ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂದು ಗಾದೆಯೇ ಇದೆ. ಹೌದು ಸುಂದರ ಮನೆ ಪ್ರತಿಯೊಬ್ಬರ ಜೀವನದ ಕನಸು. ಕೆಲವೊಮ್ಮೆ ಅನಿವಾರ್ಯಕ್ಕೆ ಸಿಕ್ಕಿ ಸಾಲ ಮಾಡಿ ಮನೆ ಕಟ್ಟಿರುತ್ತವೆ.
ಹಣ ಮರುಪಾವತಿ ಕಂತು ಬಂದಾಗಲೆ ನಮ್ಮ ಜವಾಬ್ದಾರಿಯ ಅರಿವಾಗುವುದು. ಸಾಲ ಪಡೆಯುವಾಗಲೇ ಶೇ. 15-20 ರಷ್ಟನ್ನು ಡೌನ್ ಪೇಮೆಂಟ್ ಆಗಿ ತುಂಬಬೇಕಾಗುತ್ತದೆ.[ಮನೆ ಕಟ್ತಾ ಇದೀರಾ? ಈ ಗೃಹಸಾಲವೇ ನಿಮಗೆ ಬೆಸ್ಟ್]
ನಿಮಗೆ ನಿರ್ದಿಷ್ಟ ಮೂಲದಿಂದ ನಿಖರ ಆದಾಯ ಇಲ್ಲ ಎಂಬ ಪರಿಸ್ಥಿತಿ ಇದ್ದರೆ ಸಾಲ ಮಾಡಲು ಸ್ವಲ್ಪ ಯೊಚನೆ ಮಾಡಬೇಕಾಗುತ್ತದೆ. ಸಾಲವನ್ನು ಯಾವ ಆಧಾರದಲ್ಲಿ ಪಡೆದುಕೊಳ್ಳುತ್ತಿದ್ದೇವೆ ಎಂಬುದು ಅಷ್ಟೆ ಮುಖ್ಯವಾಗುತ್ತದೆ.
ನೀವು ಸ್ವಂತ ಮನೆಯನ್ನು ಹೊಂದಬೇಕು ಎಂದಿದ್ದರೆ ಇಂದಿನಿಂದಲೇ ಉಳಿತಾಯ ರೂಢಿಸಿಕೊಳ್ಳಿ. ಡೌನ್ ಪೇಮೆಂಟ್ ಕಡಿಮೆ ನೀಡಲು ನಮ್ಮ ಬಳಿ ಕೆಲ ಉಪಾಯಗಳಿವೆ. ಉಪಾಯಗಳನ್ನು ಮುಂದೆ ನೋಡಿಕೊಂಡು ಬನ್ನಿ...(ಗುಡ್ ರಿಟರ್ನ್ಸ್.ಇನ್)
ವ್ಯವಸ್ಥಿತ ಹೂಡಿಕೆ
ವ್ಯವಸ್ಥಿತ ಹೂಡಿಕೆಯನ್ನು ನೀವು ಅಳವಡಿಸಿಕೊಂಡಿದ್ದರೆ ಯಾವ ಸಂದರ್ಭದಲ್ಲೂ ಸಮಸ್ಯೆಗೆ ಸಿಕ್ಕಿ ಹಾಕಿಕೊಳ್ಳುವುದಿಲ್ಲ. ಮ್ಯೂಚುವಲ್ ಫಂಡ್, ಷೇರು, ಇಟಿಎಫ್, ಚಿನ್ನ ಇವುಗಳ ಮೇಲೆ ಹೂಡಿಕೆ ಮಾಡಿಕೊಂಡಿದ್ದರೆ ಆ ಹಣವನ್ನು ಬೇಕಾದಾಗ ಸುಲಭವಾಗಿ ಬಳಸಿಕೊಳ್ಳಬಹುದು,.
ತಿಂಗಳ ಖರ್ಚು
ತಿಂಗಳ ಖರ್ಚಿನ ಲೆಕ್ಕವನ್ನು ಸರಿಯಾಗಿ ಇಡಿ. ಅನವಶ್ಯಕ ಖರ್ಚುಗಳಿಗೆ ಇಂದಿನಿಂದಲೇ ಕಡಿವಾಣ ಹಾಕಿ. ಕೊಳ್ಳುಬಾಕತನದಿಂದ ದೂರವಿರಿ.
ಬಜೆಟ್ ನಿರ್ವಹಣೆ
ತಿಂಗಳ ಆರಂಭದಲ್ಲಿಯೇ ಬಜೆಟ್ ವೊಂದನ್ನು ಹಾಕಿಕೊಂಡು ಅದಕ್ಕೆ ಅನುಗುಣವಾಗಿ ವೆಚ್ಚ ಮಾಡುವುದನ್ನು ರೂಢಿಸಿಕೊಳ್ಳಿ. ಅನಗತ್ಯ ಖರ್ಚುಗಳಿಗೆ ಆಗ ತನ್ನಿಂದ ತಾನೇ ಕಡಿವಾಣ ಬೀಳುತ್ತದೆ.
ಅಂಚೆ ಕಚೇರಿಯಿದೆ
ನಿಮಗೆ ನಿಯಮಿತವಾಗಿ ಹಣ ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದೆನಿಸಿದಲ್ಲಿ ರಿಕರಿಂಗ್ ಡಿಪಾಸಿಟ್ ಮೊರೆ ಹೋಗುವುದು ಒಳಿತು. ಅನಿವಾಋ್ಯವಾಗಿ ನೀವು ಹಣ ತುಂಬಲೇ ಬೇಕಾಗುತ್ ತದೆ.
ಸ್ಮಾಲ್ ಮತ್ತು ಮಿಡ್ ಕ್ಯಾಪ್
ಸೆನ್ಸೆಕ್ಸ್ ಮತ್ತು ನಿಫ್ಟಿಯ ಉತ್ತಮ ಷೇರುಗಳನ್ನು ಆಯ್ಕೆ ಮಾಡಿಕೊಳ್ಳಿ. ಅವುಗಳ ಮೇಲೆ ವ್ಯವಸ್ಥಿತವಾದ ಹೂಡಿಕೆಯೂ ನಿಮಗೆ ಲಾಭ ತಂದುಕೊಡಬಲ್ಲದು
ಇನ್ನುಳಿದ ಸಂಗತಿಗಳು
ಸಿಗುವ ಬೋನಸ್ ಹಣವನ್ನು ವ್ಯರ್ಥವಾಗಿ ಖರ್ಚು ಮಾಡಬೇಡಿ. ನಿಮ್ಮ ಬಳಿ ಹೆಚ್ಚುವರಿ ಆಸ್ತಿ ಇದ್ದರೆ ಮೊದಲು ಅದನ್ನು ಮಾರಾಟ ಮಾಡಿ ಹಣ ಹೊಂದಿಸಿಕೊಳ್ಳುವುದು ಉತ್ತಮ.


Click it and Unblock the Notifications