For Quick Alerts
ALLOW NOTIFICATIONS  
For Daily Alerts

ಕಾಲೇಜು ವಿದ್ಯಾರ್ಥಿ ಕ್ರೆಡಿಟ್ ಕಾರ್ಡ್ ಪಡೆಯಲು ಸಾಧ್ಯವೆ?

|

ಹೌದು.. ಬಹಳಷ್ಟು ಬ್ಯಾಂಕ್ ಗಳು ಕಾಲೇಜಿನ ವಿದ್ಯಾರ್ಥಿಗಳಿಗೂ ಸಹ ಕ್ರೆಡಿಟ್ ಕಾರ್ಡ್ ಕೊಡಮಾಡುತ್ತಿವೆ. 18 ವರ್ಷ ತುಂಬಿದ ವಿದ್ಯಾರ್ಥಿಗಳು ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಸಾಧ್ಯವಿದೆ.

 

ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಕಾರ್ಡ್ ಬಳಕೆ ಮಾಡಿಕೊಳ್ಳಬಹುದಾದರೂ ಕೆಲವೊಂದು ನಿಯಮಗಳನ್ನು ಹೇರಿಕೆ ಮಾಡಿರಲಾಗುತ್ತದೆ.[ಕ್ರೆಡಿಟ್ ಕಾರ್ಡ್ ಇದ್ದರೆ ಸಿಗುವ 6 ಲಾಭಗಳು ಯಾವವು?]

 
ಕಾಲೇಜು ವಿದ್ಯಾರ್ಥಿ ಕ್ರೆಡಿಟ್ ಕಾರ್ಡ್ ಪಡೆಯಲು ಸಾಧ್ಯವೆ?

ಮಾರುಕಟ್ಟೆ ಅಥವಾ ಬ್ಯಾಂಕ್ ಗಳು ಕೊಡಮಾಡುವ ಕ್ರೆಡಿಟ್ ಕಾರ್ಡ್ ಗಳಲ್ಲಿ ಹಲವಾರು ಬಗೆಯಿಯಿದ್ದು ಅವುಗಳ ಮೇಲೆ ಒಂದು ನೋಟ ಹರಿಸುವುದು ಅಗತ್ಯ, . ಹಾಂ ...ನೆನಪಿರಲಿ ಇದು ವಿದ್ಯಾರ್ಥಿಗಳ ಲೆಕ್ಕದಲ್ಲಿ ಮಾತ್ರ...

ವಿದ್ಯಾರ್ಥಿ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳುವುದು ಹೇಗೆ?

1. ಫಿಕ್ಸೆಡ್ ಡಿಪಾಸಿಟ್ ಆಧಾರದಲ್ಲಿ
ಒಂದು ನಿರ್ದಿಷ್ಟ ಮೊತ್ತದ ಫಿಕ್ಸೆಡ್ ಡಿಫಾಸಿಟ್ ಅನ್ನು ವಿದ್ಯಾರ್ಥಿ ಬ್ಯಾಂಕ್ ನಲ್ಲಿ ಇಟ್ಟರೆ ಅದರ ಆಧಾರದಲ್ಲಿ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಕಾರ್ಡ್ ಲಿಮಿಟ್ ಸಹ ಇದೇ ಆಧಾರದಲ್ಲಿ ನಿರ್ಧರಿತವಾಗುತ್ತದೆ.[ಹಣ ಪಾವತಿಗೆ ನಿಮ್ಮ ಆಯ್ಕೆ ಯಾವುದು? ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್]

2. ಆಡ್ ಆನ್ ಕಾರ್ಡ್
ಕ್ರೆಡಿಟ್ ಕಾರ್ಡ್ ಹೊಂದಿರುವ ವ್ಯಕ್ತಿಗಳು ಅಂದರೆ ವಿದ್ಯಾರ್ಥಿಗಳ ಪಾಲಕರು ತಮ್ಮ ಕಾರ್ಡ್ ಜತೆ ಮಗ ಅಥವಾ ಮಗಳ ಹೆಸರನ್ನು ಸೇರಿಸಿಕೊಂಡು ಆಡ್ ಆನ್ ಮಾದರಿಯಲ್ಲಿ ಕಾರ್ಡ್ ನೀಡಿಕೆ ಮಾಡಲು ಸಾಧ್ಯವಿದೆ.

3. ಉಳಿತಾಯ ಖಾತೆ
ವಿದ್ಯಾರ್ಥಿಯದ್ದು ಉಳಿತಾಯ ಖಾತೆ ಇದ್ದು ಉತ್ತಮ ಇತಿಹಾಸ ಹೊಂದಿದ್ದರೆ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಸಾಧ್ಯವಿದೆ.

ವಿದ್ಯಾರ್ಥಿ ಯಾವ ಯಾವ ದಾಖಲೆ ಸಲ್ಲಿಕೆ ಮಾಡಬೇಕು?
* ಜನ್ಮದಾಖಲೆ
* ವಿಳಾಸ ದೃಢೀಕರಣ
* ಕಾಲೇಜಿನಿಂದ ನೀಡಿರುವ ಗುರುತಿನ ಪತ್ರ
* ಎರಡು ಭಾವಚಿತ್ರ

ವಿದ್ಯಾರ್ಥಿ ಕ್ರೆಡಿಟ್ ಕಾರ್ಡ್ ನ ಗುಣ ಲಕ್ಷಣಗಳೇನು?
* ಯಾವುದೇ ಶುಲ್ಕವಿಲ್ಲ
* ತಿಂಗಳ ಕ್ರೆಡಿಟ್ ಲಿಮಿಟ್ ಕಡಿಮೆ

* ಸಾಮಾನ್ಯ ದಾಖಲೆಗಳು
* ಕ್ರೆಡಿಟ್ ಹಿಸ್ಟರಿ ಲೆಕ್ಕಕ್ಕೆ ಬರದು
* ಕಡಿಮೆ ಬಡ್ಡಿ ದರ

ಕೊನೆಮಾತು: ಪಾಲಕರಿಂದ ದೂರ ಇರುವ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಅನುಕೂಲವಾಗುವುದರಲ್ಲಿ ಅನುಮಾನವಿಲ್ಲ, ಕ್ರೆಡಿಟ್ ಕಾರ್ಡ್ ನ್ನು ಮಿತಿಯಲ್ಲಿ ಜಾಣ್ಮೆಯಿಂದ ಬಳಸಿಕೊಳ್ಳಬೇಕಾಗುತ್ತದೆ.(ಗುಡ್ ರಿಟರ್ನ್ಸ್.ಇನ್)

English summary

Can A College Student Get A Credit Card In India?

Yes, there are many banks which provide a credit card to students to meet their needs during their college life. These cards are provided to students who are above the age of 18 and pursuing their graduation or post graduation. As credit cards allow students to spend way beyond their limits, but it will help them to plan and manage their card smartly. However, one can set a maximum limit usage on the card. There are different types of credit card available in the market based on the eligibility and requirement.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X