ಅಡಿಷನಲ್ ಲೈಫ್ ಇನ್ಸೂರೆನ್ಸ್ ಯಾಕೆ ಮಾಡಿಸಬೇಕು?

ಹೆಚ್ಚುವರಿ ಲೈಫ್ ಇನ್ಸೂರೆನ್ಸ್ ಗಳನ್ನು ಖರೀದಿಸುವ ಬಗ್ಗೆ ಕೂಡ ನಮ್ಮ ನಿಲುವು ಬದಲಾಯಿಸಬೇಕಾಗುತ್ತದೆ. ಪ್ರತಿಯೊಬ್ಬರಿಗೂ ಅವರ ತಿಂಗಳ ಆದಾಯದಲ್ಲಿ ಕಡಿಮೆಯೆಂದರೂ ಐದಾರು ಬಾರಿ ಇನ್ಸೂರೆನ್ಸ್ ಕವರ್ ಮಾಡಬೇಕಾಗುತ್ತೆ ಎನ್ನುವುದು ತಜ್ಞರ ಅಭಿಮತ.

ಎಲ್ಲರ ಬದುಕಿನಲ್ಲೂ ಜೀವ ವಿಮೆ ನಿರ್ವಹಿಸುವ ಪಾತ್ರ ಹಾಗೂ ಮಹತ್ವದ ಬಗ್ಗೆ ನಮ್ಮೆಲ್ಲರಿಗೂ ಗೊತ್ತಿದೆ. ಅದರಲ್ಲೂ ಹೆಚ್ಚುವರಿ ಲೈಫ್ ಇನ್ಸೂರೆನ್ಸ್ ಗಳನ್ನು ಖರೀದಿಸುವ ಬಗ್ಗೆ ಕೂಡ ನಮ್ಮ ನಿಲುವು ಬದಲಾಯಿಸಬೇಕಾಗುತ್ತದೆ.

ಪ್ರತಿಯೊಬ್ಬರಿಗೂ ಅವರ ತಿಂಗಳ ಆದಾಯದಲ್ಲಿ ಕಡಿಮೆಯೆಂದರೂ ಐದಾರು ಬಾರಿ ಇನ್ಸೂರೆನ್ಸ್ ಕವರ್ ಮಾಡಬೇಕಾಗುತ್ತೆ ಎನ್ನುವುದು ತಜ್ಞರ ಅಭಿಮತ.

ಇದು ಕುಟುಂಬಕ್ಕೆ ಹಣಕಾಸು ಸುಭದ್ರತೆ, ಸುರಕ್ಷತೆ ನೀಡುತ್ತದೆ. ಅನಾರೋಗ್ಯ, ಅಪಘಾತ, ಶಿಕ್ಷಣ, ಮನೆ ನಿರ್ಮಾಣ ಹಾಗೂ ಸಾಲ ತೀರಿಸಲು ಮಹತ್ವದ ಪಾತ್ರ ವಹಿಸಬಲ್ಲದು. ಬೆಸ್ಟ್ 8 ಲೈಪ್ ಇನ್ಸೂರೆನ್ಸ್ ಪಾಲಿಸಿಗಳು

ಹೆಚ್ಚುವರಿ ಲೈಫ್ ಇನ್ಸೂರೆನ್ಸ್ ಗಳನ್ನು ಯಾಕೆ ಖರೀದಿಸಬೇಕು ಎಂಬುದಕ್ಕೆ 5 ಪ್ರಮುಖ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ ತಪ್ಪದೆ ನೋಡಿ...

1. ನಿಮ್ಮ ಮದುವೆ ಆಗಿದ್ದೇಯೆ?

1. ನಿಮ್ಮ ಮದುವೆ ಆಗಿದ್ದೇಯೆ?

ಮದುವೆ ಆಗಿರುವ ಎಲ್ಲ ದಂಪತಿಗಳು ಅಡಿಷನಲ್ ಲೈಫ್ ಇನ್ಸೂರೆನ್ಸ್ ಖರೀದಿಸುವುದು ತುಂಬಾ ಮುಖ್ಯವಾಗಿರುತ್ತದೆ. ಅದರಲ್ಲೂ ನಿಮ್ಮ ಸಂಗಾತಿ ಕೆಲಸ ಮಾಡುತ್ತಿದ್ದರೆ ಅವನು/ಅವಳು ಹಣಕಾಸು ಬೆಂಬಲವನ್ನು ನಿಮ್ಮಿಂದ ಬಯಸುತ್ತಾರೆ. ಹೀಗಾಗಿ ಅವಶ್ಯವಾಗಿ ಇನ್ಸೂರೆನ್ಸ್‌ ಪಾಲಿಸಿಯನ್ನು ಖರೀದಿಸಲು ಮರೆಯದಿರಿ.

2. ನೀವು ಪೋಷಕರಾಗುತ್ತಿದ್ದಿರಾ?

2. ನೀವು ಪೋಷಕರಾಗುತ್ತಿದ್ದಿರಾ?

ಮಗುವಿನ ಜನನದ ನಂತರ ಪ್ರತಿ ಪೋಷಕರ ಜವಾಬ್ಧಾರಿಗಳು ದುಪ್ಪಟ್ಟು ಹೆಚ್ಚಾಗುತ್ತವೆ. ದಿನನಿತ್ಯದ ಖರ್ಚುವೆಚ್ಚಗಳು, ಆರೋಗ್ಯ-ಆರೈಕೆ ಖರ್ಚುಗಳು ವಿಪರಿತವಾಗಿ ಏರಿಕೆಯಾಗುತ್ತವೆ. ಹೀಗಾಗಿ ಕುಟುಂಬದ ಹೊಸ ಸದಸ್ಯನಾಗಿರುವ ನಿಮ್ಮ ಮಗುವಿಗೆ ವಿಮಾ ರಕ್ಷಣೆ ತಪ್ಪದೆ ಮಾಡಿಸಿ. ಅದು ನಿಮ್ಮ ಮಗುವಿನ ಶಿಕ್ಷಣ ಹಾಗೂ ಮದುವೆ ಸಂದರ್ಭಗಳಲ್ಲಿ ನೆರವಿಗೆ ಬರುತ್ತದೆ.

3. ಪಾಲಕರು ನಿವೃತ್ತಿಯಾಗಿದ್ದಾರೆಯೆ?

3. ಪಾಲಕರು ನಿವೃತ್ತಿಯಾಗಿದ್ದಾರೆಯೆ?

ಇದು ತುಂಬಾ ಮುಖ್ಯವಾಗಿರುವ ವಿಚಾರವಾಗಿದೆ. ಏಕೆಂದರೆ ಪ್ರತಿಯೊಬ್ಬರ ತಂದೆ-ತಾಯಿಗಳ ಹಣಕಾಸು ಭದ್ರತೆ-ಸುರಕ್ಷತೆ ಮಹತ್ವದ್ದಾಗಿರುತ್ತದೆ. ನಿಮ್ಮನ್ನು ಅವಲಂಬಿಸಿರುವ ನಿಮ್ಮ ಪಾಲಕರು ನಿವೃತ್ತಿಯಾಗಿದ್ದಲ್ಲಿ ಅಥವಾ ಕೆಲಸ ಮಾಡುವುದನ್ನು ನಿಲ್ಲಿಸಿದಲ್ಲಿ ಅಥವಾ ಕಾರಣಾಂತರಗಳಿಂದ ಆದಾಯ ಕಡಿಮೆಯಾದಲ್ಲಿ ಅವರ ಹೆಸರಿನಲ್ಲಿ ಅಡಿಷನಲ್ ಲೈಫ್ ಇನ್ಸೂರೆನ್ಸ್ ತಪ್ಪದೆ ಮಾಡಿಸಿ ಭದ್ರತೆ ಒದಗಿಸುವುದು ಮಕ್ಕಳ ಕರ್ತವ್ಯ.

4. ಬಿಗ್ ಟಿಕೆಟ್ ಲೋನ್

4. ಬಿಗ್ ಟಿಕೆಟ್ ಲೋನ್

ನಿಮಗೆ ಆಕಸ್ಮಿಕವಾಗಿ ಏನಾದರೂ ಅಪಾಯ ಸಂಭವಿಸಿದಲ್ಲಿ ನಿಮ್ಮನ್ನು ಅವಲಂಬಿಸಿರುವ ಕುಟುಂಬಕ್ಕೆ ಸಿಡಿಲು ಬಡಿದಂತಾಗುತ್ತದೆ. ಏನು ಮಾಡಬೇಕೆಂಬುದು ತೋಚದಂತಾಗುತ್ತದೆ. ಅಂತಹ ಸಂದರ್ಭದಲ್ಲಿ ಸರಳ ತಿಂಗಳ ಕಂತು(EMI) ಪಾವತಿಸಲು ಸಾಕಾಗುವಷ್ಟು ಹಣ ಇರುವುದಿಲ್ಲ. ಆಗ ಸಾಲಕ್ಕೆ ಸಮನಾದ ವಿಮಾ ರಕ್ಷಣೆಯನ್ನು ಪಡೆಯಬೇಕು. ಅಂದರೆ ನಿಮ್ಮ ಸಾಲದ ಪ್ರಮಾಣ ಐದು ಲಕ್ಷ ಆದಲ್ಲಿ ಆ ಮೊತ್ತಕ್ಕೆ ಸಮನಾದ ರಕ್ಷಣೆಯನ್ನು ಪಡೆಯುವುದು.

5. ಬಿಸಿನೆಸ್ ಪ್ರಾರಂಭಿಸಿ

5. ಬಿಸಿನೆಸ್ ಪ್ರಾರಂಭಿಸಿ

ಒಂದು ವೇಳೆ ನೀವು ಕೆಲಸವನ್ನು ಬಿಟ್ಟಿದಲ್ಲಿ ಅಥವಾ ವಜಾಗೊಂಡಲ್ಲಿ ಸಂಘಟಿತ ವಲಯದಲ್ಲಿ ನೌಕರರು ಪಡೆಯುವ ಅನೇಕ ಪ್ರಯೋಜನಗಳನ್ನು ನೀವು ಕಳೆದುಕೊಳ್ಳುತ್ತಿರಿ. ಅಂತಹ ಸಂದರ್ಭದಲ್ಲಿ ಎದೆಗುಂದದೆ ನಿಮ್ಮದೆಯಾದ ಬಿಸಿನೆಸ್ ಪ್ರಾರಂಬಿಸಿ ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳಿ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+