ಬಡ್ಡಿದರ ಇಳಿಕೆಯಾಗುವ ಸಂದರ್ಭಗಳಲ್ಲಿ ನಮಗೆ ಹೆಚ್ಚಿನ ಪ್ರತಿಫಲ ಹಾಗೂ ಉತ್ತಮ ಆದಾಯ ಬೇಕಾಗುತ್ತದೆ. ಸಂಶೋಧನೆ ಮತ್ತು ವಿಶ್ಲೇಷಣೆಯ ಪ್ರಕಾರ ಸರ್ಕಾರಿ ಬ್ಯಾಂಕುಗಳು ಠೇವಣಿಗಳ ಮೇಲೆ ಕೇವಲ ಶೇ. 7.5ರಷ್ಟು ಬಡ್ಡಿದರವನ್ನು ಮಾತ್ರ ಒದಗಿಸುತ್ತವೆ. ಇದಕ್ಕಿಂತಲೂ ಹೆಚ್ಚಿನ ಬಡ್ಡಿದರ ಯಾವ ಬ್ಯಾಂಕು/ಕಂಪನಿ ಪಾವತಿಸುತ್ತದೆ ಎಂದು ತುಂಬಾ ಜನರು ಹುಡುಕುತ್ತಿರುತ್ತಾರೆ.
ಸರ್ಕಾರಿ ಬ್ಯಾಂಕುಗಳಿಗೆ ಹೋಲಿಸಿದರೆ ಶೇ. 1 ರಿಂದ 1.5ರಷ್ಟು ಬಡ್ಡಿದರವನ್ನು ಎಎಎ ದರ್ಜೆಯ ಕಂಪನಿಗಳ ಠೇವಣಿಗಳ ಮೇಲೆ ಪಡೆಯಲು ಅವಕಾಶವಿದೆ. ಅಂತಹ ಎಎಎ ದರ್ಜೆಯ ಕಂಪನಿಗಳ ಮಾಹಿತಿ ಇಲ್ಲಿದೆ ನೋಡಿ.
KTDFC (ಕೆಟಿಡಿಎಫ್ಸಿ)
ಈ ಕಂಪನಿಯ ಠೇವಣಿಗಳು ಎಎಎ ದರ್ಜೆಯವು ಅಲ್ಲದಿದ್ದರೂ ಕೇರಳ ಸರ್ಕಾರದೊಂದಿಗೆ 2000 ಕೋಟಿಯ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.
1, 2 ಮತ್ತು 3 ವರ್ಷಗಳ ಅವಧಿಗೆ ಈ ಕಂಪನಿ 8.50% ಬಡ್ಡಿದರವನ್ನು ಪಾವತಿಸುತ್ತದೆ.
ಮೂರು ವರ್ಷದ ಠೇವಣಿಗಳ ಮೇಲೆ 9.64% ಪ್ರತಿಫಲ ಸಿಗುತ್ತದೆ. ಜತೆಗೆ ಐದು ವರ್ಷದ ಸಂಚಿತ ಠೇವಣಿಗಳ ಮೇಲೆ 10% ಪ್ರತಿಫಲವನ್ನು ಪಡೆಯಬಹುದಾಗಿದೆ.1-3 ವರ್ಷಗಳ ಅವಧಿಗೆ 8.50% ಬಡ್ಡಿದರ ಮತ್ತು 4-5 ವರ್ಷಗಳ ಅವಧಿಗೆ 8.25% ಬಡ್ಡಿದರ ಪಡೆಯಬಹುದು. ಈ ಕಂಪನಿಯ ಬಡ್ಡಿದರಗಳನ್ನು ಗಮನಿಸಿದರೆ ಅತ್ಯುತ್ತಮವಾದ ಇಳುವರಿ ನೀಡುತ್ತದೆ ಎಂಬುದರಲ್ಲಿ ಸಂಶಯವಿಲ್ಲ.
ದಿವಾನ್ ಹೌಸಿಂಗ್ ಫೈನಾನ್ಸ್
ದಿವಾನ್ ಹೌಸಿಂಗ್ ಫೈನಾನ್ಸ್ ಕಂಪನಿ ಠೇವಣಿಗಳು ಎಎಎ ದರ್ಜೆಯದ್ದಾಗಿವೆ. ಈ ಕಂಪನಿ 2, 3, 4 ಮತ್ತು 5 ವರ್ಷಗಳ ಅವಧಿಯ ಠೇವಣಿಗಳ ಮೇಲೆ 8.75% ಬಡ್ಡಿದರವನ್ನು ಘೋಷಿಸಿದೆ.
5 ವರ್ಷದ ಠೇವಣಿಗಳ ಮೇಲೆ 10.68% ಹೆಚ್ಚಿನ ಪ್ರತಿಫಲ ಸಿಗುತ್ತದೆ. ಏಕೆಂದರೆ ಇವು ಸಂಯುಕ್ತವಾಗಿರುತ್ತವೆ. ಹಿರಿಯ ನಾಗರಿಕರಿಗೆ ಶೇ.9ರಷ್ಟು ಬಡ್ಡಿದರ ಪಾವತಿಸಲಾಗುತ್ತದೆ. ಎಎಎ ದರ್ಜೆಯ ಕಂಪನಿಗಳ ಠೇವಣಿಗಳ ಮೇಲೆ ಹೂಡಿಕೆ ಮಾಡಲು ಬಯಸುವವರಿಗೆ ಇದು ಉತ್ತಮ ಆಯ್ಕೆ.
ಶ್ರೀರಾಮ್ ಟ್ರಾನ್ಸ್ಪೊರ್ಟ್ ಫೈನಾನ್ಸ್ ಕಂಪನಿ
ಶ್ರೀರಾಮ್ ಫೈನಾನ್ಸ್ ಕಂಪನಿ 4-5 ವರ್ಷದ ಠೇವಣಿಗಳ ಮೇಲೆ ಶೇ. 8.75ರಷ್ಟು ಬಡ್ಡಿದರವನ್ನು ಘೋಷಿಸಿದೆ.
5 ವರ್ಷದ ಠೇವಣಿಗಳ ಮೇಲೆ ಪ್ರತಿಫಲವನ್ನು ಶೇ.10.62ರಷ್ಟು ಆಶ್ಚರ್ಯಕರವಾಗಿ ಪಾವತಿಸುತ್ತದೆ. ಇದು ಸಹ ಎಎಎ ದರ್ಜೆಯ ಕಂಪನಿಯಾಗಿದೆ.
ಮಹೀಂದ್ರಾ ಫೈನಾನ್ಸ್
ಮಹೀಂದ್ರಾ ಫೈನಾನ್ಸ್ ಕೂಡ ಎಎಎ ದರ್ಜೆಯ ಸ್ಥಿರ ಠೇವಣಿಯ ಕಂಪನಿ ಆಗಿದೆ. 1, 2, 3, 4 ಮತ್ತು 5 ವರ್ಷದ ಅವಧಿಯ ಮೇಲೆ ಶೇ 8.45ರಷ್ಟು ಬಡ್ಡಿದರ ಪಾವತಿಸುತ್ತದೆ.
PNB ಹೌಸಿಂಗ್ ಫೈನಾನ್ಸ್
ಈ ಕಂಪನಿ ಸರ್ಕಾರಿ ಮಾಲೀಕತ್ವದ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಸಹಯೋಗ ಸಂಸ್ಥೆಯಾಗಿದೆ. ಈ ಬ್ಯಾಂಕಿನ ಠೇವಣಿಗಳು ಸುರಕ್ಷಿತವಾಗಿದ್ದು ಎಎ ದರ್ಜೆಯವುಗಳಾಗಿವೆ.
36, 48 ಮತ್ತು 60 ತಿಂಗಳ ಠೇವಣಿಗಳ ಮೇಲೆ ಶೇ. 8.25ರಷ್ಟು ಬಡ್ಡಿದರ ಸಿಗುತ್ತದೆ. ಐದು ವರ್ಷದ ಅವಧಿಯ ಠೇವಣಿಗಳು ಶೇ. 10.15ರಷ್ಟು ಪ್ರತಿಫಲ ಒದಗಿಸುತ್ತವೆ.
ಬಜಾಜ್ ಪಿನ್ ಸರ್ವ್
ಬಜಾಜ್ ಪಿನ್ ಸರ್ವ್ ಕಂಪನಿ ಠೇವಣಿಗಳು ಎಎಎ ದರ್ಜೆಯವು ಎಂದೇ ಪ್ರಸಿದ್ದಿ ಪಡೆದಿವೆ. 12 ರಿಂದ 17 ತಿಂಗಳ ಠೇವಣಿಗಳ ಮೇಲೆ ಶೇ. 8.55ರಷ್ಟು ಬಡ್ಡಿದರ ಘೋಷಿಸಿದೆ. ಅಲ್ಲದೆ 18 ರಿಂದ 60 ತಿಂಗಳ ಠೇವಣಿಗಳ ಮೇಲೆ ಶೇ. 8.65ರಷ್ಟು ಬಡ್ಡಿದರ ಪಾವತಿಸುತ್ತದೆ.
ಸಂಯುಕ್ತತೆಯಿಂದಾಗಿ ಇಳುವರಿ ಹೆಚ್ಚಾಗಿರುತ್ತದೆ.
HDFC ಠೇವಣಿಗಳು
ಇದೊಂದು ಪ್ರಮುಖ ಹಣಕಾಸು ಸಂಸ್ಥೆಯಾಗಿದ್ದು, ಠೇವಣಿಗಳು ಎಎಎ ದರ್ಜೆಯವುಗಳಾಗಿವೆ.
15 ತಿಂಗಳ ಠೇವಣಿಗಳ ಮೇಲೆ ಶೇ. 7.85ರಷ್ಟು ಬಡ್ಡಿದರವನ್ನು ಕಬಳಿಸಬಹುದು. ಜತೆಗೆ 22 ತಿಂಗಳ ಠೇವಣಿಗಳ ಮೇಲೆ ಶೇ. 8.90ರಷ್ಟು ಮತ್ತು 30 ತಿಂಗಳ ಮೇಲೆ ಶೇ. 7.85ರಷ್ಟು ಬಡ್ಡಿದರದ ಲಾಭ ಪಡೆಯಬಹುದು.
ಹಕ್ಕುತ್ಯಾಗ
ಈ ಲೇಖನವನ್ನು ಖರೀದಿಸಲು, ಇನ್ನೀತರ ಹಣಕಾಸು ಸಾಧನಗಳಲ್ಲಿ ಅಥವಾ ಭದ್ರತೆಗಳಲ್ಲಿ ಮಾರಾಟ ಮಾಡಲು ಆಗುವುದಿಲ್ಲ. ಈ ಲೇಖನದ ಮಾಹಿತಿ ಆಧಾರದಲ್ಲಿ ಉಂಟಾಗುವ ನಷ್ಟ ಅಥವಾ ಹಾನಿಗೆ ಸಂಬಂಧಿಸಿದಂತೆ ಗ್ರೇನಿಯಂ ಇನ್ಫರ್ಮೇಶನ್ ಟೆಕ್ನಾಲೋಜಿಸ್ ಪ್ರೈ.ಲಿ, ಅದರ ಅಂಗಸಂಸ್ಥೆಗಳು ಮತ್ತು ಸಹವರ್ತಿಗಳು ಜವಾಭ್ಧಾರಿ ಆಗಿರುವುದಿಲ್ಲ.
ಕಂಪನಿ ನಿಶ್ಚಿತ ಠೇವಣಿಗಳ ಮೇಲೆ ಹೂಡಿಕೆ ಮಾಡುವ ಮುನ್ನ ವೃತ್ತಿಪರರ ಸಹಾಯ ಪಡೆದು ಮುನ್ನಡೆಯುವುದು ಉತ್ತಮ ನಡೆಯಾಗಿರುತ್ತದೆ.
Read More: Check Gold Rates in Bangalore


Click it and Unblock the Notifications