ಆನ್ಲೈನ್ ಮೂಲಕ ಚಿನ್ನದಾಭರಣ ಖರೀದಿಗೆ 6 ಉತ್ತಮ ವೆಬ್ಸೈಟ್

ಬಂಗಾರದ ವ್ಯಾಮೋಹ ಯಾರಿಗೆ ತಾನೆ ಇಲ್ಲ. ಎಲ್ಲರೂ ಬಂಗಾರ ಖರೀದಿಸಲು ಹಾಗೂ ಧರಿಸಲು ಇಷ್ಟ ಪಡುತ್ತಾರೆ. ಬಂಗಾರದ ಆಭರಣಗಳನ್ನು ಆನ್ಲೈನ್ ಮೂಲಕ ಕೂಡ ಖರೀದಿಸಬಹುದಾಗಿದ್ದು, ಅಂಗಡಿಗಳಿಗೆ ಹೋಗಬೇಕೆಂದೆನಿಲ್ಲ.
ಆಭರಣಗಳನ್ನು ಆನ್ಲೈನ್ ಮೂಲಕ ಖರೀದಿಸಲು ಯಾರು ಹಿಂಜರಿಯಬೇಕಿಲ್ಲ. ಏಕೆಂದರೆ ಅನೇಕ ಪ್ರಸಿದ್ದ ಕಂಪನಿಗಳು ಆನ್ಲೈನ್ ಮೂಲಕ ಬಂಗಾರದ ಆಭರಣಗಳ ಖರೀದಿಗೆ ಅವಕಾಶ ಮಾಡಿಕೊಟ್ಟಿವೆ.
ವೈಯಕ್ತಿಕವಾಗಿ ತುಂಬಾ ಜನರು ಈ ವಿಧಾನವನ್ನು ಬಳಸುತ್ತಾರೆ. ಆದರೂ ಸಹ ಬಂಗಾರದ ಆಭರಣಗಳ ಖರೀದಿ ಮಾಡುವಾಗ ತುಂಬಾ ಜಾಗರೂಕರಾಗಿ ವ್ಯವಹರಿಸಬೇಕಾಗುತ್ತದೆ.

ಟೈಟಾನ್

ಟೈಟಾನ್

ಟಾನಿಷ್ಕಾ ಭಾರತದಲ್ಲಿ ತುಂಬಾ ವೇಗವಾಗಿ ಮತ್ತು ಬೃಹತ್ ಆಗಿ ಬೆಳೆಯುತ್ತಿರುವ ಆಭರಣಗಳ ಬ್ರಾಂಡ್ ಆಗಿದೆ. ಇದು 18 ಕ್ಯಾರೆಟ್ ಮತ್ತು 22 ಶುದ್ದ ಕ್ಯಾರೆಟ್ ನ ಆಭರಣಗಳ ಖರೀದಿಯ ಮೇಲೆ ವಿವಿಧ ರೀತಿಯ ಪ್ರೀಮಿಯಂ ವ್ಯಾಪ್ತಿಯನ್ನು ನೀಡುತ್ತದೆ.
ಈ ಕಂಪನಿಯು ಭಾರತ ಮತ್ತು ಹೊರ ದೇಶಗಳಲ್ಲೂ ಉಚಿತ ಶಿಪ್ಪಿಂಗ್ ಸೌಲಭ್ಯವನ್ನು ಉಚಿತ ರಿಟರ್ನ್ ಪಾಲಿಸಿಯೊಂದಿಗೆ ನೀಡುತ್ತದೆ.

ಕಾರ್ಟ್ಲೇನ್(Cartlane )

ಕಾರ್ಟ್ಲೇನ್(Cartlane )

Caratlane.com ಇದು ಭಾರತದ ಮೊದಲ ಆನ್ಲೈನ್ ಶಾಪಿಂಗ್ ತಾಣವಾಗಿದೆ. ಗ್ರಾಹಕರು ಮನೆಯಲ್ಲಿಯೇ ಆಭರಣಗಳನ್ನು ಪರಿಶೀಲಿಸಿ ಖರೀದಿಸಲು ಅವಕಾಶ ಕಲ್ಪಿಸಲಾಗಿದ್ದು, ಕಂಪನಿಯಿಂದ ಸಲಹೆಗಾರರನ್ನು ಸಹ ನೇಮಿಸಲಾಗಿದೆ. ಸಲಹೆಗಾರರು ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಮಾಹಿತಿಯನ್ನು ನೀಡುತ್ತಾರೆ. ಗ್ರಾಹಕರು ತಾವು ಇಷ್ಟಪಡುವ ಆಭರಣಗಳನ್ನು ಮನೆಯಲ್ಲಿಯೇ ಖರೀದಿಸಬಹುದಾಗಿದೆ.

ಬ್ಯ್ಲೂಸ್ಟೋನ್ (Bluestone)

ಬ್ಯ್ಲೂಸ್ಟೋನ್ (Bluestone)

2011 ರಲ್ಲಿ ಬ್ಯ್ಲೂಸ್ಟೋನ್ ವೆಬ್ಸೈಟ್ ನ್ನು ಬಿಡುಗಡೆಗೊಳಿಸಲಾಗಿದ್ದು, ಇದು ತನ್ನ ಗ್ರಾಹಕರಿಗಾಗಿ ಸೊಗಸಾದ ವಿನ್ಯಾಸಗಳನ್ನು ಪರಿಚಯಿಸುತ್ತಿದೆ. ಈ ಬ್ರಾಂಡ್ ಪ್ರಮಾಣಿಕೃತ ಆಭರಣ, ಜೀವಮಾನ ವಿನಿಮಯ ಸೌಲಭ್ಯ ಹಾಗೂ 30 ದಿನಗಳ ಒಳಗಾಗಿ ಹಣ ವಾಪಸಾತಿ ನೀತಿಯನ್ನು ಅನುಸರಿಸುತ್ತಿದೆ. ನೀವು ಇಷ್ಟಪಟ್ಟಲ್ಲಿ ಆಭರಣಗಳನ್ನು ಮನೆಗೆ ಪಡೆಯುವ ಅವಕಾಶವು ಇರುತ್ತದೆ. ಅಂತರಕ್ಕೆ ಅನುಗುಣವಾಗಿ 2-10 ದಿನಗಳ ಅವಧಿಯಲ್ಲಿ ಸೇವೆಯನ್ನು ಒದಗಿಸಲಾಗುತ್ತದೆ.

ಗೀತಾಂಜಲಿ

ಗೀತಾಂಜಲಿ

Gitanjalishop.com.ಮೂಲಕ ಬಂಗಾರ ಮತ್ತು ಡೈಮಂಡ್ ಆಭರಣಗಳ ಖರೀದಿಯನ್ನು ಮಾಡಬಹುದಾಗಿದೆ. 10,000 ರೂ. ಗಳಿಗಿಂತ ಕಡಿಮೆ ಖರೀದಿ ಮೇಲೆ ಕ್ಯಾಶ್ ಆನ್ ಡೆಲಿವರಿ ಆಯ್ಕೆ ಇರುತ್ತದೆ.
ಗೀತಾಂಜಲಿ ಕಂಪನಿಯವರು ವಿನ್ಯಾಸ ಮಾಡಿದ ನಾಣ್ಯ ಮತ್ತು ಆರ್ಟಿಕ್ರಾಪ್ಟ್ ಗಳನ್ನು ಸಹ ಖರೀದಿಸಬಹುದಾಗಿದೆ.

WearYourShine

WearYourShine

ಇದು ಒಂದು ಪ್ರಸಿದ್ದ ಬ್ರಾಂಡ್ ಆಗಿದ್ದು, PC ಜುವೇಲರಿಸ್ ಜೊತೆಗೂಡಿ WearYourShine ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. PC Jeweller, Blue Nile, Kama Jewellery, Asmi, Gili ಹೀಗೆ ಅನೇಕ ಬ್ರಾಂಡ್ ಗಳೊಂದಿಗೆ ಜತೆಗೂಡಿ ವ್ಯವಹಾರ ನಡೆಸುತ್ತಿದೆ.

ಸ್ನ್ಯಾಪ್ ಡೀಲ್, ಫ್ಲಿಪ್ಕಾರ್ಟ್ (Snap Deal, Flipkart)

ಸ್ನ್ಯಾಪ್ ಡೀಲ್, ಫ್ಲಿಪ್ಕಾರ್ಟ್ (Snap Deal, Flipkart)

ದೇಶದ ಪ್ರಸಿದ್ದ ಬ್ರಾಂಡುಗಳ ಬಂಗಾರದ ಆಭರಣಗಳನ್ನು ಸ್ನ್ಯಾಪ್ ಡೀಲ್ ಮತ್ತು ಫ್ಲಿಪ್ಕಾರ್ಟ್ ಕಂಪನಿಗಳ ಮೂಲಕ ಖರೀದಿಸಬಹುದಾಗಿದೆ. ಇಲ್ಲಿ ವಿವಿಧ ವಿನ್ಯಾಸದ ಅನೇಕ ಆಭರಣಗಳ ಸಂಗ್ರಹವೇ ಇದ್ದು, ಅತ್ಯುತ್ತಮ ಮತ್ತು ಆಕರ್ಷಕ ರಿಯಾಯಿತಿ ಬೆಲೆಗಳಲ್ಲಿ ನೀಡುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+