ನವದೆಹಲಿ, ಮೇ 31: ವಿತ್ತ ಸಚಿವ ಅರುಣ್ ಜೇಟ್ಲಿ ಅವರು 2016-17ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಮಧ್ಯಮ ವರ್ಗದ ಮೇಲೆ ಮತ್ತಷ್ಟು ಹೊರೆ ಹಾಕಿದ್ದಾರೆ. ಜೂನ್ 1 ರಿಂದ ಅನ್ವಯವಾಗುವಂತೆ ಸೇವಾ ತೆರಿಗೆ ಏರಿಕೆಯಾಗಲಿದೆ. ಜೊತೆಗೆ ಬಾಲಂಗೋಚಿಯಂತೆ ಹಲವು ಸೆಸ್ ಗಳು ಬೆಲೆ ಏರಿಕೆ ಗಾಳಿಪಟವನ್ನು ಇನ್ನಷ್ಟು ಎತ್ತರಕ್ಕೆ ಹಾರಿಸಲಿದೆ.
ಏ.1, 2016ರಿಂದ ಅನ್ವಯವಾಗುವಂತೆ ಮೋದಿ ಸರ್ಕಾರ ಹೊಸ ಸರಕು ಹಾಗೂ ಸೇವಾ ತೆರಿಗೆ (ಜಿಎಸ್ ಟಿ) ಅನುಷ್ಠಾನಗೊಳಿಸಿದೆ. ಹಾಲಿ ಸೇವಾ ತೆರಿಗೆ ದರ ಶೇ 12ರಷ್ಟಿತ್ತು. ಜಿಎಸ್ ಟಿ ಅನುಷ್ಠಾನಗೊಂಡ ನಂತರ ಸೇವಾ ತೆರಿಗೆ ಶೇ 14.5ಕ್ಕೆ ಏರಿಕೆಯಾಗಿದೆ. ಜೊತೆಗೆ 120ಕ್ಕೂ ಅಧಿಕ ಸೇವೆಗಳ ಮೇಲೆ ಕೃಷಿ ಕಲ್ಯಾಣ ಹಾಗೂ ಸ್ವಚ್ಛ ಭಾರತ ಸೆಸ್ ಹಾಕಲಾಗುತ್ತಿದೆ.
ಗ್ರಾಹಕರ ಹಿತದೃಷ್ಟಿಯಿಂದ ಕಾಲಕಾಲಕ್ಕೆ ಸೇವಾ ತೆರಿಗೆ ದರ ಪರಿಷ್ಕರಣೆ ಮಾಡಲು ಸರ್ಕಾರ ಮುಂದಾಗಬಹುದು ಎಂಬ ನಿರೀಕ್ಷೆ ಇತ್ತು. ಸದ್ಯಕ್ಕಂತೂ ಗ್ರಾಹಕರು ಬೆಲೆ ಏರಿಕೆ ಅನುಭವಿಸಬೇಕು. ಯಾವ ಯಾವ ಸೇವೆಗಳ ಮೇಲೆ ತೆರಿಗೆ ಹೆಚ್ಚಳ ಮುಂದೆ ನೋಡಿ
ಮೊಬೈಲ್ ಬಿಲ್ ಬೆಲೆ ಏರಿಕೆ
ಪ್ರತಿ ತಿಂಗಳ ಮೊಬೈಲ್ ಬಿಲ್ ಗೆ ಹೊಸದಾಗಿ ಸೇವಾ ತೆರಿಗೆ ಸೇರ್ಪಡೆಯಾಗಲಿದ್ದು, ಶೇ 14ರಷ್ಟು ಬಿಲ್ ಮೊತ್ತ ಹೆಚ್ಚಳವಾಗಲಿದೆ. ಇದರ ಜೊತೆಗೆ ಶೇ 0.5ರಷ್ಟು ಸ್ವಚ್ಛ ಭಾರತ ಸೆಸ್ ಹಾಗೂ ಶೇ 0.5ರಷ್ಟು ಕೃಷಿ ಕಲ್ಯಾಣ ಸೆಸ್ ಎಲ್ಲವೂ ಸೇರಿ ಶೇ 15ರಷ್ಟು ಸೇವಾ ತೆರಿಗೆ ಹೆಚ್ಚಳವಾಗಲಿದೆ, ಬಿಲ್ ಮೊತ್ತ ಹೆಚ್ಚಾದಂತೆ ತೆರಿಗೆ ಮೊತ್ತವೂ ಏರಲಿದೆ. ರೇಟ್ ಪ್ಲ್ಯಾನ್ ಬದಲಾಯಿಸಿಕೊಳ್ಳಲು ಇದು ಸಕಾಲ.
ಹೋಟೆಲ್ ಊಟ, ತಿಂಡಿ ದುಬಾರಿ
ಜೂ.1ರಿಂದ ಸೇವಾ ತೆರಿಗೆ ಶೇ 12.36 ರಿಂದ ಶೇ 14.5ಕ್ಕೆ ಏರಿಕೆಯಾಗಲಿದೆ. ಹೋಟೆಲ್ ಬಿಲ್ ದುಬಾರಿಯಾಗಲಿದೆ. ಇದು ಎಲ್ಲಾ ಸಣ್ಣ ಪುಟ್ಟ ಹೋಟೆಲ್, ದರ್ಶಿನಿ, ರೆಸ್ಟೋರೆಂಟ್, ಪಂಚತಾರಾ ಹೋಟೆಲ್ ಗಳಿಗೂ ಅನ್ವಯವಾಗಲಿದೆ. ಈಗಾಗಲೇ ಸೇವಾ ತೆರಿಗೆ ಜಾರಿಗೊಳಿಸಿರುವ ಹೋಟೆಲ್ ಗಳು ಈಗ ಬಿಲ್ ಮೇಲೆ ಶೇ 0.5ರಷ್ಟು ಸೆಸ್ ಹಾಕಲಿದ್ದಾರೆ.
ದೇಶಿ, ವಿದೇಶಿ ವಿಮಾನಯಾನ, ಪ್ರಯಾಣ ದುಬಾರಿ
ದೇಶಿ, ವಿದೇಶಿ ವಿಮಾನಯಾನ ಟಿಕೆಟ್ ದರದ ಜೊತೆಗೆ ಶೇ 14ರಷ್ಟು ಸೇವಾ ತೆರಿಗೆ ಸೇರ್ಪಡೆಗೊಳ್ಳಲಿದ್ದು, ವಿಮಾನದಲ್ಲಿ ಪ್ರಯಾಣ ದುಬಾರಿಯಾಗಲಿದೆ. ಇದಲ್ಲದೆ ರಸ್ತೆ ಸಾರಿಗೆ ಪ್ರಯಾಣದಲ್ಲಿ ಕೆಲವು ವಿನಾಯತಿ ಟಿಕೆಟ್ ಮೇಲೆ ಮಾತ್ರ ಸೇವಾ ತೆರಿಗೆಯಿಂದ ಮುಕ್ತಿ ಸಿಗಬಹುದು. ಮಿಕ್ಕಂತೆ ವಿಮಾನಯಾನ ದುಬಾರಿಯಾಗಲಿದೆ.
ಕ್ಯಾಬ್, ಡಿಟಿಎಚ್ ಇನ್ನಿತರೆ
ಜೂ.1, 2015ರಿಂದ ಡಿಟಿಎಚ್, ಬ್ಯೂಟಿ ಪಾರ್ಲರ್, ಟ್ಯಾಕ್ಸಿ, ಕ್ಯಾಬ್ ಸೇವೆ, ವಿಮೆ, ಕೊರಿಯರ್, ಲಾಂಡ್ರಿ ಎಲ್ಲವೂ ದುಬಾರಿಯಾಗಲಿದೆ.
ಮನರಂಜನೆ ಪ್ಲಸ್ ಸೇವಾ ತೆರಿಗೆ
ಕೆಲ ರಾಜ್ಯಗಳಲ್ಲಿ ಮನರಂಜನೆ ತೆರಿಗೆ ವಿನಾಯತಿ ಇರುವುದರಿಂದ ಸಿನಿಮಾ ಟಿಕೆಟ್ ದರದಲ್ಲಿ ವ್ಯತ್ಯಾಸ ಕಂಡು ಬರಲಿದೆ. ಸೇವಾ ತೆರಿಗೆ ಮಾತ್ರ ಎಲ್ಲೆಡೆ ಅನ್ವಯವಾಗಲಿದ್ದು, ಸಿನಿಮಾ ಟಿಕೆಟ್ ಆನ್ ಲೈನ್ ಬುಕ್ಕಿಂಗ್ ದರ ಏರಿಕೆ ನಿರೀಕ್ಷಿಸಬಹುದು.
ಶೈಕ್ಷಣಿಕ ಸೆಸ್ ದರ ಏರಿಕೆ
ಜೂ.1ರಿಂದ ಸೇವಾ ತೆರಿಗೆ ಶೇ 14.5ರಷ್ಟು ಹೆಚ್ಚಳದ ಜೊತೆಗೆ ಎಜುಕೇಷನ್ ಸೆಸ್ ಕೂಡಾ ಜಾಸ್ತಿಯಾಗಲಿದೆ. ಹೀಗಾಗಿ ಶಿಕ್ಷಣ ಸಂಸ್ಥೆಗಳಿಂದ ಹೆಚ್ಚಿನ ಬಿಲ್ ನಿರೀಕ್ಷಿಸಬಹುದು.
ವಾಣಿಜ್ಯ ಸೇವೆಗಳು
ವಿಮೆ ಸೇರಿದಂತೆ ವಾಣಿಜ್ಯ ಸೇವೆಗಳು ಜೂನ್ 1, 2016ರಿಂದ ದುಬಾರಿಯಾಗಲಿದ್ದು, ಅನೇಕ ಆರ್ಥಿಕ ಸಂಸ್ಥೆಗಳು ಈಗಾಗಲೇ ತನ್ನ ಗ್ರಾಹಕರಿಗೆ ಈ ಬಗ್ಗೆ ಮಾಹಿತಿ ನೀಡುತ್ತಿದೆ.
More From GoodReturns

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ



Click it and Unblock the Notifications