ಆರ್ಥಿಕತೆಯಲ್ಲಿ ಬಡ್ಡಿದರಗಳು ತ್ರೈಮಾಸಿಕಕ್ಕೆ ಅನುಗುಣವಾಗಿ ಏರಿಕೆ ಇಳಿಕೆ ಕಾಣುವುದು ಸಹಜ ಪ್ರಕ್ರಿಯೆ. ಸಾಮಾನ್ಯವಾಗಿ ತೆರಿಗೆ ಹೊಣೆಗಾರಿಕೆ ನಂತರ ಬ್ಯಾಂಕು ಬಡ್ಡಿ ಆದಾಯ ಯಾವಾಗಲೂ ಸಿಪಿಐ ಹಣದುಬ್ಬರಕ್ಕೆ ಸರಿಸಮವಾಗಿರುತ್ತದೆ. ಇದರಿಂದಾಗಿ ಸರ್ಕಾರಿ ಬ್ಯಾಂಕುಗಳಲ್ಲಿ ಸ್ಥಿರ ಠೇವಣಿಗಳ ಮೇಲೆ ಸಲ್ಪ ಹೆಚ್ಚಿನ ಮಟ್ಟದ ಆದಾಯ ಪಡೆಯುವ ಅವಕಾಶ ಇರುತ್ತದೆ.
ಸರ್ಕಾರಿ ಬ್ಯಾಂಕುಗಳಲ್ಲಿ ಠೇವಣಿಗಳನ್ನು ಇಡುವುದು ಸುರಕ್ಷತೆ ಮತ್ತು ಸುಭದ್ರತೆ ದೃಷ್ಟಿಯಿಂದ ತುಂಬಾ ಒಳಿತು. ಹೀಗಾಗಿ ತುಂಬಾ ಜನರು ಸರ್ಕಾರಿ ಬ್ಯಾಂಕುಗಳ ಸ್ಥಿರ ಠೇವಣಿಗಳನ್ನು ಆಯ್ಕೆ ಮಾಡಲು ಬಯಸುತ್ತಾರೆ.
ಹೀಗಾಗಿ ನಮ್ಮಲ್ಲಿ ಪ್ರತಿಯೊಬ್ಬರಿಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಠೇವಣಿಗಳ ಮೇಲೆ ಹೆಚ್ಚು ಬಡ್ಡಿದರ ಕೊಡುವ ಬ್ಯಾಂಕುಗಳು ಯಾವವು? ಯಾವ ಪ್ರಮಾಣದಲ್ಲಿ ಬಡ್ಡಿದರ ನೀಡುತ್ತವೆ? ಡಿಪಾಸಿಟ್ಸ್ ಇಡಲು ಯಾವ ಬ್ಯಾಂಕುಗಳನ್ನು ಆಯ್ಕೆ ಮಾಡಬೇಕು? ಇತ್ಯಾದಿ ಗೊಂದಲಗಳು ಇದ್ದೆ ಇರುತ್ತವೆ. (9 ಹಣಕಾಸು ಸಲಹೆ: ದಂಪತಿಗಳು ಪಾಲಿಸಿದರೆ ಬಾಳು ಬಂಗಾರ...)
ಅದಕ್ಕೆ ಅನುಗುಣವಾಗಿ ನಿಮ್ಮಲ್ಲಿನ ಗೊಂದಲಗಳನ್ನು ಪರಿಹರಿಸಲು ಹೆಚ್ಚು ಆದಾಯ ಕೊಡಬಲ್ಲ ಸರ್ಕಾರಿ ಬ್ಯಾಂಕುಗಳ ಸ್ಥಿರ ಠೇವಣಿಗಳ ಪರಿಚಯ ಇಲ್ಲಿ ಕೊಡಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು
ಎಸ್ಬಿಎಂ ಬ್ಯಾಂಕು ಸ್ಥಿರ ಠೇವಣಿಗಳ 1-2 ವರ್ಷಗಳ ಅವಧಿಯ ಮೇಲೆ ಶೇ. 7.60ರಷ್ಟು ಬಡ್ಡಿದರವನ್ನು ಪಾವತಿಸುತ್ತದೆ. ಇದು ಸರ್ಕಾರಿ ಬ್ಯಾಂಕುಗಳು ಒದಗಿಸುವ ಬಡ್ಡಿದರಗಳಲ್ಲಿ ಅತಿ ಹೆಚ್ಚಿನ ಬಡ್ಡಿದರವಾಗಿದೆ.
ಯುನಿಯನ್ ಬ್ಯಾಂಕ್ ಆಫ್ ಇಂಡಿಯ
ಯುನಿಯನ್ ಬ್ಯಾಂಕು ಸ್ಥಿರ ಠೇವಣಿಗಳ 1-3 ವರ್ಷಗಳ ಅವಧಿಯ ಮೇಲೆ ಶೇ. 7.55ರಷ್ಟು ಬಡ್ಡಿದರವನ್ನು ಕೊಡಬಲ್ಲದು. ಎಸ್ಬಿಎಂ ನಂತರ ಹೆಚ್ಚು ಬಡ್ಡಿದರ ಕೊಡುವ ಸರ್ಕಾರಿ ಬ್ಯಾಂಕು.
ಜತೆಗೆ 3-5 ವರ್ಷಗಳ ಅವಧಿ ಮೇಲೆ ಶೇ. 7.50ರಷ್ಟು ಬಡ್ಡಿದರವನ್ನು ಈ ಬ್ಯಾಂಕು ಪಾವತಿಸುತ್ತದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರ ಮಹಾನಿಧಿ ಡಿಪಾಸಿಟ್ಸ್
ಮಹಾರಾಷ್ಟ್ರ ಮಹಾನಿಧಿ ಡಿಪಾಸಿಟ್ಸ್ ಬ್ಯಾಂಕು ೪೪೪ ದಿನಗಳ ಅವಧಿ ಮೇಲೆ ಶೇ. 7.51ರಷ್ಟು ಬಡ್ಡಿದರ ಪಾವತಿಸುತ್ತದೆ.
ಬಹುತೇಕ ಸರ್ಕಾರಿ ಬ್ಯಾಂಕುಗಳು ನೀಡುವ ಬಡ್ಡಿದರಕ್ಕಿಂತಲೂ ಹೆಚ್ಚಿನ ಆದಾಯ ಇದಾಗಿದೆ ಎಂದು ಹೇಳಬಹುದು.
ಐಡಿಬಿಐ ಬ್ಯಾಂಕು
1-3 ವರ್ಷಗಳ ಅವಧಿಯ ಹೂಡಿಕೆ ಮೇಲೆ ಈ ಬ್ಯಾಂಕು ಶೇ. 7.50ರಷ್ಟು ಬಡ್ಡಿದರವನ್ನು ಪಾವತಿಸುತ್ತದೆ.
ಬೇರೆ ಕಡೆಗಳಲ್ಲಿ 1-3 ವರ್ಷಗಳ ಅವಧಿ ಸ್ಥಿರ ಠೇವಣಿಗಳ ಅವಧಿ ಮೇಲೆ ಹೂಡಿಕೆ ಮಾಡಿದರೆ ಇದಕ್ಕಿಂತಲೂ ಕಡಿಮೆ ಬಡ್ಡಿದರ ಇರುತ್ತದೆ.
ಕೆನರಾ ಬ್ಯಾಂಕು
ಒಂದರಿಂದ ಎರಡು ವರ್ಷಗಳ ಅವಧಿ ಮೇಲೆ ಕೆನರಾ ಬ್ಯಾಂಕು ಶೇ. 7.50ರಷ್ಟು ಬಡ್ಡಿದರವನ್ನು ಒದಗಿಸುತ್ತದೆ.
ರೂ. 10,000 ಕ್ಕಿಂತಲೂ ಹೆಚ್ಚಿನ ಬಡ್ಡಿ ಮೇಲೆ ಟಿಡಿಎಸ್ ಕಡಿತವಾಗುತ್ತದೆ ಎಂಬುದನ್ನು ಗಮನದಲ್ಲಿಡಬೇಕು.
ಕಾರ್ಪೊರೇಷನ್ ಬ್ಯಾಂಕು
ಒಂದಕ್ಕಿಂತಲೂ ಹೆಚ್ಚು ಮತ್ತು ಮೂರಕ್ಕಿಂತಲೂ ಕಡಿಮೆ ವರ್ಷಗಳ ಅವಧಿ ಮೇಲೆ ಕಾರ್ಪೊರೇಷನ್ ಬ್ಯಾಂಕು ಶೇ. 7.50ರಷ್ಟು ಬಡ್ಡಿದರ ಪಾವತಿಸುತ್ತದೆ.
ದೇಶದ ಬೇರೆ ಬ್ಯಾಂಕುಗಳಿಗೆ ಹೋಲಿಸಿದರೆ ಇದು ಉತ್ತಮವಾದ ಬಡ್ಡಿದರ ಎಂಬುದರಲ್ಲಿ ಎರಡು ಮಾತಿಲ್ಲ.
ಇತರೆ
ಇವುಗಳನ್ನು ಹೊರತುಪಡಿಸಿ ಇನ್ನಿತರ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಸಾಮಾನ್ಯವಾಗಿ ಠೇವಣಿಗಳ ಮೇಲೆ ಶೇ. 7-7.4ರಷ್ಟು ಬಡ್ಡಿದರವನ್ನು ಪಾವತಿಸುತ್ತವೆ.
ಜತೆಗೆ ಖಾಸಗಿ ವಲಯದ ಕೆಲ ಬ್ಯಾಂಕುಗಳು ಸಹ ಇದೆ ತರಹದ ಬಡ್ಡಿದರವನ್ನು ಒದಗಿಸುತ್ತಿವೆ.


Click it and Unblock the Notifications