ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ 7ನೇ ವೇತನ ಆಯೋಗದ ಅತ್ತುತ್ತಮ ಉಪಯೋಗಕ್ಕಾಗಿ ಸರ್ಕಾರಿ ಉದ್ಯೋಗಿಗಳಿಗಾಗಿ ಎಸ್ಬಿಐ ಪ್ರಿವಿಲೇಜ್ ಗೃಹಸಾಲ ಎಂಬ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದೆ.
PSBs, ಮತ್ತು PSUs ಒಳಗೊಂಡಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ಯೋಗಿಗಳು ಮತ್ತು ಇನ್ನೀತರ ಪಿಂಚಣೆ ಸೇವೆ ಹೊಂದಿರುವ ವ್ಯಕ್ತಿಗಳು ಈ ಗೃಹಸಾಲಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಗೃಹ/ಪ್ಲಾಟ್ ನಿರ್ಮಾಣಕ್ಕೆ ತಗಲುವ ವೆಚ್ಚಕ್ಕೆ ಆಧಾರಿತವಾಗಿ ಅರ್ಜಿದಾರನ ಆದಾಯ, ವಯಸ್ಸು, ಆಸ್ತಿ, ಭಾದ್ಯತೆಗಳು ಮತ್ತು ಮರುಪಾವತಿಯ ಶಕ್ತಿ ಹೀಗೆ ಅನೇಕ ಅಂಶಗಳನ್ನು ಅಳತೆಗೋಲುಗಳನ್ನಾಗಿ ಪರಿಗಣಿಸಿ ಗೃಹಸಾಲವನ್ನು ಮಂಜೂರು ಮಾಡಲು ನಿರ್ಧರಿಸಲಾಗುತ್ತದೆ. (ಗೃಹ ಸಾಲ ಪಡೆಯುವ ಮುನ್ನ ಇಲ್ಲೊಮ್ಮೆ ನೋಡಿ..)
ಇಎಸ್ಬಿಐ ಗೃಹ ಸಾಲದಿಂದ ಸರ್ಕಾರಿ ಉದ್ಯೋಗಿಗಳಿಗೆ ಸಿಗಬಹುದಾದ ೫ ಲಾಭಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಕಡಿಮೆ ಕಂತುಗಳು
ಈ ಹೊಸ ಯೋಜನೆಯ ಅಡಿಯಲ್ಲಿ ಇಎಮ್ಐ ಕಂತುಗಳ ಹೊರೆಯನ್ನು ಕಡಿಮೆ ಮಾಡಲಾಗಿದೆ. ಜತೆಗೆ ನಿವೃತ್ತಿ ನಂತರದ ಅವಧಿಗೂ ಇಎಮ್ಐ ಕಂತುಗಳ ಹೊರೆಯನ್ನು ಕಡಿಮೆ ಮಾಡಲಾಗಿದೆ.
ಇದರಿಂದಾಗಿ ಈ ಹೊಸ ಯೋಜನೆಯಡಿಯಲ್ಲಿ ಸರ್ಕಾರಿ ಉದ್ಯೋಗಿಗಳಿಗೆ ಗೃಹಸಾಲದ ಪ್ರಯೋಜನ ಸಿಗಲಿದೆ.
ಮರುಪಾವತಿಗೆ ಹೆಚ್ಚು ಕಾಲಾವಕಾಶ
ಸಾಮಾನ್ಯವಾಗಿ 70 ವರ್ಷಗಳ ಒಳಗಿನ ಗೃಹಸಾಲ ಯೋಜನೆಗೆ 75 ವರ್ಷಗಳವರೆಗೆ ಅಂದರೆ ಸಾಲ ಮರುಪಾವತಿಗಾಗಿ ಹೆಚ್ಚುವರಿ 5 ವರ್ಷಗಳ ಕಾಲಾವಕಾಶವನ್ನು ನೀಡಲಾಗುತ್ತದೆ. ಸಾಲದ ಅವಧಿ ಗರಿಷ್ಠ 30 ವರ್ಷಗಳವರೆಗೆ ಇರುತ್ತದೆ.
ಪ್ರಕ್ರಿಯಾ ಶುಲ್ಕ ಇಲ್ಲ
ಈ ಹೊಸ ಗೃಹಸಾಲ ಯೋಜನೆಯ ಅಡಿಯಲ್ಲಿ ಯಾವುದೇ ಪ್ರಕ್ರಿಯಾ ಶುಲ್ಕ ಅನ್ವಯಿಸುವುದಿಲ್ಲ. ಆದರೆ, ಕಾನೂನು ನಿಯಮಾನುಸಾರ ವಕೀಲರ ಶುಲ್ಕ, ಮೌಲ್ಯಮಾಪನದ ವರದಿಗಾಗಿ ಮೌಲ್ಯಾಂಕನ ಶುಲ್ಕ, CERSAI and CIBIL ಇತ್ಯಾದಿ ಶುಲ್ಕಗಳು ಸಾಮಾನ್ಯವಾಗಿ ಅನ್ವಯಿಸುತ್ತವೆ ಎಂಬುದನ್ನು ಗಮನಿಸಬೇಕು. ಇನ್ನುಳಿದಂತೆ ಇನ್ನಿತರ ಯಾವುದೇ ಶುಲ್ಕಗಳು ಇರುವುದಿಲ್ಲ.
ಕಡಿಮೆ ಬಡ್ಡಿದರ
ಟೈ-ಅಪ್ (ಸಹಯೋಗದ) ಅಡಿಯಲ್ಲಿ ಬ್ಯಾಂಕಿನೊಂದಿಗೆ ಸರ್ಕಾರ ಚೆಕ್ ಅಪ್ ಸೌಲಭ್ಯ ವಿಸ್ತಾರಿಸಿದಾಗ ಕಡಿಮೆ ಬಡ್ಡಿದರದ ಲಾಭದ ಜತೆಗೆ ಗೃಹ ಸಾಲ ಬಡ್ಡಿದರದ ಮೆಲೆ 5 bps ರಿಯಾಯಿತಿ ಸಿಗುತ್ತದೆ.
ಬದಲಾಯಿಸುವ ಸೌಲಭ್ಯ
ಬೇರೆ ಬ್ಯಾಂಕುಗಳ ಗ್ರಾಹಕರು ತಮ್ಮ ಮನೆ ಸಾಲದ ಮೇಲೆ ಅತ್ಯುತ್ತಮ ಸಮತೋಲನ ಸಾಧಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಗೆ ಸಾಲ ಬದಲಾಯಿಸಲು ಸೌಲಭ್ಯ ಕಲ್ಪಿಸಲಾಗಿದೆ.
ಕೇಂದ್ರ ಸರ್ಕಾರದ ಉದ್ಯೋಗಿಗಳು
14 ಲಕ್ಷ ರಕ್ಷಣಾ ಸಿಬ್ಬಂದಿಗಳು ಒಳಗೊಂಡಂತೆ ಕೇಂದ್ರ ಸರ್ಕಾರದ 47 ಲಕ್ಷ ನೌಕರಸ್ಥರು ಸಂಬಳ ಹೆಚ್ಚಳದ ಲಾಭ ಪಡೆಯಲಿದ್ದಾರೆ. ಹಾಗೂ ಗೃಹಸಾಲ ಯೋಜನೆಯ ಈ ಬಂಪರ್ ಆಫರ್ ನ್ನು ಉಪಯೋಗಪಡಿಸಬಹುದಾಗಿದೆ ಎಂದು ವರದಿಯಾಗಿದೆ.
ಉಳಿತಾಯದಲ್ಲಿ ಹೆಚ್ಚಳ
ಈ ಗೃಹಸಾಲ ಯೋಜನೆ ಅಡಿಯಲ್ಲಿ ಗ್ರಾಹಕರು ದೊಡ್ಡ ಮೊತ್ತದ ಹಣವನ್ನು ಉಳಿತಾಯ ಮಾಡಬಹುದಾಗಿದೆ. ಪ್ರಕ್ರಿಯಾ ಶುಲ್ಕ, ಕಡಿಮೆ ಇಎಮ್ಐ ಕಂತುಗಳು, ಸಾಲ ಪಾವತಿ ಅವಧಿಯಲ್ಲಿ ಹೆಚ್ಚಳ ಹೀಗೆ ಅನೇಕ ಆಯ್ಕೆಗಳು ಗೃಹಸಾಲ ಯೋಜನೆಯಲ್ಲಿ ಪಡೆಯಬಹುದಾಗಿದೆ. ಉಳಿತಾಯ ಮಾಡಲ್ಪಟ್ಟ ಮೊತ್ತವನ್ನು ಹೂಡಿಕೆ ಮಾಡಬಹುದು ಇಲ್ಲವೇ ನಿವೃತ್ತಿ ನಂತರದ ಫಂಡ್ ಆಗಿ ಬಳಸಬಹುದು.
Read More: 7th pay commision


Click it and Unblock the Notifications