ಹೌದು. ಕನಸಿನ ಮನೆ ಹೊಂದುವ ಪಿಎಫ್ ಚಂದಾದಾರರಿಗೆ ಒಂದು ಶುಭ ಸುದ್ದಿಯನ್ನು ಇಪಿಎಫ್ಒ ಹೊರತಂದಿದ್ದು, ವಿಶಿಷ್ಟ ಯೋಜನೆಯನ್ನು ಶೀಘ್ರದಲ್ಲಿಯೇ ಪರಿಚಯಿಸಲಿದೆ.
ನಾಲ್ಕು ಕೋಟಿ ಚಂದಾದಾರರಿಗೆ ಕೈಗೆಟಕುವ ಮನೆ ಖರೀದಿಗೆ ಭವಿಷ್ಯ ನಿಧಿಯನ್ನು ಒತ್ತೆ ಇಡುವ ಈ ಯೋಜನೆಯನ್ನು ಜಾರಿಗೆ ತರಲು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ಶೀಘ್ರದಲ್ಲಿಯೇ ಕಾರ್ಯೋನ್ಮುಕವಾಗಲಿದೆ. (ಎಸ್ಬಿಐ ಗೃಹ ಸಾಲ ಯೋಜನೆ: ಗ್ರಾಹಕರಿಗೆ ಬಂಪರ್ ಆಫರ್)
ಇಎಂಐ (EMI) ಅವಕಾಶ
ಪಿಎಫ್ ಚಂದಾದಾರರಿಗಾಗಿ ಮನೆ ಖರೀದಿ ಯೋಜನೆಯನ್ನು ರೂಪಿಸುತಿದ್ದು, ಈ ಉದ್ದೇಶಕ್ಕೆ ಚಂದಾದಾರರು ತಮ್ಮ ಭವಿಷ್ಯ ನಿಧಿಯ ಮೊತ್ತವನ್ನು ಅಡ ಇರಿಸಬೇಕಾಗುತ್ತದೆ. ಸಾಲದ ಮಾಸಿಕ ಸಮಾನ ಕಂತು (ಇಎಂಐ) ತುಂಬಲು ಪಿಎಫ್ ಕೊಡುಗೆಯನ್ನು ಬಳಸಿಕೊಳ್ಳಲು ಈ ಯೋಜನೆಯಲ್ಲಿ ಅವಕಾಶ ಮಾಡಿಕೊಡಲಾಗುವುದು ಎಂದು ಕಾರ್ಮಿಕ ಕಾರ್ಯದರ್ಶಿ ಶಂಕರ್ ಅಗರ್ವಾಲ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಸಿಬಿಟಿ ಸಮ್ಮತಿ
ಈ ಯೋಜನೆಯ ಪ್ರಸ್ತಾಪವನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್ಒ) ಧರ್ಮದರ್ಶಿಗಳ ಕೇಂದ್ರೀಯ ಮಂಡಳಿ(ಸಿಬಿಟಿ) ಎದುರು ಮಂಡಿಸಲಾಗುವುದು. ಮಂಡಳಿಯ ಸಭೆಯು ಮುಂದಿನ ತಿಂಗಳು ನಡೆಯಲಿದೆ. ಸಿಬಿಟಿ ಯು ಇದಕ್ಕೆ ಸಮ್ಮತಿ ನೀಡುತಿದ್ದಂತೆಯೇ ಪಿಎಫ್ ಚಂದಾದಾರರು ಈ ಯೋಜನೆ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.
ಮನೆ ಪಡೆಯಲು ಮಾನದಂಡ
ಸಾಲ ಪಡೆಯಲು ಪಿಎಫ್ ಚಂದಾದಾರರ ಅರ್ಹತೆ ಏನಿರಬೇಕು? ಅಡಮಾನ ಪ್ರಕ್ರಿಯೆ ಹೇಗೆ? ಸ್ವಂತ ಮನೆ ಹೊಂದುವ ಕನಸಿನ ಯೋಜನೆಯಲ್ಲಿ ಎಷ್ಟು ಹಣ ಸಿಗುತ್ತದೆ? ಕಡಿಮೆ ವೆಚ್ಚದ ಮನೆಯ ಮಾನದಂಡಗಳೇನು? ಗೃಹ ನಿರ್ಮಾಣ ಸ್ವರೂಪ ಎಂಥದ್ದು? ಇತ್ಯಾದಿ ವಿಚಾರಗಳ ಕುರಿತು ಯಾವುದೇ ಮಾಹಿತಿ ಹೊರಬಂದಿಲ್ಲ. ಮುಂದಿನ ತಿಂಗಳ ಸಭೆಯ ನಂತರ ಇವೇಲ್ಲಕ್ಕೂ ಉತ್ತರ ಸಿಗಲಿದೆ.
ಇಷ್ಟದ ಮನೆ ಖರೀದಿ
ಪಿಎಫ್ ಚಂದಾದಾರರಿಗಾಗಿ ಮನೆ ಖರೀದಿ ಯೋಜನೆ ಅಡಿಯಲ್ಲಿ ಯಾವುದೇ ನಿಯಮ/ಷರತ್ತು ಹೇರಲು ಬಯಸುವುದಿಲ್ಲ. ನಾವು ಭೂಮಿ ಖರೀದಿಸುವುದಿಲ್ಲ ಅಥವಾ ಮನೆಗಳನ್ನು ನಿರ್ಮಿಸುವುದಿಲ್ಲ. ಪಿಎಫ್ ಚಂದಾದಾರರು ಮುಕ್ತ ಮಾರುಕಟ್ಟೆಯಲ್ಲಿ ಇಷ್ಟದ ಮನೆಯನ್ನು ಖರೀದಿಸಬಹುದಾಗಿದೆ ಎಂದು ಇಪಿಎಫ್ಒ ಹೇಳಿದೆ.
ಯೋಜನೆ ಉದ್ದೇಶ
ಕಡಿಮೆ ವರಮಾನ ಹೊಂದಿರುವ ಪಿಎಫ್ ಚಂದಾದಾರರು ಮತ್ತು ಸೇವಾವಧಿಯಲ್ಲಿ ಮನೆ ಖರೀದಿಸಲು ಸಾಧ್ಯವಾಗದೆ ಇರುವವರ ಅನುಕೂಲಕ್ಕಾಗಿ ಈ ಯೋಜನೆ ರೂಪಿಸಲಾಗುತ್ತಿದೆ.
ಸಾಲದ ಮರುಪಾವತಿ
ಪಿಎಫ್ ಅಡಮಾನದಲ್ಲಿ ಮನೆ ಖರೀದಿ ಯೋಜನೆಯಲ್ಲಿ ಸಾಲದ ಮರುಪಾವತಿಗೆ ಸಂಬಂಧಿಸಿದಂತೆ ಸದಸ್ಯ, ಬ್ಯಾಂಕ್ ಅಥವಾ ಗೃಹ ನಿರ್ಮಾಣ ಸಂಸ್ಥೆ ಮತ್ತು ಇಪಿಎಫ್ಒ ಮಧ್ಯೆ ತ್ರಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಾಗುವುದು.
ಯೋಜನೆ ವಿಸ್ತಾರ
ವಸತಿ ಮತ್ತು ನಗರ ಬಡತನ ನಿರ್ಮೂಲನ ಸಚಿವಾಲಯದ ಅಡಿಯಲ್ಲಿ ಈ ಯೋಜನೆಯನ್ನು ಹೆಚ್ಚಿನ ಫಲಾನುಭವಿಗಳಿಗೆ ತಲುಪುವಂತೆ ವಿಸ್ತರಿಸಲಾಗುವುದು ಎಂದು ಹೇಳಲಾಗಿದೆ.
ಕಾರ್ಮಿಕ ಸಚಿವರ ಹೇಳಿಕೆ
ಇಪಿಎಫ್ ಚಂದಾದಾರರಿಗೆ ಕಡಿಮೆ ವೆಚ್ಚದಲ್ಲಿ ಮನೆ ಒದಗಿಸುವ ಯೋಜನೆಯನ್ನು ಸರ್ಕಾರ ಅನ್ವೇಷಿಸುತ್ತಿದ್ದು, ಈ ಚರ್ಚೆ ಪ್ರಾಥಮಿಕ ಹಂತದಲ್ಲಿದೆ ಎಂದು ಕಾರ್ಮಿಕ ಸಚಿವ ದತ್ತಾತ್ರೇಯ ಬಂಡಾರು ತಿಳಿಸಿದ್ದಾರೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications