For Quick Alerts
ALLOW NOTIFICATIONS  
For Daily Alerts

ನಂಬಲು ಸಾಧ್ಯವಿಲ್ಲ! ಈ ವಿಮೆಗಳೂ ಭಾರತದಲ್ಲಿ ಲಭ್ಯ..

ನಮ್ಮ ಜೀವನ, ಆರೋಗ್ಯ, ವಾಹನ, ಮನೆ, ಮಕ್ಕಳ ಭವಿಷ್ಯ ಇತ್ಯಾದಿ ವಿಮೆಗಳನ್ನು ಮಾಡಿಸುವುದು ಸಾಮಾನ್ಯ. ಆದರೆ ಇದನ್ನು ಹೊರತುಪಡಿಸಿ ತುಂಬಾ ಮೌಲ್ಯಯುತವಾಗಿರುವ ನಿಮ್ಮ ದೇಹ ಎಂಬ ಆಸ್ತಿ ಮೇಲೆ ವಿಮೆ ಮಾಡಿಸುತ್ತಿದ್ದಿರಾ?

|

ಇಂದಿನ ಯುಗದಲ್ಲಿ ಪ್ರತಿಯೊಬ್ಬರೂ ವಿಮೆ ಮಾಡಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ. ನಮ್ಮ ಜೀವನ, ಆರೋಗ್ಯ, ವಾಹನ, ಮನೆ, ಮಕ್ಕಳ ಭವಿಷ್ಯ ಇತ್ಯಾದಿ ವಿಮೆಗಳನ್ನು ಮಾಡಿಸುವುದು ಸಾಮಾನ್ಯ. ಆದರೆ ಇದನ್ನು ಹೊರತುಪಡಿಸಿ ತುಂಬಾ ಮೌಲ್ಯಯುತವಾಗಿರುವ ನಿಮ್ಮ ದೇಹ ಎಂಬ ಆಸ್ತಿ ಮೇಲೆ ವಿಮೆ ಮಾಡಿಸುತ್ತಿದ್ದಿರಾ?

ವಿಮೆ ಎಂದಾಕ್ಷಣ ಸಾಮಾನ್ಯವಾಗಿ ಆರೋಗ್ಯ, ವಾಹನ, ಮನೆ, ಮಕ್ಕಳ ಭವಿಷ್ಯ ಇತ್ಯಾದಿ ಸಂಗತಿಗಳ ಬಗ್ಗೆ ವಿಚಾರ ಮಾಡುತ್ತೇವೆ. ಆದರೆ ನೀವೊಬ್ಬ ಹಾಡುಗಾರ ಆಗಿದ್ದೂ ನಿಮ್ಮ ಮದುರ ಧ್ವನಿ ಹಾಳಾದರೆ? ನಿಮ್ಮ ಮದುರ ಧ್ವನಿಗಾಗಿ ಒಂದು ವಿಮೆ ಮಾಡಿದರೆ ಚೆನ್ನ ಅಲ್ಲವೆ?

ಹೀಗಾಗಿ ಕ್ರೀಡಾಪಟುಗಳು, ಹಾಡುಗಾರರು ಇಲ್ಲವೇ ಸೆಲೆಬ್ರಿಟಿಗಳು ತಮ್ಮ ಧ್ವನಿ, ದೇಹದ ಅಂಗಗಳ ಮೇಲೆ ಇನ್ಸೂರೆನ್ಸ್ ಮಾಡಿಸುವುದು ಇತ್ತಿಚಿನ ಹೊಸ ಟ್ರೆಂಡ್ ಆಗಿದೆ.
ಭಾರತದಲ್ಲಿ ಲಭ್ಯ ಇರುವ ಇಂತಹ ವಿಶೇಷ ಹಾಗೂ ಆಕರ್ಷಕ ವಿಮೆಗಳ ಪಟ್ಟಿ ಇಲ್ಲಿದೆ ನೋಡಿ...

1. ದೇಹದ ಭಾಗಗಳ ಮೇಲೆ ವಿಮೆ

1. ದೇಹದ ಭಾಗಗಳ ಮೇಲೆ ವಿಮೆ

ಜಗತ್ತಿನ ಹಲವು ಪ್ರಸಿದ್ದ ಸೆಲೆಬ್ರಿಟಿಗಳು, ಕ್ರೀಡಾಪಟುಗಳು ತಮ್ಮ ದೇಹದ ಅಂಗದ ಸುರಕ್ಷತೆಗಾಗಿ ವಿಮೆಯನ್ನು ಮಾಡಿಸಿದ್ದಾರೆ. ಸೊಂಟ, ಕೈಕಾಲುಗಳು, ನಗು, ಎದೆ, ಮುಖ ಇತ್ಯಾದಿ ಅಂಗಗಳ ಮೇಲೆ ವಿಮೆಯನ್ನು ಮಾಡಿಸಿದ್ದಾರೆ. ಸಾನಿಯಾ ಮಿರ್ಜಾ ತಮ್ಮ ಕೈಗಳ ಮೇಲೆ ವಿಮೆಯನ್ನು ಮಾಡಿಸಿದ್ದಾರೆ. ಬಾಕ್ಸರ್ ಪಟು ವಿಜೇಂದರ್ ಸಿಂಗ್ ಇದೇ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ರಾಖಿ ಸಾವಂತ್ ತಮ್ಮ ಇಡೀ ದೇಹದ ಮೇಲೆ ವಿಮೆ ಮಾಡಿಸುವುದ್ದಾಗಿ ಹೇಳಿದ್ದರು. 

2. ಧ್ವನಿ ವಿಮೆ

2. ಧ್ವನಿ ವಿಮೆ

ನಮ್ಮ ದೇಶದಲ್ಲಿ ತುಂಬಾ ಜನರು ಸಂಗೀತ, ಗಾಯನವನ್ನು ಆರಾಧಿಸುತ್ತಾರೆ. ಲತಾ ಮಂಗೇಶ್ಕರ್ ದೇಶ ಕಂಡ ಅದ್ಬುತ ಎವರ್ ಗ್ರೀನ್ ಹಾಡುಗಾರ್ತಿ. ಇವರು ಧ್ವನಿ ವಿಮೆಯನ್ನು ಮಾಡಿಸಿಕೊಂಡಿದ್ದಾರೆ. ಹಾಡುಗಾರರಾದವರು ತಮ್ಮ ಧ್ವನಿಯನ್ನು ಮದುರವಾಗಿ ಇಟ್ಟುಕೊಳ್ಳಬೇಕಾಗುತ್ತದೆ. ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ತಮ್ಮ ಧ್ವನಿ ಮೇಲೆ ವಿಮೆಯನ್ನು ಮಾಡಿಸಿದ್ದಾರೆ.

3. ಸಾಕುಪ್ರಾಣಿ ವಿಮೆ

3. ಸಾಕುಪ್ರಾಣಿ ವಿಮೆ

ಜನರು ತಮ್ಮ ಕುಟುಂಬವನ್ನು, ಮಕ್ಕಳನ್ನು ಪ್ರೀತಿಸುವಂತೆ ಸಾಕುಪ್ರಾಣಿಗಳನ್ನು ಪ್ರೀತಿಸುತ್ತಾರೆ. ಇತ್ತಿಚಿನ ದಿನಮಾನಗಳಲ್ಲಿ ಸಾಕುಪ್ರಾಣಿ ವಿಮೆ ಮಾಡುವುದು ಸಾಮಾನ್ಯವಾಗಿದೆ. ಸಾಕುಪ್ರಾಣಿ ವಿಮೆ ಹಲವು ಬಗೆಯ ವಿಮೆಗಳನ್ನು ಹಾಗೂ ಸೌಲಭ್ಯಗಳನ್ನು ಹೊಂದಿದೆ. ನಿಮ್ಮ ಸಾಕುಪ್ರಾಣಿ ಸತ್ತು/ಕಳೆದು ಹೋದಲ್ಲಿ ಅದರ ಬದಲಿಗೆ ಇನ್ನೊಂದು ಪಡೆಯಬಹುದು. ವೈದ್ಯಕೀಯ ವೆಚ್ಚ ಭರಿಸುವಂತಹ ವಿಮೆಗಳನ್ನು ಆಯ್ಕೆ ಮಾಡಬಹುದು.

4. ವೆಡ್ಡಿಂಗ್ ವಿಮೆ

4. ವೆಡ್ಡಿಂಗ್ ವಿಮೆ

ಮದುವೆ ಜೀವನದಲ್ಲಿ ನಡೆಯುವ ಒಂದು ಸುಮದುರ ಮರೆಯಲಾಗದ ಘಳಿಗೆ. ಮದುವೆಗೆ ಭಾರತದಲ್ಲಿ ವಿಶೇಷ ಸ್ಥಾನಮಾನವಿದ್ದು, ತುಂಬಾ ಅದ್ದೂರಿಯಾಗಿ ಮಾಡಲಿಚ್ಚಿಸುತ್ತಾರೆ. ಹಾಗಿದ್ದರೆ ವೆಡ್ಡಿಂಗ್ ವಿಮೆ ಮಾಡಿಸಿದರೆ ಹೇಗೆ ಅಲ್ಲವೆ?
ಹಣಕಾಸು ವೈಫಲ್ಯದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಹಾಗೂ ಗಂಡಾಂತರಗಳನ್ನು ಎದುರಿಸಲು ವೆಡ್ಡಿಂಗ್ ವಿಮೆಗಳನ್ನು ಮಾಡಿಸುವುದು ಉತ್ತಮ ಆಯ್ಕೆ.

5. ಕೌನ್ ಬನೇಗಾ ಕರೋಡ್ ಪತಿ ವಿಮೆ

5. ಕೌನ್ ಬನೇಗಾ ಕರೋಡ್ ಪತಿ ವಿಮೆ

ಕೌನ್ ಬನೇಗಾ ಕರೋಡ್ ಪತಿ ಷೋ ಮೇಲೆ ಕೂಡ ವಿಮೆ ಮಾಡಿಸಬಹುದಾಗಿದೆ. ಸ್ಪರ್ಧಾರ್ತಿಗಳು ಷೋ ಗೆದ್ದರೆ, ಷೋ ಇನ್ಸೂರೆನ್ಸ್ ಏಜೆನ್ಸಿಯವರು ನಂತರದಲ್ಲಿ ಷೋ ನಡೆಸುವ ನಿರ್ಮಾಪಕರಿಗೆ ಹಣವನ್ನು ಕೊಡಬೇಕಾಗುತ್ತದೆ. ಸಂಭಾವ್ಯ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲು ಕಂಪನಿಗಳಿಗೆ ರಕ್ಷಣಾತ್ಮಕ ಮೊತ್ತವನ್ನು ಸ್ಪರ್ಧೆ ವಿಮೆ ಅಡಿಯಲ್ಲಿ ಒದಗಿಸಲಾಗುತ್ತದೆ.

ಮುಕ್ತಾಯ:

ಮುಕ್ತಾಯ:

ನಿಮ್ಮ ದೇಹ ತುಂಬಾ ಮೌಲ್ಯಯುತವಾಗಿರುವ ಆಸ್ತಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಹೀಗಾಗಿ ನಿಮ್ಮ ದೇಹದ ಆಸ್ತಿ ಮೇಲೆ ವಿಮೆ ಮಾಡಿಸಲು ನೀವು ಬಯಸಿದಲ್ಲಿ ಸರಿಯಾದ ಹಾಗೂ ಉತ್ತಮವಾದ ಪಾಲಿಸಿಗಳನ್ನು ಆಯ್ಕೆ ಮಾಡಿ.

English summary

You Won't Believe, These Insurance Covers Exist In India

Rarely do people own a car, house, bike or a building etc without having insurance to protect them from the worst that can happen. But are you covered for your most valuable assets? You Won't Believe, These Insurance Covers Exist In India.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X