ಯುನಿವರ್ಸಲ್ ಅಕೌಂಟ್ ನಂಬರ್ ಮತ್ತು ಎಂಪ್ಲಾಯ್ ಪ್ರಾವಿಡೆಂಟ್ ಫಂಡ್ ಗೂ ನಿಕಟ ಸಂಬಂಧವಿದೆ. ನಿಮ್ಮ ಬಳಿ ಯುಎಎನ್ ನಂಬರ್ ಇದ್ದರೆ ಪಿಪಿಎಫ್ ಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಸುಲಭವಾಗಿ ತಿಳಿದುಕೊಳ್ಳಬಹುದು.
ಈ ಬಗೆಗಿನ ನೀತಿಯನ್ನು ಮತ್ತಷ್ಟು ಸರಳ ಮಾಡಿರುವ ಕೇಂದ್ರ ಸರ್ಕಾರ ಪಿಎಫ್ ಆಕ್ಟ್ ಮೂಲಕ ಎಲ್ಲ ಮಾಹಿತಿಯನ್ನು ನಿಮ್ಮ ಎದುರೆ ಹಾಜರುಪಡಿಸುತ್ತಿದೆ. ನಿಮ್ಮ ಯುನಿವರ್ಸಲ್ ಅಕೌಂಟ್ ನಂಬರ್ ಅನ್ನು ಇಂದೇ ತಿಳಿದುಕೊಳ್ಳಿ.[ಪಿಪಿಎಫ್ ಆಧಾರದಲ್ಲಿ ಸಾಲ ಪಡೆದುಕೊಳ್ಳುವುದು ಹೇಗೆ?]

ನೀವು ಯು ಎಎನ್ ನಂಬರ್ ಹೊಂದಿದ್ದರೆ ಇಪಿಎಫ್ ಬ್ಯಾಲೆನ್ಸ್ ನ್ನು ಅಂಗೈನಲ್ಲೇ ಪರಿಶೀಲನೆ ಮಾಡಬಹುದು. ಹಾಗಾದರೆ ಇಪಿಎಫ್ ಬ್ಯಾಲೆನ್ಸ್ ಪರಿಶೀಲನೆ ಮಾಡುವುದು ಹೇಗೆ ಎಂಬುದನ್ನು ನೋಡಿಕೊಂಡು ಬರೋಣ...
ಮೊದಲಿಗೆ http://uanmembers.epfoservices.in/ ತಾಣಕ್ಕೆ ಭೇಟಿ ನೀಡಬೇಕು. ವಿಂಡೋದ ಬಲಬದಿಗೆ ಲಾಗ್ ಇನ್ ಆಯ್ಕೆ ನಿಮಗೆ ಸಿಗುತ್ತದೆ. ಅದರ ಕೆಳಗೆ ಆಕ್ಟಿವ್ ಯುವರ್ ಯು ಎಎನ್ ಎಂಬ ಆಯ್ಕೆಯೂ ಸಿಗುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ಕೆಲ ಸಂದೇಶಗಳು ಬರುತ್ತವೆ. ಅವುಗಳಿಗೆ ನೀಚು ಒಕೆ ನೀಡಬೇಕಾಗುತ್ತದ
ಇದಾದ ಮೇಲೆ ಕೆಲ ಮಾಹಿತಿಯನ್ನು ನೀವು ನೀಡಬೇಕಾಗುತ್ತದೆ
* ಮೊದಲಿಗೆ ಯುನಿವರ್ಸಲ್ ಅಕವಂಟ್ ನಂಬರ್ ಅಥವಾ ಯು ಎಎನ್ ಅನ್ನು ದಾಖಲು ಮಾಡಬೇಕಾಗುತ್ತದೆ.
* ನಿಮ್ಮ ಮೊಬೈಲ್ ಸಂಖ್ಯೆ ದಾಖಲು ಮಾಡಿ
*ನಿಮ್ಮ ರಾಜ್ಯ ಮತ್ತು ಕಚೇರಿಯನ್ನು ಆಯ್ಕೆ ಮಾಡಿ
* ನಿಮ್ಮ ಕಂಪನಿ ನೀಡಿರುವ ಕಂಪನಿ ಕೋಡ್ ನಮೂದಿಸಿ
* ನಂತರ ವಿಂಡೋ ತಿಳಿಸಿದ ಸೆಕ್ಯೂರಿಟಿ ಅಕ್ಷರಗಳನ್ನು ನಿರ್ದಿಷ್ಟ ಬಾಕ್ಸ್ ನಲ್ಲಿ ಬರೆಯಿರಿ[ಪಿಪಿಎಫ್ ಆಧಾರದಲ್ಲಿ ಸಾಲ ಪಡೆದುಕೊಳ್ಳುವುದು ಹೇಗೆ?]
ಇದಾದ ಮೇಲೆ ನಿಮ್ಮ ಮೊಬೈಲ್ ಗೆ ಪಿನ್ ವೊಂದನ್ನು ಕಳಿಸಿ ಕೊಡಲಾಗುತ್ತದೆ. ನಂತರ ಹೊಸ ಪಾಸ್ ವರ್ಡ್ ಮತ್ತು ಯು ಎಎನ್ ನಂಬರ್ ಬಳಸಿಕೊಂಡು ಲಾಗ್ ಇನ್ ಆಗಬೆಕು. ನಿಮ್ಮ ಯು ಎಎನ್ ಕಾರ್ಡ್ ಡೌನ್ ಲೋಡ್ ಸಹ ಮಾಡಿಕೊಳ್ಳಬಹುದು. ಅಲ್ಲದೇ ಇ ಪಾಸ್ ಬುಕ್ ಅನ್ನು ಸಹ ವೀಕ್ಷಣೆ ಮಾಡಬಹುದು.
ಕೊನೆ ಮಾತು:
ನಿಮ್ಮ ಯುಎನ್ ಜತೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳುವುದು ಅಗತ್ಯ. 21 ದಿನಗಳ ಒಳಗಾಗಿ ಹಣ ರವಾನೆಗೂ ಇಲಾಖೆ ಅವಕಾಶ ಮಾಡಿಕೊಡುತ್ತಿದೆ. ಇಪಿಎಫ್ ಗೆ ಸಂಬಂಧಿಸಿದ ಶೇ. 79 ಹಣ ರವಾನೆ ಕೇವಲ ಹತ್ತು ದಿನಗಳಲ್ಲಿ ನಡೆದಿದೆ ಎಂದು ಇಲಾಖೆ ಮಾಹಿತಿ ನೀಡಿದೆ.


Click it and Unblock the Notifications