For Quick Alerts
ALLOW NOTIFICATIONS  
For Daily Alerts

ಗೃಹ ಸಾಲ ಪಡೆಯುವ ಮುನ್ನ ಇಲ್ಲೊಮ್ಮೆ ನೋಡಿ

By Siddu Thorat
|

ಮನೆ ಕಟ್ಟಿ ನೋಡು ಒಮ್ಮೆ ಮದುವೆ ಮಾಡಿ ನೋಡು ಎಂಬುದು ಜನಪ್ರಿಯ ಗಾದೆ ಮಾತು. ಜೀವನ ಪೂರ್ತಿ ಬಾಡಿಗೆ ಮನೆಯಲ್ಲಿ ಇರುವುದೆಂದರೆ ಯಾರಿಗಾದರೂ ಬೇಸರ. ಸ್ವಂತ ಮನೆಯಲ್ಲಿ ಇರುವ ಆನಂದ, ತೃಪ್ತಿ, ಸುಖ ಬಾಡಿಗೆ ಮನೆಯಲ್ಲಿ ಸಿಗಲ್ಲ. ಹೀಗಾಗಿ ಪ್ರತಿಯೊಬ್ಬರಲ್ಲೂ ಒಂದು ಸ್ವಂತ ಮನೆ ಕಟ್ಟಿಸಬೇಕು ಎಂಬ ಆಸೆ ಇದ್ದೆ ಇರತ್ತೆ ಅಲ್ಲವಾ?

ಆದರೆ ಅಷ್ಟೊಂದು ಹಣ ಇರುವುದಿಲ್ಲ. ಕನಸು ನನಸು ಮಾಡಲು ಸಾಧ್ಯ ಆಗುವುದಿಲ್ಲ. ಹಾಗಂತ ನಿರಾಶರಾಗಬೇಕಾಗಿಲ್ಲ. ಗೃಹಸಾಲಕ್ಕಾಗಿ ಅನೇಕ ಬ್ಯಾಂಕುಗಳು, ಕಂಪನಿಗಳು ಸಾಲವನ್ನು ಒದಗಿಸುತ್ತಿವೆ.

ಸಾಲವನ್ನು ಪಡೆಯುವಾಗ ಅನೇಕ ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ. ಅರ್ಜಿಯಲ್ಲಿ ತಪ್ಪು ಮಾಹಿತಿ ನಮೂದಾಗಿದಲ್ಲಿ ಅಥವಾ ಸರಿಯಾಗಿ ಭರ್ತಿ ಮಾಡದಿದ್ದಲ್ಲಿ ಗೃಹಸಾಲದ ಅರ್ಜಿ ತಿರಸ್ಕೃತವಾಗುತ್ತದೆ. ಗೃಹಸಾಲವನ್ನು ತಿಂಗಳ ಕಂತುಗಳಲ್ಲಿ ಇಎಮ್ಐ (EMI) ಕಟ್ಟಲು ಅವಕಾಶಗಳಿರುತ್ತವೆ. (ಅತಿ ಹೆಚ್ಚು ಗೃಹ ಸಾಲ ಪಡೆಯಲು ಏನು ಮಾಡಬೇಕು?)

ಹೀಗಾಗಿ ನೀವೂ ಗೃಹಸಾಲ ಪಡೆಯಲು ಬಯಸಿದಲ್ಲಿ ಸಂಭವಿಸುವ ಸಾಮಾನ್ಯ ಮತ್ತು ಸಣ್ಣಪುಟ್ಟ ತಪ್ಪುಗಳನ್ನು ತಪ್ಪಿಸಬೇಕು. ಇಲ್ಲದಿದ್ದರೆ ಅರ್ಜಿಗಳು ತಿರಸ್ಕೃತಗೊಳ್ಳುತ್ತವೆ.

ಗೃಹಸಾಲ ಪಡೆಯುವ ಸಂದರ್ಭದಲ್ಲಿ ಉಂಟಾಗಬಹುದಾದ ಕೆಲ ತಪ್ಪುಗಳು ಯಾವವು ಮತ್ತು ಅವನ್ನು ಹೇಗೆ ತಪ್ಪಿಸಬೇಕೆಂಬುದನ್ನು ಇಲ್ಲಿ ನೀಡಲಾಗಿದೆ. (ಸಾವಿನ ಬಳಿಕ ನಿಮ್ಮ ಸಾಲ ತೀರಿಸುವವರು ಯಾರು?)

ಸಾಲ ಪಾವತಿ ಸಾಮರ್ಥ್ಯ

ಸಾಲ ಪಾವತಿ ಸಾಮರ್ಥ್ಯ

ಸಾಲ ಮರುಪಾವತಿಯ ಸಾಮರ್ಥ್ಯದ ಆಧಾರದ ಮೇಲೆ ಬ್ಯಾಂಕುಗಳು ಸಾಲವನ್ನು ಅಂಗೀಕಾರ ಮಾಡುತ್ತವೆ. ಹೀಗಾಗಿ ಸಾಲ ಪಡೆಯುವ ವ್ಯಕ್ತಿ ಸಾಲ ಹಿಂತಿರುಗಿಸಲು ಸಮರ್ಥನಾಗಿದ್ದಾನೆಯೇ ಇಲ್ಲವೇ ಎಂಬುದನ್ನು ಕೆಲ ಮಾನದಂಡಗಳ ಮೂಲಕ ತಿಳಿದುಕೊಳ್ಳುತ್ತಾರೆ. ವ್ಯಕ್ತಿ ಸಾಲ ಹಿಂತಿರುಗಿಸಲು ಸಮರ್ಥನಾಗಿಲ್ಲದಿದ್ದಲ್ಲಿ ಗೃಹ ಸಾಲದ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ. ಹೀಗಾಗಿ ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ಮೊದಲ ಹಂತದಲ್ಲಿ ಗಮನಿಸಬೇಕು.

ಬ್ಯಾಂಕುಗಳ ಬಗ್ಗೆ ತಿಳಿದುಕೊಳ್ಳಿ

ಬ್ಯಾಂಕುಗಳ ಬಗ್ಗೆ ತಿಳಿದುಕೊಳ್ಳಿ

ಸಾಲ ತೆಗೆದುಕೊಳ್ಳಬೇಕೆಂದು ಬಯಸಿರುವ ಬ್ಯಾಂಕಿನ ಸೇವೆಯ ಬಗ್ಗೆ ಈಗಾಗಲೇ ಸಾಲ ತೆಗೆದುಕೊಂಡಿರುವವರಿಂದ ಮಾಹಿತಿ ಪಡೆದುಕೊಳ್ಳಬೇಕು. ಬಡ್ಡಿದರದ ಆಧಾರದ ಮೇಲೆ ಬ್ಯಾಂಕನ್ನು ಯಾವತ್ತು ಆಯ್ಕೆ ಮಾಡಬಾರದು. ಬದಲಾಗಿ ಸ್ವತ್ತು ಸ್ವಾಧೀನ ಶುಲ್ಕಗಳು, ಕಾನೂನು ಶುಲ್ಕಗಳು, ಪ್ರಕ್ರಿಯಾ ಶುಲ್ಕ ಮತ್ತು ಇನ್ನೀತರ ವಿಚಾರಗಳನ್ನು ತಿಳಿದುಕೊಂಡು ಸಾಲ ಪಡೆಯಲು ಮುಂದಾಗಿ.

ಪೂರ್ವ ಅನುಮೋದಿತ ಗೃಹ ಸಾಲ

ಪೂರ್ವ ಅನುಮೋದಿತ ಗೃಹ ಸಾಲ

ಪೂರ್ವ ಅನುಮೋದಿತ ಗೃಹ ಸಾಲ ತೆಗೆದುಕೊಳ್ಳುವ ಮುಖ್ಯವಾದ ಲಾಭವೆಂದರೆ ಅದು ಈಗಾಗಲೇ ಮಂಜೂರು ಆಗಿರುತ್ತದೆ ಎನ್ನುವುದಾಗಿದೆ. ಇದರಿಂದಾಗಿ ಗೃಹ ಸಾಲದ ಅರ್ಹತೆ ಆಧರಿಸಿ ಚೌಕಾಸಿ ಮಾಡುವ ಸಂಭವವಿರುತ್ತದೆ. ಹೀಗಾಗಿ ಪೂರ್ವ ಅನುಮೋದಿತ ಗೃಹ ಸಾಲ ಪಡೆಯುವಾಗ ಹುಷಾರಾಗಿ ಇರಬೇಕಾಗುತ್ತದೆ. ಇಲ್ಲದಿದ್ದರೆ ಕಿರಿಕಿರಿ ತಪ್ಪಿದ್ದಲ್ಲ.

ಹೆಚ್ಚಿನ ಸಾಲದ ಮೊತ್ತದ ಆದ್ಯತೆ

ಹೆಚ್ಚಿನ ಸಾಲದ ಮೊತ್ತದ ಆದ್ಯತೆ

ಬ್ಯಾಂಕಿನ ನಿಯಮದ ಪ್ರಕಾರ ನೀವು ಸಾಲ ಪಡೆಯಲು ಅರ್ಹರಾಗಿದ್ದಿರಿ ಎಂದ ಮಾತ್ರಕ್ಕೆ ಹೆಚ್ಚಿನ ಮೊತ್ತದ ಸಾಲವನ್ನು ಪಡೆಯಲು ಮುಂದಾಗಬೇಡಿ. ನಿಮ್ಮ ಇನ್ನಿತರ ಆದ್ಯತೆ ಮತ್ತು ಇಎಮ್ಐ ಮೊತ್ತವನ್ನು ಗಮನಿಸಿ ಸಾಲ ಪಡೆಯಿರಿ.

ಸಾಲ ಒಪ್ಪಂದ

ಸಾಲ ಒಪ್ಪಂದ

ಗೃಹ ಸಾಲಕ್ಕಾಗಿ ಅರ್ಜಿ ಸಲ್ಲಿಸುವಾಗ ಅನೇಕ ನಿಯಮ, ಒಪ್ಪಂದ, ಕರಾರು ಮತ್ತು ದಾಖಲಾತಿ ಪ್ರಕ್ರಿಯೆಗಳ ಮೂಲಕ ಮುನ್ನಡೆಯಬೇಕಾಗುತ್ತದೆ. ಹೀಗಾಗಿ ಸಹಿ ಮಾಡುವ ಮುನ್ನ, ಕರಾರಿಗೆ ಒಪ್ಪುವ ಮುನ್ನ ನಿಯಮ ಮತ್ತು ಷರತ್ತುಗಳನ್ನು ಅರ್ಥೈಸಿಕೊಂಡು ಸಹಿ ಮಾಡಬೇಕಾಗುತ್ತದೆ.

ಕ್ರೆಡಿಟ್ ಕಾರ್ಡುಗಳ ಬಳಕೆ

ಕ್ರೆಡಿಟ್ ಕಾರ್ಡುಗಳ ಬಳಕೆ

ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ವೈಯಕ್ತಿಕ ಸಾಲವನ್ನು ಪಡೆಯುವುದು ಮತ್ತು ಕ್ರೆಡಿಟ್ ಕಾರ್ಡ್ ಸಾಲಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಇಲ್ಲದಿದ್ದರೆ ಇದು ನಿಮ್ಮ ಸಾಲ ಪಡೆಯುವ ಸಾಮರ್ಥ್ಯವನ್ನು ಹಾಗೂ ಮಾನಸಿಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ.

ಗೃಹಸಾಲ ವಿಮೆ

ಗೃಹಸಾಲ ವಿಮೆ

ನಿಮ್ಮ ನಿಧನದ ನಂತರ ನಿಮ್ಮ ಮಕ್ಕಳು ಅಥವಾ ಕುಟುಂಬದವರು ಇಎಮ್ಐ(EMI) ಕೊನೆಗೊಳ್ಳುವವರೆಗೆ ಸಾಲ ಪಾವತಿಸುವುದು ಇಷ್ಟವಿಲ್ಲದಿದ್ದಲ್ಲಿ ಗೃಹಸಾಲ ವಿಮೆ ಮಾಡಿಸಿಕೊಳ್ಳುವುದು ಉತ್ತಮ. ಜೀವ ವಿಮೆ ಮತ್ತು ಆರೋಗ್ಯ ವಿಮೆಗಳನ್ನು ಮಾಡಿಸುವುದರಿಂದ ಇಂತಹ ಸಂದರ್ಭಗಳಲ್ಲಿ ಯಾರ ಮೇಲೂ ಹೆಚ್ಚಿನ ಹೊರೆ ಬೀಳುವುದಿಲ್ಲ. ಜತೆಗೆ ಸಾಲ ಮರುಪಾವತಿಯೂ ಕಷ್ಟಕರವಲ್ಲ.

English summary

7 Common Home Loan Mistakes To Avoid

Many individuals apply for a home loan only to realize that their application is rejected due to some error which could have been avoided. With low-interest rates prevailing in the market, individuals can afford the Equated Monthly Installment (EMI) along with other expenses.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X