ಅಲ್ಪಾವಧಿ ಹೂಡಿಕೆಗಾಗಿ ಭಾರತದಲ್ಲಿನ ಉತ್ತಮ ಖಾತೆಗಳು

ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ ಅಥವಾ ಬಡ್ಡಿದರ ಕೊಡುವ ಉಳಿತಾಯ ಖಾತೆಗಳಲ್ಲಿ ಹಣ ಹೂಡಿಕೆ ಮಾಡಬೇಕು ಎನ್ನುವುದು ಎಲ್ಲರ ಇಚ್ಛೆಯಾಗಿರುತ್ತದೆ.

ಕೆಲವೊಮ್ಮೆ ನಿಮ್ಮ ಬಳಿ ಹೆಚ್ಚು ಮೊತ್ತ ಇರುತ್ತದೆ. ಆದರೆ ಆ ಹಣವನ್ನು ಹೂಡಿಕೆ ಮಾಡಿ ಕಡಿಮೆ ಅವಧಿಯಲ್ಲಿ ಉತ್ತಮ ಆದಾಯ ಪಡೆಯುವ ಬಗ್ಗೆ ಗೊತ್ತಿರುವುದಿಲ್ಲ.

ನಾವು ಹೂಡಿಕೆ ಮಾಡುವ ಹಣದ ಮೇಲೆ ಉತ್ತಮ ಪ್ರತಿಫಲ, ಪರಿಣಾಮಕಾರಿ ತೆರಿಗೆ ಲಾಭ, ಸಿಗುವಂತಿರಬೇಕು. 15 ದಿನಗಳ ಅವಧಿಯಿಂದ 1 ವರ್ಷದ ಅವಧಿಯನ್ನು ಸಾಮಾನ್ಯವಾಗಿ ಅಲ್ಪಾವಧಿಯ ಹೂಡಿಕೆ ಎಂದು ಕರೆಯಲಾಗುತ್ತದೆ. (ಭಾರತದಲ್ಲಿನ 6 ಉತ್ತಮ ಸಂಬಳ ಖಾತೆಗಳು)

ಭಾರತದಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಪ್ರತಿಫಲ ಕೊಡಬಲ್ಲ ಪ್ರಮುಖ ಹೂಡಿಕೆಗಳ ಮಾಹಿತಿ ಇಲ್ಲಿದೆ ನೋಡಿ.

ಬಂಧನ್ ಬ್ಯಾಂಕು ಅಲ್ಪಾವಧಿ ಹೂಡಿಕೆ

ಬಂಧನ್ ಬ್ಯಾಂಕು ಅಲ್ಪಾವಧಿ ಹೂಡಿಕೆ

ನಿಮಗೆ ಅಲ್ಪವಧಿಗಾಗಿ ಹಣ ಹೂಡಿಕೆ ಮಾಡಬೇಕೆಂದೆನಿಸಿದಲ್ಲಿ ಬಂಧನ್ ಬ್ಯಾಂಕು ಅತ್ಯುತ್ತಮ ಆಯ್ಕೆ ಎನ್ನುವುದರಲ್ಲಿ ಎರಡು ಮಾತಿಲ್ಲ. 6 ರಿಂದ 8 ತಿಂಗಳ ಅವಧಿಯ ಸ್ಥಿರ ಠೇವಣಿಗಳ ಮೇಲೆ ನೀವು ಹೂಡಿಕೆ ಮಾಡಬಹುದು.
6ರಿಂದ 12 ತಿಂಗಳ ಅವಧಿಯ ಹೂಡಿಕೆಗಳ ಮೇಲೆ ಶೇ. 8ರಷ್ಟು ಬಡ್ಡಿದರ ಸಿಗುತ್ತದೆ. ಪ್ರಸ್ತುತ ದೇಶದ ಯಾವುದೇ ಬ್ಯಾಂಕು ಅಲ್ಪಾವಧಿ ಠೇವಣಿಗಳ ಮೇಲೆ ಈ ಪ್ರಮಾಣದ ಬಡ್ಡಿದರವನ್ನು ಕೊಡುತ್ತಿಲ್ಲ. ಹೀಗಾಗಿ ಇದು ಅಲ್ಪಾವಧಿಗಾಗಿ ಹೂಡಿಕೆ ಮಾಡಲು ಉತತ್ಮ ಆಯ್ಕೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಐಡಿಎಫ್ಸಿ ಬ್ಯಾಂಕು ಸ್ಥಿರ ಠೇವಣಿ

ಐಡಿಎಫ್ಸಿ ಬ್ಯಾಂಕು ಸ್ಥಿರ ಠೇವಣಿ

ಐಡಿಎಫ್ಸಿ ಬ್ಯಾಂಕು ಅಲ್ಪಾವಧಿ ಹೂಡಿಕೆಗೆ ಉತ್ತಮ ಆಯ್ಕೆ. 271-365 ದಿನಗಳ ಠೇವಣಿಗಳ ಮೇಲೆ ಶೇ. 8ರಷ್ಟು ಬಡ್ಡಿದರ ಪಡೆಯಬಹುದು. ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ ಠೇವಣಿ ಮೇಲೆ ಶೇ. 8.25ರಷ್ಟು ಬಡ್ಡಿದರ ಸಿಗುತ್ತದೆ. ಅದೇ ರೀತಿ ಹಿರಿಯ ನಾಗರಿಕರು ಶೇ. 8.25 ರಿಂದ 8.75ರಷ್ಟು ಬಡ್ಡಿದರ ಪಡೆಯಬಹುದಾಗಿದೆ.
ಹೆಚ್ಚಿನ ಬ್ಯಾಂಕುಗಳು ಮೊದಲ ಸ್ಥಿರ ಠೇವಣಿಗಳ ವಿತ್ ಡ್ರಾ ಮೇಲೆ ಶೇ. 1ರಷ್ಟು ಶುಲ್ಕ ವಿಧಿಸಲಾಗುತ್ತದೆ. ಆದರೆ ಐಡಿಎಫ್ಸಿ ಬ್ಯಾಂಕಿನ ಸ್ಥಿರ ಠೇವಣಿ ಮೇಲೆ ಯಾವುದೇ ಶುಲ್ಕಗಳಿರುವುದಿಲ್ಲ.

ಆರ್ಬಿಎಲ್(RBL) ಬ್ಯಾಂಕು ಉಳಿತಾಯ ಖಾತೆ

ಆರ್ಬಿಎಲ್(RBL) ಬ್ಯಾಂಕು ಉಳಿತಾಯ ಖಾತೆ

ಅಲ್ಪಾವಧಿಯ ಹಣ ಇಡಲು ಅತ್ಯುತ್ತಮ ಸ್ಥಳ. ನೀವು ಆಸ್ತಿಯನ್ನು ಮಾರಿ ಆ ಹಣವನ್ನು ದ್ರವದ ರೂಪದಲ್ಲಿಟ್ಟು ಇನ್ನೊಂದು ಆಸ್ತಿ ಖರೀದಿ ಮಾಡಲು ಬಯಸಿದಲ್ಲಿ ಆರ್ಬಿಎಲ್ ಬ್ಯಾಂಕಿನ ಉಳಿತಾಯ ಖಾತೆಯನ್ನು ತೆರೆಯಬಹುದು.
ಆರ್ಬಿಎಲ್ ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ಹಣ ಹೂಡಿಕೆ ಮಾಡಿದರೆ ಶೇ. 7.5ರಷ್ಟು ಬಡ್ಡಿದರ ಪಡೆಯಬಹುದು. ಜತೆಗೆ ಐದು ಲಕ್ಷ ಅಪಘಾತ ವಿಮೆಯ ಸೌಲಭ್ಯ ಪಡೆಯಬಹುದು. ಆದರೆ ನಿಮಗೆ ಮೊತ್ತ ಮುಂಚಿತವಾಗಿ ಬೇಕಾದರೆ ಪೂರ್ವ ಪಾವತಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಉಳಿತಾಯ ಖಾತೆಯ 10,000 ರೂ.ಗಳ ಬಡ್ಡಿ ಆದಾಯದ ಮೇಲೆ ವಿನಾಯಿತಿ ಇರುತ್ತದೆ ಎಂಬುದನ್ನು ನೆನಪಿಡಿ.

ಯೆಸ್ ಬ್ಯಾಂಕು

ಯೆಸ್ ಬ್ಯಾಂಕು

ಅಲ್ಪಾವಧಿ ಅಥವಾ ದೀರ್ಘಾವಧಿಯ ಸ್ಥಿರ ಠೇವಣಿಗಳನ್ನು ಅವಧಿ ಮುಗಿಯುವ ಮುಂಚಿತವಾಗಿ ವಿತ್ ಡ್ರಾ ಮಾಡಿಕೊಂಡರೆ ಶೇ. 1ರಷ್ಟು ಅನವಶ್ಯಕ ದಂಡ ವಿಧಿಸಲಾಗುತ್ತದೆ.
ಯೆಸ್ ಬ್ಯಾಂಕು ಉಳಿತಾಯ ಖಾತೆಯ ಅಲ್ಪಾವಧಿಯ ಹೂಡಿಕೆ ಮೇಲೆ ಶೇ. 6ರಷ್ಟು ಬಡ್ಡಿದರವನ್ನು ಒದಗಿಸುತ್ತದೆ.

ಲಿಕ್ವಿಡ್ ಫಂಡ್ಸ್

ಲಿಕ್ವಿಡ್ ಫಂಡ್ಸ್

ಲಿಕ್ವಿಡ್ ಫಂಡ್ಸ್ ಎನ್ನುವುದು ಮ್ಯೂಚುವಲ್ ಫಂಡ್ ಯೋಜನೆಗಳಿದ್ದಂತೆ ಹಾಗೂ ಅಲ್ಪಾವಧಿ ಭದ್ರತೆಗಳ ಮೇಲೆ ಹೂಡಿಕೆ ಮಾಡುವುದು ಸರ್ಕಾರದ ಭದ್ರತೆಗಳ ಮೇಲೆ ಹೂಡಿಕೆ ಮಾಡುವಂತೆ ಸುರಕ್ಷಿತ.
ಬ್ಯಾಂಕುಗಳ ಠೇವಣಿಗಳ ಮೇಲೆ ನೀಡುವ ಬಡ್ಡಿದರದಂತೆ ಲಿಕ್ವಿಡ್ ಫಂಡ್ಸ್ ಗಳ ಹೂಡಿಕೆ ಮೇಲೂ ಬಡ್ಡಿದರ ಪಾವತಿಸಲಾಗುತ್ತದೆ.

ಕೊಟಕ್ ಬ್ಯಾಂಕು

ಕೊಟಕ್ ಬ್ಯಾಂಕು

ಯೆಸ್ ಬ್ಯಾಂಕಿನಂತೆ ಕೊಟಕ್ ಬ್ಯಾಂಕು ಕೂಡ ಉಳಿತಾಯ ಖಾತೆಗಳ ಮೇಲೆ ಶೇ. 6ರಷ್ಟು ಬಡ್ಡಿದರವನ್ನು ಪಾವತಿಸುತ್ತದೆ. ಹೀಗಾಗಿ ಕೊಟಕ್ ಬ್ಯಾಂಕು ಕೂಡ ಹೂಡಿಕೆಗೆ ಉತ್ತಮ ಆಯ್ಕೆ ಆಗಿದೆ.

ಅಲ್ಟ್ರಾ ಅಲ್ಪಾವಧಿ ಪಂಡ್ಸ್

ಅಲ್ಟ್ರಾ ಅಲ್ಪಾವಧಿ ಪಂಡ್ಸ್

ಇಲ್ಲಿ ಲಿಕ್ವಿಡ್ ಪಂಡ್ಸ್ ಮತ್ತು ಮ್ಯೂಚುವಲ್ ಪಂಡ್ ಯೋಜನೆಗಳು ಲಭ್ಯ ಇವೆ. ಇವುಗಳ ಮೇಲೆ ಉತ್ತಮ ಪ್ರತಿಫಲ ಲಭ್ಯವಿದ್ದು ನಿಮಗೆ ಇಷ್ಟವಾಗುವ ಹಾಗೂ ಉತ್ತಮ ಗಳಿಕೆ ಕೊಡುವುದರ ಮೇಲೆ ಹೂಡಿಕೆ ಮಾಡುವುದು ಉತ್ತಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+