ಪ್ರತಿ ತಿಂಗಳಲ್ಲೂ ಸ್ಥಿರ ಠೇವಣಿಗಳ ಮೇಲೆ ಉತ್ತಮ ಬಡ್ಡಿದರ ಪಡೆಯಬೇಕು ಎಂಬುದು ಎಲ್ಲರ ಇಚ್ಛೆಯಾಗಿರುತ್ತದೆ. ಆದರೆ ಯಾವ ಬ್ಯಾಂಕಿನ ಅಥವಾ ಯಾವ ಕಂಪನಿಯ ಸ್ಥಿರ ಠೇವಣಿಗಳ ಮೇಲೆ ಉತ್ತಮ ಬಡ್ಡಿದರ ಸಿಗುತ್ತದೆ ಎಂಬ ಗೊಂದಲ ನಮ್ಮಲ್ಲಿ ಇದ್ದೆ ಇರುತ್ತದೆ.
ಪ್ರತಿ ತಿಂಗಳು ಉತ್ತಮ ಬಡ್ಡಿದರ ಕೊಡಬಲ್ಲ ಕೆಲ ಕಂಪನಿಗಳ ಉತ್ತಮ ಸ್ಥಿರ ಠೇವಣಿಗಳನ್ನು ಇಲ್ಲಿ ಆಯ್ಕೆ ಮಾಡಲಾಗಿದೆ. ಇವು ಅತ್ಯುತ್ತಮ ಬಡ್ಡಿದರ ಕೊಡುವ ಮತ್ತು ಎಲ್ಲವೂ ಎಎಎ ರೇಟೆಡ್ ಠೇವಣಿಗಳಾಗಿವೆ. ಇವೇಲ್ಲವೂ ಅತ್ಯಂತ ಸುರಕ್ಷಿತವಾಗಿದ್ದು ಅತಿ ಹೆಚ್ಚು ಬಡ್ಡಿದರವನ್ನು ಘೋಷಿಸಿವೆ. ಅವುಗಳ ಮಾಹಿತಿ ಇಲ್ಲಿ ನೋಡಿ...
ದಿವಾನ್ ಹೌಸಿಂಗ್
ದಿವಾನ್ ಹೌಸಿಂಗ್ ಶೇ. 9ರಷ್ಟು ಬಡ್ಡಿದರವನ್ನು ಘೋಷಿಸಿವೆ. CARE ಮತ್ತು BWR ಇವೇರಡೂ ಸ್ಥಿರ ಠೇವಣಿಗಳು ಎಎಎ ರೇಟೆಡ್ ಆಗಿದ್ದು, ತುಂಬಾ ಸುರಕ್ಷಿತ ಎಂದು ಹೆಸರು ಪಡೆದಿವೆ.
40 ತಿಂಗಳ ಕಾಲಾವಧಿಯ ಈ ಸ್ಥಿರ ಠೇವಣಿಗಳ ಮೇಲೆ ಶೇ. 8.90ರಷ್ಟು ಬಡ್ಡಿದರ ಪಾವತಿಸಲಾಗುವುದು.
50 ಲಕ್ಷಕ್ಕಿಂತಲೂ ಹೆಚ್ಚಿನ ಸ್ಥಿರ ಠೇವಣಿಗಳ ಮೇಲೆ ಶೇ. 9ರವರೆಗೆ ಬಡ್ಡಿದರ ನೀಡಲಾಗುವುದು.
ಬಜಾಜ್ ಫೈನಾನ್ಸ್
ಬಜಾಜ್ ಫೈನಾನ್ಸ್ ಕಂಪನಿ 18 ರಿಂದ 60 ತಿಂಗಳುಗಳ ಕಾಲಾವಧಿಯ ಸ್ಥಿರ ಠೇವಣಿಗಳ ಮೇಲೆ 8.65% ಬಡ್ಡಿದರ ಘೋಷಿಸಿದೆ. ಬ್ಯಾಂಕುಗಳು ಕೇವಲ 7.50% ಬಡ್ಡಿದರವನ್ನು ಮಾತ್ರ ನಿಡುತ್ತವೆ.
ಸ್ಥಿರ ಠೇವಣಿಗಳು ಎಎಎ ರೇಟೆಡ್ ಆಗಿದ್ದು ತುಂಬಾ ಸುರಕ್ಷಿತವಾಗಿವೆ. ಇದರಿಂದಾಗಿಯೇ ಬಜಾಜ್ ಫೈನಾನ್ಸ್ ಸುಸ್ಥಿರ ಕಂಪನಿಯಾಗಿ ನೆಲೆ ನಿಂತಿದೆ. ಹಿರಿಯ ನಾಗರೀಕರಿಗೆ ಹೆಚ್ಚುವರಿ ಶೇ. 0.25 ಅಂದರೆ ಒಟ್ಟು ಶೇ. 9ರಷ್ಟು ಬಡ್ಡಿದರ ಲಭ್ಯವಿದೆ.
ಮಹೀಂದ್ರಾ ಫೈನಾನ್ಸ್
ಮಹೀಂದ್ರಾ ಫೈನಾನ್ಸ್ ತನ್ನ ಹೆಚ್ಚಿನ ಕಾಲಾವಧಿಯ ಸ್ಥಿರ ಠೇವಣಿಗಳ ಮೇಲೆ ಶೇ. 8.45 ಕ್ಕಿಂತಲೂ ಹೆಚ್ಚಿನ ಬಡ್ಡಿದರ ಒದಗಿಸುತ್ತದೆ. ಠೇವಣಿಗಳು ಎಎಎ ರೇಟೆಡ್ ಆಗಿದ್ದು ತುಂಬಾ ಸುರಕ್ಷಿತವಾಗಿವೆ. ಹಿರಿಯ ನಾಗರೀಕರಿಗೆ ಶೇ. 0.25ರಷ್ಟು ಹೆಚ್ಚುವರಿ ಬಡ್ಡಿದರ ಪಾವತಿಸಲಾಗುತ್ತದೆ.
60 ತಿಂಗಳ ಕಾಲಾವಧಿಯವರೆಗೆ ಹೂಡಿಕೆ ಮಾಡಿದರೆ ಶೇ. 10ಕ್ಕಿಂತ ಹೆಚ್ಚು ಬಡ್ಡಿದರದ ಪ್ರತಿಫಲ ಸಿಗುತ್ತದೆ. 5000 ರೂ.ಗಳ ಠೇವಣಿ ಇಟ್ಟರೆ ಐದು ವರ್ಷಗಳ ಕಾಲಾವಧಿಯಲ್ಲಿ ರೂ. 7501 ಸಿಗುತ್ತದೆ.
ಹೆಚ್ಡಿಎಫ್ಸಿ (HDFC) ಠೇವಣಿಗಳು
ಹೆಚ್ಡಿಎಫ್ಸಿ ಕಂಪನಿ 22 ತಿಂಗಳ ಕಾಲಾವಧಿಯ ಠೇವಣಿಗಳ ಮೇಲೆ ಶೇ. 8.30ರಷ್ಟು ಬಡ್ಡಿದರ ಒದಗಿಸುತ್ತದೆ. 44 ತಿಂಗಳ ಠೇವಣಿಗಳ ಮೇಲೂ ಸಹ ಶೇ. 8.30ರಷ್ಟು ಬಡ್ಡಿದರ ಲಭ್ಯವಿದೆ.
ಇದು ಬ್ಯಾಂಕುಗಳಿಗಿಂತಲೂ ಹೆಚ್ಚಿನ ಠೇವಣಿ ದರವಾಗಿದ್ದು, ಎಎಎ ರೇಟೆಡ್ ಠೇವಣಿಗಳಾಗಿವೆ.
ತ್ರೈಮಾಸಿಕ ಬಡ್ಡಿದರದ ಅಡಿಯಲ್ಲಿ ಮೇಲಿನ ಕಾಲಾವಧಿಗನುಗುಣವಾಗಿ ಶೇ. 8.05ರಷ್ಟು ಬಡ್ಡಿದರ ಪಡೆಯುವಿರಿ.
ಎಲ್ಐಸಿ ಹೌಸಿಂಗ್ ಫೈನಾನ್ಸ್
ಸಂಚಿತ ಸ್ಥಿರ ಠೇವಣಿ ಅಡಿಯಲ್ಲಿ ಶೇ. 8.25ರಷ್ಟು ಬಡ್ಡಿದರ ಎಲ್ಲಾ ಅವಧಿಗಳ ಮೇಲೂ ಸಿಗುತ್ತದೆ. ಆದರೆ ೫ ವರ್ಷಗಳ ಕಾಲಾವಧಿಗೆ ಶೇ. 8.35ರಷ್ಟು ಬಡ್ಡಿದರ ಲಭ್ಯ ಇದೆ. ಈ ಮೇಲಿನ ಠೇವಣಿಗಳ ಮೇಲೆ ಹಿರಿಯ ನಾಗರಿಕರಿಗೆ ಶೇ. 0.25ರಷ್ಟು ಹೆಚ್ಚುವರಿ ಬಡ್ಡಿದರ ಪಾವತಿಸಲಾಗುತ್ತದೆ.
ಪಿಎನ್ಬಿ (PNB) ಹೌಸಿಂಗ್ ಫೈನಾನ್ಸ್
ಎನ್ಬಿ (PNB) ಹೌಸಿಂಗ್ ಫೈನಾನ್ಸ್ ಕಂಪನಿ 48 ರಿಂದ 84 ತಿಂಗಳ ಕಾಲಾವಧಿಯ ಸ್ಥಿರ ಠೇವಣಿಗಳ ಮೇಲೆ ಶೇ. 8.25ರಷ್ಟು ಬಡ್ಡಿದರ ನೀಡುತ್ತದೆ. ಹತ್ತು ವರ್ಷಗಳ ಠೇವಣಿಗಳ ಮೇಲೆ ಶೇ. 11.79ರವರೆಗೆ ಹೆಚ್ಚಿನ ಪ್ರತಿಫಲ ಸಿಗುತ್ತದೆ. ಇವು ಅತ್ಯಂತ ಸುರಕ್ಷಿತ ಠೇವಣಿಗಳಾಗಿವೆ.
ಗೃಹ ಫೈನಾನ್ಸ್
ಗೃಹ ಫೈನಾನ್ಸ್ ನಲ್ಲಿ 36 ತಿಂಗಳ ಠೇವಣಿಗಳ ಮೇಲೆ ಶೇ. 8ರಷ್ಟು ಬಡ್ಡಿದರ ಲಭ್ಯವಿದೆ. ಇದು ಅಷ್ಟೊಂದು ಉತ್ತಮವಾದ ಬಡ್ಡಿದರ ಅಲ್ಲದಿದ್ದರೂ ಬ್ಯಾಂಕುಗಳು ನೀಡುವ ಬಡ್ಡಿದರಕ್ಕಿಂತಲೂ ಉತ್ತಮ ಎಂದು ಹೇಳಬಹುದು.


Click it and Unblock the Notifications