡಮಾಡುತ್ತಿದೆ.
ಯುವಕರನ್ನು ಗಮನದಲ್ಲಿ ಇಟ್ಟುಕೊಂಡು ಈ ಯೋಜನೆ ರೂಪಿಸಲಾಗಿದ್ದು ಅತಿ ಹೆಚ್ಚು ಮೊತ್ತದ ಸಾಲ ಪಡೆದುಕೊಳ್ಳಬಹುದಾಗಿದೆ. ಖಾಸಗಿ ಮತ್ತು ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಈ ಸಾಲ ಲಾಭದಾಯಕ ಎಂಬುದರಲ್ಲಿ ಅನುಮಾನವಿಲ್ಲ.[2016ರ ಷೇರು ಮಾರುಕಟ್ಟೆ ರಜಾ ದಿನಗಳ ಪಟ್ಟಿ]

ಈ ಯೋಜನೆ ಅಡಿ ಇಎಂಐ ತುಂಬುವ ಬದಲು ವೇತನ ತೆಗೆದುಕೊಳ್ಳುವ ವ್ಯಕ್ತಿ ಕೇವಲ ಬಡ್ಡಿ ಮಾತ್ರ ತುಂಬಿದರೆ ಸಾಕಾಗುತ್ತದೆ. ನಿರ್ದಿಷ್ಟ ಅವಧಿಯ ನಂತರ ಇಎಂಐ ತುಂಬಲು ಆರಂಭ ಮಾಡಬೇಕಾಗುತ್ತದೆ.
'ಎಸ್ ಬಿಐ ಫ್ಲೆಕ್ಸಿ ಪೇ' ಹೋಮ್ ಲೋನ್ ನ ಪ್ರಮುಖ ಅಂಶಗಳು
* ಉಳಿದ ಗೃಹ ಸಾಲಕ್ಕೆ ಹೋಲಿಕೆ ಮಾಡಿದರೆ ಇಲ್ಲಿ ಹೆಚ್ಚಿನ ಪ್ರಮಾಣದ ಸಾಲ ದೊರೆಯುತ್ತದೆ. ಕೆಲಸ ಮಾಡುತ್ತಿರುವವರಿಗೆ ಸುಲಭವಾಗಿ ಸಾಲ ನೀಡಲಾಗುತ್ತಿದ್ದು ಕಡ್ಡಾಯವಾಗಿ 20 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ಪಡೆದುಕೊಳ್ಳಬೇಕಾಗುತ್ತದೆ.[ಅತಿ ಹೆಚ್ಚು ಗೃಹ ಸಾಲ ಪಡೆಯಲು ಏನು ಮಾಡಬೇಕು?]
* ವೇತನ ತೆಗೆದುಕೊಳ್ಳುತ್ತಿರುವ ವ್ಯಕ್ತಿ 21-45 ವರ್ಷದ ಒಳಗೆ ಇದ್ದರೆ ಸುಲಭವಾಗಿ ಸಾಲ ಪಡೆದುಕೊಳ್ಳಬಹುದು.
* ಸಾಲದ ಮೊತ್ತದ ಆಧಾರದಲ್ಲಿ ಮೊದಲು ಕೆಲ ಕಾಲ ಕೇವಲ ಬಡ್ಡಿ ಮಾತ್ರ ಕಟ್ಟಿದರೆ ಸಾಕಾಗುತ್ತದೆ. ನಂತರ ಇ ಎಂಐ ಮೊತ್ತವನ್ನು ಅಂತಿಮ ಮಾಡಲಾಗುತ್ತದೆ.
* ನೀವು 36 ರಿಂದ 60 ತಿಂಗಳ ಕಾಲಾವಕಾಶವನ್ನು ಪಡೆದುಕೊಳ್ಳಬಹುದಾಗಿದೆ,
* 25 ರಿಂದ 30 ವರ್ಷದ ದೀರ್ಘಾವಧಿ ಸಾಲ ನೀಡಿಕೆಗೂ ಇಲ್ಲಿ ಅವಕಾಶವಿದೆ.
ಕೊನೆ ಮಾತು
ವ್ಯಕ್ತಿ ತನ್ನ ತಿಂಗಳ ಆದಾಯಕ್ಕಿಂತ ಸುಮಾರು ಶೇ. 60 ಪಟ್ಟು ಜಾಸ್ತಿ ಸಾಲವನ್ನು ಪಡೆದುಕೊಳ್ಳಲು ಇಲ್ಲಿ ಸಾಧ್ಯವಾಗುತ್ತದೆ. ನಿಮ್ಮ ವೇತನದಲ್ಲಿಯೇ ಇಎಂಐ ಮೊತ್ತವನ್ನು ಕಡಿತ ಮಾಡಿಕೊಳ್ಳಲಾಗುತ್ತದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.(ಗುಡ್ ರಿಟರ್ನ್ಸ್. ಇನ್)


Click it and Unblock the Notifications