ಬಡ್ಡಿದರ ಕ್ರಮೇಣವಾಗಿ ಇಳಿಮುಖವಾಗಿ ಸಾಗುತ್ತಿದ್ದು, ಸ್ಥಿರ ಠೇವಣಿಯಿಂದ ಮಾತ್ರ ಹೆಚ್ಚು ಬಡ್ಡಿದರವನ್ನು ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳಬೆಕಾಗಿದೆ. ಸ್ಥಿರ ಠೇವಣಿಯಿಂದ ಹೆಚ್ಚು ಹಣ ಪಡೆಯಬಹುದಾದ 6 ಹಂತಗಳು ಇಲ್ಲಿವೆ.
ನೀವು ಆನ್ಲೈನ್ ಖಾತೆ ತೆರೆದರೆ ಹೆಚ್ಚಿನ ಬಡ್ಡಿ ಪಡೆಯಲು ಸಾಧ್ಯವಿಲ್ಲ. ಆದರಿಂದ ಯಾವ ಬ್ಯಾಂಕಿನವರು ಹೆಚ್ಚಿನ ಬಡ್ಡಿದರದ ಆಫರ್ ಕೊಡುತ್ತಾರೊ ಅಂತಹ ಬ್ಯಾಂಕುಗಳಲ್ಲಿ ಖಾತೆಯನ್ನು ತೆರೆಯಬೇಕು. ಕಂಪೆನಿಗಳಲ್ಲಿ ಠೇವಣಿ ಇಟ್ಟರೆ ನಿಮಗೆ ಇತರೆ ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿದರ ಸಿಗುವುದಲ್ಲದೆ ಅವೆಲ್ಲವು ಎಎಎ ರೆಟೆಡ್ ನವುಗಳಾಗಿವೆ. ನಿಮ್ಮ ಠೇವಣಿಗಳನ್ನು ಮುಂಚಿತವಾಗಿ ಹಿಂದಕ್ಕೆ ಪಡೆಯಬಾರದು ಎಂಬುದನ್ನು ನೆನಪಿನಲ್ಲಿಡಿ. ಇಲ್ಲದಿದ್ದರೆ ದಂಡವನ್ನು ಹೇರಲಾಗುತ್ತದೆ. ಮೆಚುರಿಟಿಗೆ ಮುಂಚಿತವಾಗಿ ಠೇವಣಿಗಳನ್ನು ಹಿಂದಕ್ಕೆ ಪಡೆದರೆ ಶೇಕಡಾ 1 ರಷ್ಟು ದಂಡವನ್ನು ಬ್ಯಾಂಕುಗಳು ವಿಧಿಸುತ್ತವೆ.
1. ಸ್ಥಿರ ಠೇವಣಿಯ ಆನ್ಲೈನ್ ಖಾತೆ ತೆರೆದರೆ
ಉದಾಹರಣೆಗೆ ನೀವು RBL ಬ್ಯಾಂಕಿನಲ್ಲಿ ಖಾತೆ ತೆರೆದರೆ ೨೪ ತಿಂಗಳ ಠೇವಣಿ ಮೇಲೆ 8.50 ಶೇಕಡಾ ಬಡ್ಡಿದರ ಪಡೆಯಬಹುದಾಗಿದೆ. ಅದೇ SBI ನಲ್ಲಿ ಆದರೆ ನಿಮಗೆ ಕೇವಲ 7.5 ಶೇಕಡಾ ಮಾತ್ರ ಬಡ್ಡಿದರ ಸಿಗುತ್ತದೆ.
2. ಕಂಪೆನಿ ಠೇವಣಿಗಳು
SBI ನಲ್ಲಿ 7.5 ಶೆಕಡಾ ಬಡ್ಡಿ ಪ್ರಸ್ತಾಪ ನೀಡಿದರೆ, ಬಜಾಜ್ ಫೈನಾನ್ಸ್ ಸ್ಥಿರ ಠೇವಣಿ ಮೇಲೆ 8.65 ಶೇಕಡಾ ಬಡ್ಡಿ ಹಾಗೂ DHFL ನಲ್ಲಿ 9 ಶೇಕಡಾ ಬಡ್ಡಿ ನೀಡಲಾಗುತ್ತದೆ.
3.ಪಾರ್ಮ 15g ಮತ್ತು 15h ಸಲ್ಲಿಸಿ
ತೆರಿಗೆ ಕಟ್ಟುವಷ್ಟು ಆದಾಯವಿರದಿದ್ದಲ್ಲಿ ಹಾಗೂ TDS ನಲ್ಲಿ ಕಡಿತವಾಗುತ್ತಿದ್ದಲ್ಲಿ ಪಾರ್ಮ 15g ಮತ್ತು 15h ಸಲ್ಲಿಸಬೇಕು. ಇದರಿಂದ ನಿಮ್ಮ ತೆರಿಗೆಯಲ್ಲಿ ಕಡಿತ ಉಂಟಾಗುವುದಿಲ್ಲ ಜೊತೆಗೆ ನಿಮ್ಮ ಹಿಂಪಡಿಕೆಯಲ್ಲು ವೃದ್ಧಿಯಾಗುತ್ತದೆ.
4. ಸಂಚಿತ ಠೇವಣಿಗಾಗಿ ಅರ್ಜಿ ಹಾಕಿ
ಸಂಚಿತ ಠೇವಣಿಗಾಗಿ ಅರ್ಜಿ ಹಾಕಲು ಪ್ರಯತ್ನಿಸಿ. ಇದರಿಂದ ಒಟ್ಟು ಆಶಾದಾಯಕ ಬಡ್ಡಿ ಸಿಗುವ ಸಾಧ್ಯತೆ ಇರುತ್ತದೆ.
ಸಂಯುಕ್ತಗೊಳಿಸುವ (ಕಂಪೌಂಡಿಂಗ್) ನಿಯಮ ಭವಿಷ್ಯದಲ್ಲಿ ಹೆಚ್ಚಿನ ಪ್ರತಿಫಲ ನೀಡುವ ಸಂಭವವಿರುತ್ತದೆ.
5. ಠೇವಣಿಗಳನ್ನು ಮುಂಚಿತವಾಗಿ ಹಿಂದಕ್ಕೆ ಪಡೆಯಬೇಡಿ
೬. ಪಾಲಕರ ಹೆಸರಿನಲ್ಲಿ ಠೇವಣಿಗಳನ್ನು ಇಡಿ
ನಿಮ್ಮ ಪಾಲಕರು ಹಿರಿಯ ನಾಗರಿಕರಾಗಿದಲ್ಲಿ ಅವರ ಹೆಸರಿನಲ್ಲಯೇ ಠೇವಣಿ ಇಡಿ. ಇದರಿಂದಾಗಿ ನಿಮಗೆ ಅಂತ್ಯದಲ್ಲಿ 0.50 ಶೇಕಡಾ ಹೆಚ್ಚುವರಿ ಬಡ್ಡಿ ಲಭ್ಯವಾಗುತ್ತದೆ. ಪಾಲಕರ ಆದಾಯ ತೆರಿಗೆ ಕಟ್ಟುವಷ್ಟು ಇಲ್ಲದಿದ್ದಲ್ಲಿ ಅವರ ಹೆಸರಿನಲ್ಲಿಯೇ ಸ್ಥಿರ ಠೇವಣಿಗಳನ್ನು ತೆರೆಯುವುದು ಉತ್ತಮ.


Click it and Unblock the Notifications