For Quick Alerts
ALLOW NOTIFICATIONS  
For Daily Alerts

ಪಿಪಿಎಫ್ ನಲ್ಲಿ ಹೂಡಿಕೆ ಮಾಡಲು 7 ಕಾರಣಗಳು

|

ಬಡ್ಡಿ ದರದಲ್ಲಿ ಇಳಿಕೆಯಾಗುತ್ತಿದ್ದು ಅದರಿಂದ ಸಿಗುವ ಇಳುವರಿ(ಲಾಭ) ಕೂಡ ಕಡಿಮೆಯಾಗುತ್ತಿದೆ. ಆದಾಗ್ಯೂ, ಪಿಪಿಎಫ್ ಆಕರ್ಷಕ ಹೂಡಿಕೆಗಳಲ್ಲಿ ಒಂದಾಗಿದ್ದು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಪಿಪಿಎಪ್ ನಲ್ಲಿ ಹೂಡಿಕೆ ಮಾಡಲು ಈ ಕೆಳಗಿನ 7 ಆಕರ್ಷಕ ಕಾರಣಗಳಿವೆ.

1.ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿ ದರ

1.ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿ ದರ

ಪ್ರತಿ ತ್ರೈಮಾಸಿಕದ ಬಡ್ಡಿದರವನ್ನು ಸರ್ಕಾರವು ಪರಿಷ್ಕರಿಸಿದ್ದು ಅದರ ಪ್ರಕಾರ ಪಿಪಿಎಫ್ ಬಡ್ಡಿದರವು ಆಯಾ ಬ್ಯಾಂಕುಗಳ ಇನ್ನಿತರ ಬಡ್ಡಿದರಗಳಿಗಿಂತ ಹೆಚ್ಚಾಗುತ್ತಿರುವುದು ಖಚಿತವಾಗಿದೆ.
ಬ್ಯಾಂಕುಗಳು ಪ್ರಸ್ತುತ 7.5 ಶೇಕಡಾ ಬಡ್ಡಿದರ ನೀಡುತ್ತಿವೆ. ಆದರೆ ಪಿಪಿಎಪ್ ಮೇಲೆ ನೀವು 8.1 ಶೇಕಡಾ ಬಡ್ಡಿದರವನ್ನು ಪಡೆಯಬಹುದಾಗಿದೆ.

2.ತೆರಿಗೆ ಮುಕ್ತ ಆದಾಯ

2.ತೆರಿಗೆ ಮುಕ್ತ ಆದಾಯ

ದೇಶದಲ್ಲಿ ಕೆಲವೆ ಕೆಲವು ಸಾಧನಗಳ ಮೇಲೆ ತೆರಿಗೆಯಿಂದ ಮುಕ್ತಿ ಪಡೆಯಬಹುದಾಗಿದೆ. ಅದರಲ್ಲಿ ಪಿಪಿಎಪ್ ಕೂಡ ಒಂದಾಗಿದ್ದು, ಪಿಪಿಎಫ್ ಮೇಲೆ ಪಡೆಯುವ ಬಡ್ಡಿದರವು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ.

3. ೮೦ಸಿ ಸೆಕ್ಷನ್ ಲಾಭಗಳು

3. ೮೦ಸಿ ಸೆಕ್ಷನ್ ಲಾಭಗಳು


ಸೆಕ್ಷನ್ ೮೦ಸಿ ಮುಖಾಂತರ ಪಿಪಿಎಫ್ ಮೇಲೆ ಹಿಚ್ಚಿನ ಲಾಭಗಳನ್ನು ಪಡೆಯಬಹುದಾಗಿದೆ. ಆದಾಯ ತೆರಿಗೆ ನೀತಿ ಅನುಗುಣವಾಗಿ ಸೆಕ್ಷನ್ ೮೦ಸಿ ಅಡಿಯಲ್ಲಿ ೧.೫ ಲಕ್ಷಕ್ಕಿಂತಲೂ ಹೆಚ್ಚಿನ ಹೂಡಿಕೆ ಮೇಲೆ ತೆರಿಗೆ ವಿನಾಯಿತಿ ಇರುತ್ತದೆ.

4. ತುಂಬಾ ಸುರಕ್ಷಿತ

4. ತುಂಬಾ ಸುರಕ್ಷಿತ

ಪಿಪಿಎಫ್ ತುಂಬಾ ಸುರಕ್ಷಿತವಾದ ಹೂಡಿಕೆ ಸಾಧನವಾಗಿದೆ. ಹಾಗೂ ಸರ್ಕಾರವು ಪಿಪಿಎಫ್ ಮೇಲೆ ನಿರ್ಲಕ್ಷ ತಾಳುವ ಸಾಧ್ಯತೆ ತುಂಬಾ ವಿರಳವಾಗಿರುತ್ತದೆ.

5. ರಿಟೈರ್ಮೆಂಟ್ ಕಾರ್ಪಸ್ ವೃದ್ಧಿ

5. ರಿಟೈರ್ಮೆಂಟ್ ಕಾರ್ಪಸ್ ವೃದ್ಧಿ

ಪಿಪಿಎಫ್ ಅವಧಿಯನ್ನು 15 ವರ್ಷಗಳಿಗೆ ಸೀಮಿತಗೊಳಿಸಲಾಗುತ್ತದೆ. ನೀವು ಭಾಗಶಹ 7 ವರ್ಷಗಳ ನಂತರ ಹಣವನ್ನು ಪಡೆಯಬಹುದಾಗಿದೆ. ಇದು ನಿಮ್ಮ ರಿಟೈರ್ಮೆಂಟ್ ನಂತರವು ಹೆಚ್ಚು ಲಾಭ ಉಳಿಸುವ ಉತ್ತಮ ಸಾಧನವಾಗಿದೆ.

6. ಅಂಚೆ ಕಛೇರಿಗಳಿಗೆ ಮಾತ್ರ ಸೀಮಿತವಲ್ಲ

6. ಅಂಚೆ ಕಛೇರಿಗಳಿಗೆ ಮಾತ್ರ ಸೀಮಿತವಲ್ಲ

ಈ ಮೊದಲು ನೀವು ಪಿಪಿಎಫ್ ಖಾತೆಯನ್ನು ಅಂಚೆ ಕಛೇರಿಗಳಲ್ಲಿ ಮಾತ್ರ ತೆರೆಯಬಹುದಿತ್ತು. ಆದರೆ ಇಂದಿನ ದಿನಗಳಲ್ಲಿ ಅಂಚೆ ಕಛೇರಿಗಳನ್ನು ಹೊರತುಪಡಿಸಿದಂತೆ ಖಾಸಗಿ ವಲಯದ ಬ್ಯಾಂಕುಗಳಲ್ಲೂ ಪಿಪಿಎಪ್ ಖಾತೆಗಳನ್ನು ತೆರೆಯಬಹುದಾಗಿದೆ. ಪಿಪಿಎಫ್ ಸರಳವಾಗಿ ಹಾಗೂ ಮುಕ್ತವಾಗಿ ವರ್ಗಾಯಿಸಬಹುದಾಗಿದೆ.

7. ಸಣ್ಣ ಮೊತ್ತದ ನಿಧಿಯನ್ನು ಇಡಬಹುದು

7. ಸಣ್ಣ ಮೊತ್ತದ ನಿಧಿಯನ್ನು ಇಡಬಹುದು


ನೀವು 5000 ರೂ.ಗಳ ಸಣ್ಣ ಮೊತ್ತದ ಹಣವನ್ನು ಪ್ರತಿ ವರ್ಷ ಇಡಬಹುದಾಗಿದ್ದು, ಇವುಗಳ ಮೇಲೆ ಹೆಚ್ಚಿನ ಲಾಭಗಳನ್ನು ಪಡೆಯಬಹುದಾಗಿದೆ.

English summary

7 Reasons To Invest In The PPF Now

interest rates have fallen and yields have come down. However, PPF is still one of the most attractive investments. Here are 7 reasons to invest in the PPF now.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X